ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಚಾಲಿತ ಬಸ್‌ ಸಂಚಾರ 6 ತಿಂಗಳಲ್ಲಿ ಆರಂಭ

40 ಬಸ್‌ ಒದಗಿಸಲು ಗೋಲ್ಡ್‌ಸ್ಟೋನ್‌ ಕಂಪನಿ ಜತೆ ಬಿಎಂಟಿಸಿ ಒಪ್ಪಂದ
Last Updated 6 ಮಾರ್ಚ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಇನ್ನು ಆರು ತಿಂಗಳಲ್ಲೇ ವಿದ್ಯುತ್‌ಚಾಲಿತ ಬಸ್‌ಗಳು ಸಂಚರಿಸಲಿವೆ. ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್‌ ಎಮರ್ಜಿಂಗ್‌ ಕಂಪನಿಯು ಅತ್ಯಂತ ಕಡಿಮೆ ದರಕ್ಕೆ ಬಸ್‌ಗಳನ್ನು ಭೋಗ್ಯಕ್ಕೆ ನೀಡಲು ಮುಂದೆ ಬಂದಿದೆ.

ಭೋಗ್ಯದ ಆಧಾರದಲ್ಲಿ 150 ವಿದ್ಯುತ್‌ಚಾಲಿತ ಬಸ್‌ಗಳನ್ನು ಒದಗಿಸುವ ಕುರಿತು ಬಿಎಂಟಿಸಿಯು ಡಿಸೆಂಬರ್‌ನಲ್ಲಿ ಟೆಂಡರ್‌ ಕರೆದಿತ್ತು.

‘ಮೊದಲ ಹಂತದಲ್ಲಿ 40 ಬಸ್‌ಗಳನ್ನು ಒದಗಿಸಲು ಕಂಪನಿಯು ಒಪ್ಪಿದೆ. ವಾಹನದ ಪ್ರತಿ ಕಿ.ಮೀ. ಕಾರ್ಯಾಚರಣೆಗೆ ನಾವು ₹37.50 ಶುಲ್ಕವನ್ನು ಕಂಪನಿಗೆ ಪಾವತಿಸಬೇಕು. ವಿದ್ಯುತ್‌ ಹಾಗೂ ನಿರ್ವಾಹಕರ ವೆಚ್ಚ ₹17 ಆಗುತ್ತದೆ. ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಅವರೇ ನಿರ್ಮಿಸಲಿದ್ದಾರೆ.  ಚಾಲಕರನ್ನೂ ಅವರೇ ಒದಗಿಸಲಿದ್ದಾರೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಹೇಳಿದರು.

ಈ ಬಸ್‌ಗಳಲ್ಲಿ 35 ಆಸನಗಳಿರುತ್ತವೆ. ವೋಲ್ವೊ ಬಸ್‌ನಲ್ಲಿರುವ ಎಲ್ಲ ಸೌಲಭ್ಯಗಳು ಇದರಲ್ಲೂ ಇರಲಿವೆ. ಇವು ಹೊರ ವರ್ತುಲ ರಸ್ತೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಸಂಚರಿಸಲಿವೆ. ಈ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಜ್ರ ಬಸ್‌ಗಳು ಪ್ರತಿ ಕಿ.ಮೀ.ಗೆ ಸರಾಸರಿ ₹62 ವರಮಾನ ಗಳಿಸುತ್ತಿವೆ ಎಂದರು.

ಡೀಸೆಲ್‌ ಬೆಲೆ ಏರಿಕೆಯ ಬಳಿಕ ವೋಲ್ವೊ ಬಸ್‌ಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಪ್ರತಿ ಬಸ್‌ಗೆ ಸರಾಸರಿ ₹70 ವೆಚ್ಚ ಮಾಡಬೇಕಿದೆ ಎಂದು ಹೇಳಿದರು.

‘ಕೇಂದ್ರ ಸರ್ಕಾರವು 40 ಬಸ್‌ಗಳಿಗೆ ಮಾತ್ರ ತಲಾ ₹1 ಕೋಟಿ ಸಬ್ಸಿಡಿ ನೀಡಿದೆ. ಉಳಿದ 110 ಬಸ್‌ಗಳಿಗೆ ಸಬ್ಸಿಡಿ ನೀಡಿದರೆ, ಅಷ್ಟೂ ಬಸ್‌ಗಳನ್ನು ಭೋಗ್ಯಕ್ಕೆ ಶೀಘ್ರದಲ್ಲೇ ಪಡೆಯುತ್ತೇವೆ’ ಎಂದು ಅವರು ತಿಳಿಸಿದರು.

ವಿದ್ಯುತ್‌ಚಾಲಿತ ವಾಹನಗಳನ್ನು ತಯಾರಿಸುವ ಚೀನಾದ ಬಿವೈಡಿ ಕಂಪನಿಯ ಜತೆ ಗೋಲ್ಡ್‌ಸ್ಟೋನ್‌ ಕಂಪನಿಯು ಒಪ್ಪಂದ ಮಾಡಿಕೊಂಡಿದೆ. ಬೀದರ್‌ನಲ್ಲಿ ವಾಹನ ತಯಾರಿಕಾ ಘಟಕವನ್ನು ಸ್ಥಾಪಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT