ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ. ಜಿಲ್ಲೆಯಲ್ಲಿ ಶೇ 77.63 ಮತದಾನ

ಹಕ್ಕು ಚಲಾಯಿಸಿ ಸಂಭ್ರಮಿಸಿದ ಮತದಾರರು, ಕಳೆದ ಬಾರಿಗಿಂತ ಶೇ 3.15ರಷ್ಟು ಏರಿಕೆ
Last Updated 13 ಮೇ 2018, 7:03 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಬಿರುಸಿನ ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು ಶೇಕಡ 77.63ರಷ್ಟು ಮತದಾನ ನಡೆದಿದೆ. ಜಿಲ್ಲೆಯ 1,858 ಮತಗಟ್ಟೆಗಳಲ್ಲೂ ಯಾವುದೇ ರೀತಿಯ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.

ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆಗೆ ಆರಂಭ ವಾದ ಮತದಾನ ಸಂಜೆ 6 ಗಂಟೆಗೆ ಅಂತ್ಯಗೊಂಡಿತ್ತು. ಈ ಚುನಾವಣೆಯಲ್ಲಿ ಜಿಲ್ಲೆಯ 17,11,848 ಮಂದಿ ಮತ ಚಲಾಯಿಸುವ ಅವಕಾಶ ಪಡೆದಿ ದ್ದರು. ಈ ಪೈಕಿ ಶೇ 77.63ರಷ್ಟು ಮಂದಿ ಮತಗಟ್ಟೆಗೆ ಧಾವಿಸಿ ಹಕ್ಕು ಚಲಾ ಯಿಸಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 74.48ರಷ್ಟು ಮತದಾನ ನಡೆದಿತ್ತು. ಈ ಬಾರಿ ಮತ ಚಲಾವಣೆಯಲ್ಲಿ ಶೇ 3.15ರಷ್ಟು ಏರಿಕೆಯಾಗಿದೆ.

2013ರ ಚುನಾವಣೆಗೆ ಹೋಲಿಸಿ ದರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಮತದಾ ನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಳ್ತಂಗಡಿಯಲ್ಲಿ ಅತ್ಯಧಿಕ, ಶೇ 5.92ರಷ್ಟು ಏರಿಕೆ ಕಂಡುಬಂದಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ 3.08, ಮಂಗಳೂರು ದಕ್ಷಿಣದಲ್ಲಿ ಶೇ 2.95, ಬಂಟ್ವಾಳದಲ್ಲಿ ಶೇ 2.57, ಪುತ್ತೂರಿನಲ್ಲಿ ಶೇ 2.16, ಸುಳ್ಯದಲ್ಲಿ ಶೇ 1.93, ಮಂಗಳೂರು ಕ್ಷೇತ್ರದಲ್ಲಿ ಶೇ 1.48 ಮತ್ತು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ 1.17ರಷ್ಟು ಏರಿಕೆ ದಾಖಲಾಗಿದೆ. ಸುಳ್ಯ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಮತದಾನ ನಡೆದಿದ್ದರೆ, ಮಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಮತದಾನ ನಡೆದಿದೆ.

ಆರಂಭದಲ್ಲಿ ಮತದಾನದ ಪ್ರಮಾಣದಲ್ಲಿ ನಿಧಾನಗತಿಯ ಏರಿಕೆ ಕಂಡುಬಂತು. ಬೆಳಿಗ್ಗೆ 9 ಗಂಟೆಗೆ ಶೇ 7.32ರಷ್ಟು ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರು. 11 ಗಂಟೆ ವೇಳೆಗೆ ಶೇ 24.09ರಷ್ಟು ತಲುಪಿದ ಮತದಾನದ ಪ್ರಮಾಣ, ಮಧ್ಯಾಹ್ನ 1 ಗಂಟೆಗೆ ಶೇ 46ಕ್ಕೆ ಏರಿಕೆ ಆಯಿತು. ಮಧ್ಯಾಹ್ನ 3ಕ್ಕೆ ಶೇ 55.26ಕ್ಕೆ ಹೆಚ್ಚಳವಾಗಿದ್ದು, ಸಂಜೆ 5ಕ್ಕೆ ಶೇ 72.05ರ ಗಡಿ ತಲುಪಿತು. ಸಂಜೆ 6 ಗಂಟೆಗೆ ಮತದಾನ ಪೂರ್ಣಗೊಂಡಾಗ ಶೇ 77.63ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಬಜತ್ತೂರು, ಹಿರೇಬಂಡಾಡಿ ಸೇರಿದಂತೆ ಜಿಲ್ಲೆಯ ಕೆಲವೆಡೆ ಸಂಜೆ 6 ಗಂಟೆಯ ಸುಮಾರಿಗೆ ಅಧಿಕ ಸಂಖ್ಯೆಯಲ್ಲಿ ಜನರು ಮತಗಟ್ಟೆಯತ್ತ ದೌಡಾಯಿಸಿದ್ದರು. 6 ಗಂಟೆಗೂ ಮೊದಲು ಮತಗಟ್ಟೆ ಆವರಣ ಪ್ರವೇಶಿಸಿದ ಎಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಯಿತು. ಕೆಲವು ಕಡೆಗಳಲ್ಲಿ ಕೊನೆ ಕ್ಷಣದಲ್ಲಿ ನೂರಾರು ಜನರು ಬಂದ ಕಾರಣ ರಾತ್ರಿ 8.30ರವರೆಗೂ ಮತದಾನ ನಡೆಯಿತು.

ಮತಯಂತ್ರದಲ್ಲಿ ದೋಷ: ಪುತ್ತೂರು ವಿಧಾನಸಭಾ ಕ್ಷೇತ್ರದ ನೆಕ್ಕಿಲಾಡಿ (ಮತಗಟ್ಟೆ ಸಂಖ್ಯೆ 33) ಮತಗ ಟ್ಟೆಯಲ್ಲಿ ಎರಡು ಬಾರಿ ವಿದ್ಯುನ್ಮಾನ ಮತ ಯಂತ್ರದಲ್ಲಿ ಲೋಪ ಕಂಡುಬಂತು. ಪುತ್ತೂರು ಕ್ಷೇತ್ರದ ವ್ಯಾಪ್ತಿಯ ಉಪ್ಪಿನಂಗಡಿ, ಬೆಳ್ತಂಗಡಿ ಕ್ಷೇತ್ರದ ವ್ಯಾಪ್ತಿಯ ಮುಂಡಾಜೆ ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು.

ಪುತ್ತೂರು ಕ್ಷೇತ್ರದ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಮತಗಟ್ಟೆಯಲ್ಲಿ ಪ್ರಾಯೋಗಿಕ ಮತದಾನದ ಅವಧಿ ಯಲ್ಲೇ ಮತಯಂತ್ರದಲ್ಲಿ ದೋಷ ಕಂಡು ಬಂತು. ತಕ್ಷಣವೇ ಸೆಕ್ಟರ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮತಯಂತ್ರ ಬದಲಿಸಿ ಸುಗಮ ಮತದಾನಕ್ಕೆ ವ್ಯವಸ್ಥೆ ಮಾಡಿ ದರು. ನಗರದ ಕಪಿ ತಾನಿಯೊ ಶಾಲೆ ಮತ್ತು ಬೆಂಗರೆ ಮತ ಗಟ್ಟೆಗಳಲ್ಲೂ ಮತಯಂತ್ರಗಳಲ್ಲಿ ದೋಷ ಕಾಣಿಸಿತ್ತು.

‘ಮತದಾನದ ಅವಧಿಯಲ್ಲಿ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ 24 ಕಂಟ್ರೋಲ್‌ ಯೂನಿಟ್, 21 ಬ್ಯಾಲೆಟ್ ಯೂನಿಟ್‌ ಮತ್ತು 42 ವಿವಿಪ್ಯಾಟ್‌ ಯಂತ್ರಗಳಲ್ಲಿ ದೋಷ ಕಾಣಿಸಿಕೊಂಡಿತ್ತು. ತಕ್ಷ ಣವೇ ಆಯಾ ಮತಗಟ್ಟೆಗಳಿಗೆ ತಾಂತ್ರಿಕ ತಜ್ಞರನ್ನು ಕಳುಹಿಸಿ, ಪರಿ ಶೀಲನೆ ನಡೆಸಿದ ಬಳಿಕ ದೋಷ ಕಾಣಿಸಿಕೊಂಡಿದ್ದ ಎಲ್ಲ ಯಂತ್ರಗಳನ್ನೂ ಬದಲಾವಣೆ ಮಾಡಲಾಗಿದೆ. ಯಾವುದೇ ಮತಗಟ್ಟೆಯಲ್ಲೂ ಮತದಾನಕ್ಕೆ ಅಡ್ಡಿಯಾಗಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಯೂ ಆಗಿ ರುವ ಜಿಲ್ಲಾಧಿಕಾರಿ ಎಸ್‌.ಸಸಿಕಾಂತ್ ಸೆಂಥಿಲ್‌ ತಿಳಿಸಿದ್ದಾರೆ.

ಬೆಳ್ತಂಗಡಿ ಕ್ಷೇತ್ರದ ಅಂಡಿಂಜೆ ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಳಾಲು ಮತಗಟ್ಟೆಯಲ್ಲಿ ಮತದಾನಕ್ಕೆ ಬಂದಿದ್ದ ತಲಾ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುತ್ತೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಎರಡು ಪ್ರಕರಣಗಳಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT