ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆಗೆ ಎಂಸಿಐ ತಂಡ ಭೇಟಿ

7

ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆಗೆ ಎಂಸಿಐ ತಂಡ ಭೇಟಿ

Published:
Updated:
Deccan Herald

ಚಾಮರಾಜನಗರ: ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಮೂವರು ಅಧಿಕಾರಿಗಳ ತಂಡವು ಗುರುವಾರ ಪಟ್ಟಣದಲ್ಲಿರುವ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ವೈದ್ಯಕೀಯ ಕಾಲೇಜಿಗೆ ನಾಲ್ಕನೇ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮತಿ ನೀಡುವ ಸಂಬಂಧ ತಂಡ ಪರಿಶೀಲನೆ ನಡೆಸಿದೆ.

ಜಿಲ್ಲಾಸ್ಪತ್ರೆಯ ಹಾಸಿಗೆ ಸಾಮರ್ಥ್ಯ, ಮೂಲಸೌಕರ್ಯ, ಬೋಧಕ ಸಿಬ್ಬಂದಿ ಸೇರಿದಂತೆ ಲಭ್ಯವಿರುವ ಎಲ್ಲ ಸೌಕರ್ಯಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿತು.

‘ವೈದ್ಯಕೀಯ ಮಂಡಳಿಯ ತಂಡವು ಪ್ರತಿ ವರ್ಷ ಎರಡು ಬಾರಿ ಬಂದು ಪರಿಶೀಲನೆ ನಡೆಸುತ್ತದೆ. ಕಾಲೇಜಿನಲ್ಲಿರುವ ಮೂಲಸೌಕರ್ಯ, ಬೋಧಕ ಸಿಬ್ಬಂದಿ ಹಾಗೂ ಇತರ ವಿಷಯಗಳನ್ನು ಪರಿಗಣಿಸಿ ಮಂಡಳಿಗೆ ವರದಿ ನೀಡುತ್ತದೆ. ಅದರ ಆಧಾರದಲ್ಲಿ ಮುಂದಿನ ವರ್ಷಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ನಿರ್ಧರಿಸುತ್ತದೆ’ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ಸರ್ಜನ್‌ ಡಾ. ರಘುರಾಮ್‌ ಸರ್ವೇಗಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜಿನಲ್ಲಿ ಏನು ಕೊರತೆ ಇದೆ ಎಂದು ತಂಡ ಪರಿಶೀಲಿಸುತ್ತದೆ. ಎಷ್ಟರಮಟ್ಟಿಗೆ ಅವುಗಳನ್ನು ನೀಗಿಸಲಾಗಿದೆ ಎಂಬುದನ್ನೂ ನೋಡುತ್ತದೆ. ಶೇ 80ರಷ್ಟು ಪರಿಶೀಲನೆ ಮುಗಿದಿದ್ದು, ಶುಕ್ರವಾರವೂ ತಂಡ ಇಲ್ಲೇ ಇರಲಿದೆ’ ಎಂದು ಅವರು ಮಾಹಿತಿ ನೀಡಿದರು.

ಸ್ವಚ್ಛ, ಪೂರ್ಣ ಹಾಜರಾತಿ: ಯಾವತ್ತೂ ಜನರಿಂದ ತುಂಬಿ ತುಳುಕುತ್ತಿದ್ದ ಮತ್ತು ಅನೈರ್ಮಲ್ಯದಿಂದ ಕೂಡಿರುತ್ತಿದ್ದ ಜಿಲ್ಲಾಸ್ಪತ್ರೆ ಗುರುವಾರ ಸ್ವಚ್ಛವಾಗಿತ್ತು. ಹೆಚ್ಚು ಶಿಸ್ತುಬದ್ಧವಾಗಿತ್ತು. ಆಸ್ಪತ್ರೆಯ ಬಹುತೇಕ ಸಿಬ್ಬಂದಿ ಕೂಡ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

‘ಆಸ್ಪತ್ರೆ ಯಾವಾಗಲೂ ಇದೇ ರೀತಿ ಇದ್ದರೆ ಎಷ್ಟು ಒಳ್ಳೆಯದು’ ಎಂದು ರೋಗಿಗಳ ಸಂಬಂಧಿ ಹಾಗೂ ಸಾರ್ವಜನಿಕರು ಮಾತಾಡಿಕೊಂಡಿದ್ದೂ ಕಂಡು ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !