ಗಾಂಧಿ–150 ಸ್ತಬ್ಧಚಿತ್ರಕ್ಕೆ ಅದ್ಧೂರಿ ಸ್ವಾಗತ

7

ಗಾಂಧಿ–150 ಸ್ತಬ್ಧಚಿತ್ರಕ್ಕೆ ಅದ್ಧೂರಿ ಸ್ವಾಗತ

Published:
Updated:
Deccan Herald

ಚಾಮರಾಜನಗರ: ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಅವರ ಹೋರಾಟ, ಬದುಕು ಇತರೆ ವಿಚಾರಧಾರೆಗಳನ್ನು ಪ್ರಸ್ತುತ ಪಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಗಾಂಧಿ-150 ಅಭಿಯಾನ ಸ್ಥಬ್ಧಚಿತ್ರ ಶನಿವಾರ ಜಿಲ್ಲೆಯನ್ನು ಪ್ರವೇಶಿಸಿತು.

ಮೂಗೂರು ಮಾರ್ಗವಾಗಿ ಜಿಲ್ಲೆಯ ಗಡಿಭಾಗವಾದ ಟಗರಪುರ ಪ್ರವೇಶಿಸಿದ ಅಭಿಯಾನ ಸ್ಪಬ್ಧಚಿತ್ರವನ್ನು ಜಿಲ್ಲೆಯುದ್ದಕ್ಕೂ ಪುಷ್ಪ ಗೌರವದ ಮೂಲಕ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. 

ಟಗರಪುರದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಿಂಗರಾಜು, ಮುಖಂಡರಾದ ರಾಜಣ್ಣ, ನಾಗಸುಂದರ್, ಅಧಿಕಾರಿಗಳಾದ ಲಿಂಗರಾಜು ಇತರರು ಪುಷ್ಪಮಾಲೆಯನ್ನು ಅರ್ಪಿಸುವ ಮೂಲಕ ಸ್ವಾಗತಿಸಿದರು.

ಕೊಳ್ಳೇಗಾಲ ಪಟ್ಟಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮುಖ್ಯದ್ವಾರದಲ್ಲಿ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿದರು. ಕೊಳ್ಳೇಗಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಭಿಯಾನ ಮುಂದುವರೆಯಿತು. ನಾಗರಿಕರು, ವಿದ್ಯಾರ್ಥಿಗಳು ಗಾಂಧೀಜಿಯವರ ಸಮಗ್ರ ಚಿತ್ರಣ ನೀಡುವ ಸ್ಥಬ್ದಚಿತ್ರವನ್ನು ಕುತೂಹಲದಿಂದ ವೀಕ್ಷಿಸಿದರು.

ಯಳಂದೂರು ಪಟ್ಟಣಕ್ಕೆ ಆಗಮಿಸಿದ ಅಭಿಯಾನವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು ಪುಷ್ಪನಮನ ಸಲ್ಲಿಸಿ ಬರಮಾಡಿಕೊಂಡರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾಗರಾಜು, ಕಾಲೇಜು ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಸಹ ಹಾಜರಿದ್ದು ಗಾಂಧೀಜಿಯವರ ಸ್ಥಬ್ದಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇವೇಳೆ ಮಾತನಾಡಿದ ಶಿಕ್ಷಣ ಸಚಿವರಾದ ಎನ್. ಮಹೇಶ್ ಅವರು ಮಹಾತ್ಮಗಾಂಧೀಜಿಯವರ ಬದುಕು, ಹೋರಾಟ ಮತ್ತು ಸಾಧನೆಗಳ ಸಂದೇಶವನ್ನು ಜನಮಾನಸಕ್ಕೆ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ಗಾಂಧಿ ಅಭಿಯಾನವನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲೂ ಸಹ ಅಭಿಯಾನ ಮುಂದುವರಿಯುತ್ತಿದ್ದು ಯಶ್ವಸಿಗೊಳ್ಳಲಿ ಎಂದರು.

ಬಳಿಕ ಸಂತೇಮರಹಳ್ಳಿ ಮೂಲಕ ಹಾದು ಚಾಮರಾಜನಗರ ಪಟ್ಟಣದ ಮುಖ್ಯದ್ವಾರ ಬಳಿ ಆಗಮಿಸಿದ ಅಭಿಯಾನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೀಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್. ಬಾಲರಾಜು, ಕೆರೆಹಳ್ಳಿ ನವೀನ್, ನಗರಸಭಾ ಸದಸ್ಯರಾದ ರಾಜಪ್ಪ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸ್ವಾಗತಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ. ರಮೇಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !