ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದ ಶೌಚಾಲಯ; ಬಯಲೇ ಗತಿ

ಪುರಸಭೆ ವಿರುದ್ದ ಆಕ್ರೋಶ
Last Updated 27 ಮೇ 2018, 8:32 IST
ಅಕ್ಷರ ಗಾತ್ರ

ಮುಗಳಖೋಡ: ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲದ್ದರಿಂದ ಹಾಗೂ ಇರುವ ಎರಡು ಶೌಚಾಲಯಗಳಿಗೆ ನೀರಿನ ಕೊರತೆಯಿಂದ ಸಾರ್ವಜನಿಕರು ಇಂದಿಗೂ ಶೌಚಕ್ಕೆ ಬಯಲನ್ನೇ ನಂಬಿಕೊಂಡಿದ್ದಾರೆ.

ಪಟ್ಟಣ ಪಂಚಾಯ್ತಿಯಾಗಿ ಮೂರು ವರ್ಷ ಕಳೆದರೂ ಅಗತ್ಯಕ್ಕೆ ತಕ್ಕಂತೆ ಶೌಚಾಲಯಗಳ ವ್ಯವಸ್ಥೆ ಮಾಡಿಲ್ಲ. 18ನೇ ವಾರ್ಡ್‌ನಲ್ಲಿ  ಮಹಿಳೆಯರಿಗೆ ಶೌಚಾಲಯ ನಿರ್ಮಿಸಲಾಗಿದ್ದರೂ ಅದಕ್ಕೆ ನೀರಿನ ಸೌಲಭ್ಯ ಒದಗಿಸಿಲ್ಲ. ಸ್ವಚ್ಛವಾಗಿಟ್ಟಿಲ್ಲ. ಗಬ್ಬೆದ್ದು ನಾರುತ್ತಿರುವ ಶೌಚಾಲಯದ ಸಹವಾಸವೇ ಬೇಡ ಎಂದು ಮಹಿಳೆಯರು ಬಯಲಿಗೆ ತೆರಳುತ್ತಾರೆ.

ಪಟ್ಟಣ ಬೆಳೆದಂತೆ ಸ್ವಚ್ಛತೆ, ಶೌಚಾಲಯಗಳು ನಿರ್ವಹಣೆ ಇಲ್ಲದೇ ಇರುವುದರಿಂದ ಎಲ್ಲೆಡೆ ದುರ್ನಾತ ಬೀರಿದೆ. ಮಹಿಳೆಯರು ನಿತ್ಯ ಕರ್ಮಕ್ಕೆ ಹರಸಾಹಸ ಪಡುವಂತಾಗಿದೆ. ರಸ್ತೆಯ ಬದಿ ಗಿಡಗಂಟಿಗಳ ಮರೆಯನ್ನೇ ಆಶ್ರಯಿಸುವಂತಾಗಿರುವುದರಿಂದ ಮಹಿಳೆಯರು ಪುರಸಭೆಗೆ ಶಾಪ ಹಾಕುತ್ತಿದ್ದಾರೆ.

‘18ನೇ ವಾಡಿನ ಶೌಚಾಲಯದ ಪಕ್ಕದಲ್ಲಿಯೇ ಕೊಳವೆ ಬಾವಿ ಮತ್ತು ಜಲಕುಂಭ ಇದೆ. ಆದರೆ ಶೌಚಾಲಯಕ್ಕೆ ನೀರಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪುರಸಭೆಯು 6 ತಿಂಗಳಿಂದ ನೀರಿನ ಸೌಲಭ್ಯ ಒದಗಿಸಿಲ್ಲ’ ಎಂದು ಹಿರಿಯರಾದ ಸಾವಿತ್ರಿ ಭಜಂತ್ರಿ ಹೇಳಿದರು.

‘ಇನ್ನೊಂದು ವಾರದಲ್ಲಿ ನೀರಿನ ಸೌಲಭ್ಯ ಒದಗಿಸದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಲಕ್ಷ್ಮೀ ಮುಂಬಯಿಕರಮ ಲಲಿತಾ ಕಂಬಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT