ಯಳಂದೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪರವಾನಗಿ ಭೂ ಮಾಪಕರು ಎರಡು ತಿಂಗಳುಗಳಿಂದ ಮುಷ್ಕರ ನಡೆಸುತ್ತಿರುವ ಪರಿಣಾಮ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಗಳ ಕೆಲಸ ಕಾರ್ಯಕ್ಕೆ ಹಿನ್ನಡೆಯಾಗಿದೆ.

ಹೊಲ, ಜಮೀನು ಖರೀದಿ, ದಾರಿ ನಕ್ಷೆ, ಅಳತೆ ಹಾಗೂ ಹಕ್ಕು ಬದಲಾವಣೆಗಳ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದು ಕೃಷಿಕರಿಗೆ ಹಾಗೂ ನಾಗರಿಕರಿಗೆ ಸಮಸ್ಯೆಯಾಗಿದೆ.

ತಾಲ್ಲೂಕಿನಲ್ಲಿ ಜಮೀನು ಸರ್ವೆ, ಭೂ ಒಡೆತನದ ಹಕ್ಕು, ಹದ್ದುಬಸ್ತು ಸಹಿತ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಸರ್ವೆಗೆ ಅಧಿಕಾರಿಗಳು ಯಾವಾಗ ಬರುತ್ತಾರೆ ಎಂದು ಹಾದಿ ಕಾಯುವಂತಾಗಿದೆ.

ಭೂಮಾಪಕರ ಮುಷ್ಕರದಿಂದ ನಿಧಾನಗತಿಯಲ್ಲಿ ಸರ್ವೆ ಕಾರ್ಯ ಸಾಗಿದ್ದು ಅರ್ಜಿದಾರರು ಅಧಿಕಾರಿಗಳ ಮೇಲೆ ಒತ್ತಡ ಹಾಕಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ.

ಭೂ ಮಾಪನ ಇಲಾಖೆಯಲ್ಲಿ ನೌಕರರ ಕೊರತೆ ಹೆಚ್ಚಾಗಿದೆ. ಸರ್ಕಾರಿ ಭೂ ಮಾಪಕರು ಮತ್ತು ಪರವಾನಗಿ ಭೂ ಮಾಪಕರು ಸೇರಿ 6 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 3 ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು ಉಳಿದ ಸರ್ಕಾರಿ ಭೂ ಮಾಪಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರ್ಧದಷ್ಟು ನೌಕರರು ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿರುವುದರಿಂದ ವಿಳಂಬವಾಗುತ್ತಿದೆ.

ಪಾಳಿಯ ಆಧಾರದ ಮೇಲೆ ಹೆಚ್ಚು ಕೆಲಸ ಮಾಡಿ ಅಳತೆ, ಪೋಡಿ ಕಾರ್ಯ ಪೂರೈಸಬೇಕಾದ ಒತ್ತಡದಲ್ಲಿ ನೌಕರರು ಇದ್ದಾರೆ ಎನ್ನುತ್ತಾರೆ ಭೂ ಮಾಪನ ಇಲಾಖೆ ಅಧಿಕಾರಿಗಳು.

‘ಪ್ರಸ್ತುತ ಭೂ ಮಾಪನ ಕಾರ್ಯಕ್ಕೆ ₹ 1,200 ಸೇವಾ ಶುಲ್ಕ ಸಿಗುತ್ತದೆ. ವ್ಯಾಜ್ಯ ಇಲ್ಲವೆ ವಿವಾದ ಉಂಟಾದರೆ ಕೇವಲ ₹ 300 ಮಾತ್ರ ಕೈಸೇರುತ್ತದೆ. ಆದರೆ, ಸರ್ಕಾರಿ ಭೂ ಮಾಪಕರಿಗೆ ಇಂತಹ ಸಮಸ್ಯೆ ಕಾಡದು. ಅವರಷ್ಟೆ ತರಬೇತಿ ಹಾಗೂ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ವೇತನ ತಾರತಮ್ಯ ಮಾಡಲಾಗುತ್ತಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಪರವಾನಗಿ ಭೂ ಮಾಪಕರು.

ಪರವಾನಗಿ ಭೂ ಮಾಪಕರನ್ನು ಸರ್ಕಾರಿ ಭೂಮಾಪಕರಾಗಿ ಕಾಯಂ ಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಆರೋಗ್ಯ ವಿಮೆ, ಪಿಎಫ್, ಭತ್ಯೆ ಹಾಗೂ ಸೇವಾ ಭದ್ರತೆ ನೀಡಬೇಕು, ಸೇವಾ ಶುಲ್ಕ ಏರಿಕೆ ಮಾಡಬೇಕು, ಬಾಂದು ಜವಾನರ ನೇಮಕ ಮಾಡಬೇಕು, ಬಾಕಿ ಸೇವಾ ಶುಲ್ಕ ಪಾವತಿ, ಪಿಂಚಣಿ, ಭವಿಷ್ಯ ನಿಧಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತಾರೆ ಭೂ ಮಾಪಕರು.

ಭೂ ಮಾಪನ ಇಲಾಖೆಯಿಂದ 11 ‘ಇ’ ನಕ್ಷೆ, ತತ್ಕಾಲ್ ಪೋಡಿ, ಭೂ ಪರಿವರ್ತನೆ ನಕ್ಷೆ, ಇ ಸ್ವತ್ತು, ತಕರಾರು, ಸ್ವಾಮಿತ್ವ ಯೋಜನೆ, ಕೆರೆ, ಕಟ್ಟೆ, ದೇವಳ, ಸ್ಮಶಾನ ಅಳತೆ, ದರಖಾಸ್ತು ಪೋಡಿ (6-10) ಹದ್ದುಬಸ್ತು, ಮನೆಮನೆಗೆ ಹಕ್ಕು ವಿತರಣೆ, ಅಟ್ಲಾಸ್ ತಯಾರಿ, ದಾಖಲೆ ಡಿಜಿಟಲೀಕರಣ ಸೇರಿದಂತೆ 18 ಸೇವೆಗಳು ದೊರೆಯುತ್ತಿದ್ದು ಮುಷ್ಕರದಿಂದ ಎಲ್ಲ ಸೇವೆಗಳು ವ್ಯತ್ಯಯವಾಗಿದೆ.

ನಿತ್ಯ ಅಲೆದಾಟ: ಭೂ ಮಾಪಕರ ಮುಷ್ಕರದಿಂದ ಜಮೀನುಗಳ ಅಳತೆ ಕಾರ್ಯ ವಿಳಂವಾಗಿದ್ದು ಖಾತೆ ಮಾಡಿಸಿಕೊಳ್ಳುವ ರೈತರು ಅಲೆಯುವಂತಾಗಿದೆ. ಉಳ್ಳವರು ಅಧಿಕಾರಿಗಳ ಮೇಲೆ ಒತ್ತಡ ತಂದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಬಡ ರೈತರಿಗೆ ಸರ್ಕಾರದ ಸೌಲಭ್ಯ ಪಡೆಯಲು ತೊಂದರೆ ಆಗುತ್ತಿದೆ ಎಂದು ರೈತ ಮುಖಂಡ ಗೌಡಹಳ್ಳಿ ಸೋಮಣ್ಣ ದೂರುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-37-1500482772

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.