ಯಳಂದೂರು: ಪಶ್ಚಿಮ ಏಷ್ಯಾ ಸಂಘರ್ಷದಿಂದ ದಿನೇ ದಿನೇ ಮೊಟ್ಟೆಧಾರಣೆ ಕುಸಿಯುತ್ತಿದೆ. ಇದರಿಂದ ಕೋಳಿ ಸಾಕಣೆದಾರರಿಗೆ ನಷ್ಟದ ಭೀತಿ ಆವರಿಸಿದೆ. ಕೋಳಿ ಆಹಾರದ ಬೆಲೆ ಹೆಚ್ಚಳ, ನಿರ್ವಹಣೆ ಕೊರತೆ ಹಾಗೂ ಸ್ಥಿರ ಬೆಲೆ ಇಲ್ಲದೆ ಮೊಟ್ಟೆ ಉದ್ಯಮದಾರರಲ್ಲಿ ಕಳವಳ ಉಂಟಾಗಿದೆ.

ತಾಲ್ಲೂಕಿನಲ್ಲಿ ಕೋಳಿ ಫಾರಂಗಳ ಸಂಖ್ಯೆ ಕಡಿಮೆ ಇದೆ. ಸ್ಥಳೀಯ ಬೇಡಿಕೆ, ಶಾಲೆಗಳಿಗೆ ಹಂಚಿಕೆ ಹಾಗೂ ಅಂಗಡಿಗಳಿಗೆ ದಿನನಿತ್ಯ 5 ರಿಂದ 6 ಸಾವಿರಕ್ಕೂ ಹೆಚ್ಚು ಮೊಟ್ಟೆಗೆ ಬೇಡಿಕೆಯಿತ್ತು. ಜಿಲ್ಲೆ ಹಾಗೂ ನೆರೆಯ ಗಡಿ ರಾಜ್ಯ ತಮಿಳುನಾಡು ಮತ್ತು ಕೇರಳ ಮಾರುಕಟ್ಟೆಗಳಿಗೂ ಮೊಟ್ಟೆ ಪೂರೈಕೆ ಆಗುತ್ತಿತ್ತು. ಜಾತ್ರೆ, ಹಬ್ಬಗಳ ಸಮಯದಲ್ಲಿ ಗ್ರಾಹಕರು ಮೊಟ್ಟೆಗೆ ಮುಗಿಬೀಳುತ್ತಾರೆ. ಆದರೆ, ಮೊಟ್ಟೆ ಉತ್ಪಾದನೆ ಸ್ಥಿರವಾಗಿದ್ದು, ಧಾರಣೆ ಮಾತ್ರ ಕುಸಿಯುತ್ತ ಸಾಗಿದೆ.

‘ಅಂಗಡಿಗಳಲ್ಲಿ ಡಿಸೆಂಬರ್– ಫೆಬ್ರುವರಿ ಅಂತ್ಯದ ನಡುವೆ 1 ಮೊಟ್ಟೆಗೆ ₹7 ದರದಲ್ಲಿ ಮಾರಾಟ ಆಗುತ್ತಿತ್ತು. ಕೊಲ್ಲಿ ದೇಶಗಳಲ್ಲಿ ಯುದ್ಧ ಆರಂಭವಾದ ನಂತರ ಮೊಟ್ಟೆ ಬೆಲೆ ₹4.50 ರಿಂದ ₹5ರೊಳಗೆ ಗಿರಿಕಿ ಹೊಡೆಯುತ್ತಿದೆ. ಸ್ಥಿರ ಬೆಲೆ ಸಿಗದೆ, ಮೊಟ್ಟೆ ಕೋಳಿ ಸಾಕಣೆದಾರರು ನಷ್ಟ ಅನುಭವಿಸಬೇಕಿದೆ. ಕೋಳಿ ಸಾಕಣೆಗೆ ಆಳುಗಳ ಖರ್ಚು ಹಾಗೂ ಔಷಧೋಪಚಾರ ಮತ್ತಿತರ ಖರ್ಚಿನಲ್ಲಿ ಏರಿಕೆಯಾಗಿದ್ದು, ಕುಕ್ಕುಟೋದ್ಯಮ ನಡೆಸುವುದು ಕಷ್ಟವಾಗಿದೆ’ ಎಂದು ದುಗ್ಗಹಟ್ಟಿ ಪೌಲ್ಟ್ರಿ ಫಾರಂ ಮಾಲೀಕ ಗಂಗಾಧರಸ್ವಾಮಿ ಅಳಲು ತೋಡಿಕೊಂಡರು.

‘ಪ್ರತಿ ದಿನ 3 ಸಾವಿರಕ್ಕೂ ಹೆಚ್ಚಿನ ಮೊಟ್ಟೆ ಸಂಗ್ರಹವಾಗುತ್ತದೆ. ಬೇಸಿಗೆ ಸಮಯದಲ್ಲಿ ಮೊಟ್ಟೆ ಉತ್ಪಾದನೆ ಸಹಜವಾಗಿ ಕುಸಿಯುತ್ತದೆ. ಈ ಸಮಯಲ್ಲಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗಬೇಕು. ಆದರೆ, ಶಾಲೆಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, ಪ್ರತಿ ನಿತ್ಯ ಮೊಟ್ಟೆ ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ತಮಿಳುನಾಡಿನ ನಾಮಕಲ್ ಮಾರುಕಟ್ಟೆ ಮೂಲಕ ಅರಬ್ ರಾಷ್ಟ್ರಗಳಿಗೆ ಪೂರೈಕೆಯಾಗುವ ಮೊಟ್ಟೆಯಲ್ಲಿಯೂ ಬೇಡಿಕೆ ಕುಸಿದಿದೆ. ಇದರ ಪರಿಣಾಮ ಸ್ಥಳೀಯ ಮಾರುಕಟ್ಟೆ ಮೇಲೆ ಆಗಿದೆ’ ಎನ್ನುತ್ತಾರೆ ಮಾರಾಟಗಾರರು.

ರಾಷ್ಟ್ರೀಯ ಮೊಟ್ಟೆ ಧಾರಣೆ ಸಮಿತಿ ನಿರ್ಣಯ ಮಾಡಿರುವ ಅನುಸಾರ ತಿಂಗಳ ಹಿಂದೆ ₹5.50 ರಿಂದ ₹6ರ ತನಕ ಬೆಲೆ ಇತ್ತು. ಪ್ರಸ್ತುತ ₹4.50 ರಿಂದ ₹4.90ಕ್ಕೆ ಧಾರಣೆ ಕುಸಿದಿದೆ. ಇದರಿಂದ ಮೊಟ್ಟೆ ವಹಿವಾಟಿನ ಮೇಲೆ ಕಾರ್ಮೋಡ ಕವಿದಿದೆ ಎನ್ನುತ್ತಾರೆ ಅಂಗಡಿ ಮಾಲೀಕರು.

ಮೊಟ್ಟೆಯನ್ನು ಹೆಚ್ಚು ದಿನ ಸಂಗ್ರಹಿಸಿ ಇಡಲಾಗದು. ಮೂರು ನಾಲ್ಕು ದಿನಗಳಲ್ಲಿ ಮಾರಾಟ ಮಾಡಬೇಕು. ಬೇಸಿಗೆ ಕಾವು ಹೆಚ್ಚುತ್ತಿದ್ದು, ಮೊಟ್ಟೆ ಸೇವನೆ ಕಡಿಮೆಯಾಗುತ್ತಿದೆ. ಆದರೂ, ಬೆಲೆ ಕುಸಿತದ ಲಾಭ ಮಾತ್ರ ಇನ್ನೂ ಗ್ರಾಹಕರಿಗೆ ವರ್ಗಾವಣೆ ಆಗದೆ ಇರುವುದು ಕೊಳ್ಳುವವರಲ್ಲಿ ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಮಾಂಬಳ್ಳಿ ಗ್ರಾಮದ ಶಾಂತಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.