ಈರುಳ್ಳಿ, ಹಸಿಮೆಣಸು ಏರಿಕೆ, ಗುಲಾಬಿ, ದ್ರಾಕ್ಷಿ ಇಳಿಕೆ

7
ಹಣ್ಣು, ಹೂವುಗಳ ಬೆಲೆಯಲ್ಲಿ ಸ್ವಲ್ಪ ಬದಲಾವಣೆ

ಈರುಳ್ಳಿ, ಹಸಿಮೆಣಸು ಏರಿಕೆ, ಗುಲಾಬಿ, ದ್ರಾಕ್ಷಿ ಇಳಿಕೆ

Published:
Updated:

ಚಾಮರಾಜನಗರ: ಪಟ್ಟಣದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳು ಮತ್ತು ಹೂವುಗಳ ಬೆಲೆಯಲ್ಲಿ ಈ ವಾರ ಹೆಚ್ಚಿನ ಬದಲಾವಣೆಯಾಗಿಲ್ಲ. ತರಕಾರಿಗಳ ಪೈಕಿ, ಟೊಮೆಟೊ, ಈರುಳ್ಳಿ, ಹಸಿಮೆಣಸಿನಕಾಯಿ ಬೆಲೆ ಕೊಂಚ ಏರಿಕೆಯಾಗಿದೆ. ಉಳಿದ ತರಕಾರಿಗಳ ಬೆಲೆ ಸ್ಥಿರವಾಗಿದೆ.

ದಪ್ಪ ಈರುಳ್ಳಿಯು ಪ್ರತಿ ಕೆಜಿಗೆ ₹ 25ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ₹ 20 ಇತ್ತು. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ₹ 20ಕ್ಕೆ ಸಿಗುತ್ತಿದೆ. ಇನ್ನಷ್ಟು ಹೆಚ್ಚುವ ನಿರೀಕ್ಷೆ: ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಇದುವರೆಗೆ ಈರುಳ್ಳಿ ಸ್ಥಳೀಯವಾಗಿ ಲಭ್ಯವಾಗುತ್ತಿತ್ತು. ಈಗ ಸಿಗುತ್ತಿಲ್ಲ. ಹಾಗಾಗಿ ಬೇರೆ ಕಡೆಯಿಂದ ಬರುವ ಕಾರಣ ಬೆಲೆ ಜಾಸ್ತಿ ಇರುತ್ತದೆ’ ಎಂದು ತರಕಾರಿ ವ್ಯಾಪಾರಿ ರಘು ಹೇಳಿದರು. ಕಳೆದ ವಾರ ಕೆ.ಜಿಗೆ ₹ 10ಗೆ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಟೊಮೆಟೊಗೆ ಸೋಮವಾರ ₹ 15 ಇತ್ತು. ದ್ವಿತೀಯ ದರ್ಜೆಯ ಟೊಮೆಟೊ ಈಗಲೂ ₹ 10ಗೆ ಸಿಗುತ್ತಿದೆ.

ಮೆಣಸಿನಕಾಯಿ ಹೆಚ್ಚು ಖಾರ: ಕೆಲವು ವಾರಗಳಿಂದ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದ ಹಸಿಮೆಣಸಿನಕಾಯಿ ಈ ವಾರ ₹ 20 ತುಟ್ಟಿ ಆಗಿದೆ. ಕಳೆದ ವಾರ ಒಂದು ಕೆ.ಜಿಗೆ ₹ 40 ಇತ್ತು.‌ ಬೀನ್ಸ್‌ ಬೆಲೆ ₹ 10 ಇಳಿದಿದೆ. ಹೋದ ವಾರ ಮಾರುಕಟ್ಟೆಯಲ್ಲಿ ₹ 50 ಇತ್ತು. ಉಳಿದಂತೆ ಕ್ಯಾರೆಟ್‌ ₹ 30, ದಪ್ಪ ಮೆಣಸಿನಕಾಯಿ ₹ 80, ಸೌತೆಕಾಯಿ ₹ 30, ಮೂಲಂಗಿ ₹ 30, ಗೆಡ್ಡೆ ಕೋಸು ₹ 50, ಬೂದುಗುಂಬಳಕಾಯಿ ₹ 20, ಮಂಗಳೂರು ಸೌತೆ ₹ 20ಕ್ಕೆ ಮಾರಾಟವಾಗುತ್ತಿದೆ. ತಳ್ಳುಗಾಡಿಗಳಲ್ಲಿ ತರಕಾರಿಗಳು ಮಾರುಕಟ್ಟೆ ದರಕ್ಕಿಂತ ಸ್ವಲ್ಪ ಕಡಿಮೆ ಬೆಲೆಯಲ್ಲೇ ಸಿಗುತ್ತಿವೆ.

ಹೂವುಗಳ ಬೆಲೆಯಲ್ಲಿ ಏರಿಳಿತ: ಬಹುತೇಕ ಹೂವುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮಲ್ಲಿಗೆ (ಕೆ.ಜಿ) ₹ 240, ಸೂಜಿಮಲ್ಲಿಗೆ ₹ 160ಕ್ಕೆ ಸಿಗುತ್ತಿದೆ. ಹೋದವಾರ ಸೂಜಿಮಲ್ಲಿಗೆಯ ಬೆಲೆ ₹ 200ರಿಂದ ₹ 360ರಷ್ಟಿತ್ತು. ಮೂರು ವಾರಗಳಿಂದ ಕನಕಾಂಬರದ ಬೆಲೆ ಸ್ಥಿರವಾಗಿದ್ದು, ಪ್ರತಿ ಕೆ.ಜಿಗೆ ₹1,000ಕ್ಕೆ ಮಾರಾಟವಾಗುತ್ತಿದೆ. ಈ ವಾರ ಚೆಂಡು ಹೂವಿನ ಬೆಲೆಯಲ್ಲಿ ಇಳಿಕೆಯಾಗಿದೆ. ₹ 20ರಿಂದ ₹ 40ರಷ್ಟಿದ್ದ ಹೂವಿನ ಬೆಲೆ ₹ 10ಕ್ಕೆ ಕುಸಿದಿದೆ. ಗುಲಾಬಿ ಇಳಿಕೆ: ಗುಲಾಬಿಯ ಬೆಲೆ ಕೊಂಚ ಇಳಿಕೆಯಾಗಿದೆ. ಕಳೆದವಾರ ಸಗಟು ಮಾರುಕಟ್ಟೆಯಲ್ಲಿ ಒಂದು ಗುಲಾಬಿಗೆ ₹ 5 ನೀಡಬೇಕಿತ್ತು. ಅದು ಈ ವಾರ ₹ 2ಕ್ಕೆ ಇಳಿದಿದೆ. ಆದರೆ, ಮಾರುಕಟ್ಟೆಯಲ್ಲಿ ಗುಲಾಬಿ ಒಂದಕ್ಕೆ ₹ 5 ಇದೆ.

ಯಾರಿಗೂ ಬೇಡವಾದ ಮಾವು

ಕಳೆದವಾರ ಸಗಟು ಮಾರುಕಟ್ಟೆಯಲ್ಲಿ ₹ 80ಗೆ ಮಾರಾಟವಾಗುತ್ತಿದ್ದ ದ್ರಾಕ್ಷಿಯ ಬೆಲೆ ಈ ವಾರ ₹ 50ಗೆ ಕುಸಿದಿದೆ. ಮಾರುಕಟ್ಟೆಯಲ್ಲಿ ₹ 80ರಿಂದ ₹100‌ ಇದೆ. ಸೇಬು ಸಗಟು ಬೆಲೆ ₹ 160 ಇದ್ದರೆ, ಹೊರಗಡೆ  ₹ 180–₹ 200 ಇದೆ.

ಕಿತ್ತಳೆ ₹ 10 ಅಗ್ಗವಾಗಿದೆ. ಕಳೆದ ವಾರ ₹ 70 ಇತ್ತು. ಮೋಸಂಬಿಗೆ ಸಗಟು ಮಾರುಕಟ್ಟೆಯಲ್ಲಿ  ₹ 70 ಇದೆ. ಮಾರುಕಟ್ಟೆಯಲ್ಲಿ ಕಿತ್ತಳೆ ಮತ್ತು ಮೋಸಂಬಿ ₹ 90ರಿಂದ ₹ 100ಗೆ ಮಾರಾಟವಾಗುತ್ತಿದೆ. ದಾಳಿಂಬೆ ಸಗಟು ಮಾರುಕಟ್ಟೆಯಲ್ಲಿ ₹ 70ಕ್ಕೆ ಸಿಗುತ್ತಿದ್ದರೆ, ಹೊರಗಡೆ ₹ 150 ಬೆಲೆ ಇದೆ.

ಕೆಲವು ವಾರಗಳಿಂದ ಬೇಡಿಕೆ ಕಳೆದುಕೊಂಡಿರುವ ಮಾವಿನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಿವಿಧ ತಳಿಯ ಮಾವುಗಳು ₹ 20ರಿಂದ ₹ 40ಕ್ಕೆ ಸಗಟು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಸಾಮಾನ್ಯ ಹಣ್ಣುಗಳ ಅಂಗಡಿಗಳಲ್ಲಿ ₹ 40–₹ 50ಗೆ ಮಾರಾಟವಾಗುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !