ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಟಿಕ– ಲಕ್ಷ ಲಿಂಗ ಪೂಜೆ ನಾಳೆ

Last Updated 20 ಮೇ 2018, 12:41 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ವಾಸವಿ ಕ್ಲಬ್ ಮತ್ತು ಆರ್ಯವೈಶ್ಯ ಮಂಡಳಿಯಿಂದ ಮೇ 21ರಂದು ಸ್ಪಟಿಕಲಿಂಗ ಹಾಗೂ ಲಕ್ಷ ಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನೆಲಮಂಗಲದ ಲ್ಲಿರುವ ವಿಶೇಷ ವಾದ ಸ್ಪಟಿಕ ಲಿಂಗಗಳಾದ ವಾಯುಲಿಂಗ, ಪೃಥ್ವಿ ಲಿಂಗ, ಆಕಾಶ ಲಿಂಗ, ಜಲಲಿಂಗ, ಅಗ್ನಿಲಿಂಗಗಳನ್ನು ದೇವಾಲಯಕ್ಕೆ ಎಂದು ಸೋಮಾವಾರ ಬೆಳಿಗ್ಗೆ 4.30ರಿಂದ 7ರವರೆಗೆ ಪ್ರಥಮ ಪೂಜೆ, 7ರಿಂದ 9ರವರೆಗೆ ದ್ವಿತೀಯ ಪೂಜೆ ಮಾಡಲಾಗುವುದು. ಸಾರ್ವಜನಿಕರಿಗೆ ಮಧ್ಯಾಹ್ನ 11.30ರ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಾಸವಿ ಕ್ಲಬ್‌ ಅಧ್ಯಕ್ಷೆ ಸಹನಾ ತಿಳಿಸಿದ್ದಾರೆ.

ಕಾರ್ಯಕ್ರಮದ ಪೂರ್ವ ಸಿದ್ಧತೆ ಗಾಗಿ ಮೂರು ತಿಂಗಳ ಹಿಂದೆ ಹುತ್ತದ ಮತ್ತು ಕೆರೆಯ ಮಣ್ಣನ್ನು ತಂದು ಶುದ್ಧಗೊಳಿಸಿ, ಪಾವಗಡ, ಶಿರಾ, ತುಮಕೂರು, ಕೊರಟಗೆರೆ, ಮಡಕಶಿರಾ, ತ್ಯಾಮಗೊಂಡ್ಲು, ಹೆಬ್ಬೂರಿನ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ನೀಡಲಾಯಿತು. ಮಹಿಳೆಯರು ಶ್ರದ್ಧಾಭಕ್ತಿಯಿಂದ ಲಿಂಗಗಳನ್ನು ನಿರ್ಮಿಸಿದರು. ಒಬ್ಬೊಬ್ಬರು ಸುಮಾರು 7 ಸಾವಿರ, 3 ಸಾವಿರ ಸಣ್ಣ ಲಿಂಗಗಳನ್ನು ತಯಾರಿಸಿ, ಜೋಪಾನವಾಗಿ ತಂದು ವಾಸವಿ ಕ್ಲಬ್‌ಗೆ ಒಪ್ಪಿಸಿದ್ದಾರೆ. ಲಕ್ಷ ಲಿಂಗಗಳನ್ನು ದೇವಾಲಯದ ಸಭಾಂಗಣದಲ್ಲಿ ಆಕರ್ಷಣಿಯವಾಗಿ ಜೋಡಿಸಲಾಗಿದ್ದು, ಇದರ ಜೊತೆಗೆ ಭಿನ್ನ ಲಿಂಗಗಳನ್ನು ತಯಾರಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಸಹನಾ ತಿಳಿಸಿದರು.

ಪೂಜೆಯ ನಂತರ ವಿಸರ್ಜನೆ

ಕನ್ನಿಕಾ ಪರಮೇಶ್ವರಿ ಸಭಾಂಗಣದಲ್ಲಿ ನಾಲ್ಕು ದಿನಗಳಿಂದ ಸಂಘದ ಪದಾಧಿಕಾರಿಗಳು ಬೆಳಿಗ್ಗೆಯಿಂದ ಸಂಜೆವರೆಗೂ ಒಂದು ಲಕ್ಷ ಲಿಂಗಗಳನ್ನು ಆಕರ್ಷಣಿಯವಾಗಿ ಜೋಡಿಸುತ್ತಿದ್ದಾರೆ. ಲಿಂಗಗಳನ್ನು ಪೂಜಾ ಕಾರ್ಯಕ್ರಮದ ನಂತರ ಮೈಸೂರು ಜಿಲ್ಲೆ ತೀ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷೆ ಅರುಂಧತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT