ಜಿಲ್ಲೆಯಾದ್ಯಂತ ಸಂಭ್ರಮದ ಭೀಮನ ಅಮಾವಾಸ್ಯೆ

7
ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ

ಜಿಲ್ಲೆಯಾದ್ಯಂತ ಸಂಭ್ರಮದ ಭೀಮನ ಅಮಾವಾಸ್ಯೆ

Published:
Updated:
Deccan Herald

ಚಾಮರಾಜನಗರ: ಜಿಲ್ಲೆಯಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನ, ಕೊಳದ ಗಣಪತಿ, ಸಂತೇಮರಹಳ್ಳಿ ವೃತ್ತದ ಆದಿಶಕ್ತಿ ದೇವಸ್ಥಾನ, ಚೆನ್ನಪ್ಪನಪುರ ವೀರಭದ್ರೇಶ್ವರ, ಹರದನಹಳ್ಳಿಯ ದಿವ್ಯ ಲಿಂಗೇಶ್ವರ, ಅಮಚವಾಡಿಯ ಶನೀಶ್ವರ, ಮಂಗಲ ಗ್ರಾಮದ ಶಂಕರದೇವನ ಬೆಟ್ಟ, ಸೋಮವಾರಪೇಟೆ ಸಮಿಪದ ಶಿರಗಳ್ಳಿಯ ಲಕ್ಷ್ಮಿದೇವಿ ಅಮ್ಮ ಹಾಗೂ ಬೋಮ್ಮೇಶ್ವರ ದೇವಸ್ಥಾನ, ಯಡಬೆಟ್ಟದ ಮಹದೇಶ್ವರ ದೇವಸ್ಥಾನ, ಕೂಡ್ಲೂರು ಮಂಟೆಸ್ವಾಮಿ, ಮಹದೇಶ್ವರ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವರು.

ಅನ್ನ ಸಂತರ್ಪಣೆ: ಪಟ್ಟಣ ಸಮೀಪದ ಯಡಬೆಟ್ಟ ಮಹದೇವಸ್ವಾಮಿ ದೇವಸ್ಥಾನದಲ್ಲಿ ತಾಲ್ಲೂಕಿನ ಕಡುವಿನ ಕಟ್ಟೆ (ಕೆ.ಕೆ. ಹುಂಡಿ) ಗ್ರಾಮದವರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಭಕ್ತರೊಂದಿಗೆ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸೇವಿಸಿದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !