ಕೈಲಾಸವಲ್ಲ; ರಂಗಪ್ಪನ ದರ್ಶನ ಮಾಡಿಸುವೆ

7

ಕೈಲಾಸವಲ್ಲ; ರಂಗಪ್ಪನ ದರ್ಶನ ಮಾಡಿಸುವೆ

Published:
Updated:
ಯಳಂದೂರು ಪಟ್ಟಣದಲ್ಲಿ ಶಾಸಕರ ಕಚೇರಿಯನ್ನು ಎನ್.ಮಹೇಶ್ ಉದ್ಘಾಟಿಸಿದರು

ಯಳಂದೂರು: ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಶಾಸಕರ ಕಚೇರಿಯನ್ನು ಶಿಕ್ಷಣ ಸಚಿವ ಎನ್.ಮಹೇಶ್ ಬುಧವಾರ ಉದ್ಘಾಟಿಸಿದರು.

‘ಸಚಿವನಾಗಿರುವುದರಿಂದ ಕೆಲಸದ ಒತ್ತಡ ಅಧಿಕವಾಗಿದೆ. ಹೀಗಾಗಿ, ಕೊಳ್ಳೇಗಾಲ, ಯಳಂದೂರು ಹಾಗೂ ಸಂತೆಮರಹಳ್ಳಿಯಲ್ಲಿ ಶಾಸಕರ ಕಚೇರಿ ಆರಂಭಿಸಲಾಗಿದೆ. ಕಚೇರಿಯು ಪ್ರತಿ ಶನಿವಾರ, ಭಾನುವಾರ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ತಮ್ಮ ಅಹವಾಲು ಹಾಗೂ ಸಮಸ್ಯೆಗಳನ್ನು ಇಲ್ಲಿ ಸಲ್ಲಿಸಬಹುದು. ಪ್ರತಿದಿನ ಸಂಜೆ ಈ ಬಗ್ಗೆ ನನಗೆ ಮಾಹಿತಿ ಲಭ್ಯವಾಗುತ್ತದೆ’ ಎಂದರು.

‘ಪ್ರಾಥಮಿಕ ಹಾಗೂ ಪ್ರೌಢಶಾಲೆಯ 10 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ಇನ್ನೆರಡು ದಿನಗಳಲ್ಲಿ ಸರಿಯಾಗಲಿದೆ. ಮುಂದಿನ ವರ್ಷವೂ 10 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ’ ಎಂದರು.

‘ಕ್ಷೇತ್ರದ ಜನರಿಗೆ ಕೈಲಾಸ ತೋರಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ, ಮಾದಪ್ಪ ಅಥವಾ ರಂಗಪ್ಪನ ಶಿಖರ ದರ್ಶನ ಮಾಡಿಸುವೆ’ ಎಂದರು.

ಆಗಸ್ಟ್‌ನಲ್ಲಿ ಕೊಳ್ಳೇಗಾಲದಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲಾಗುವುದು. ಜೊತೆಗೆ ಕೌಶಲ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ನಿರಂಜನ್, ಉಪಾಧ್ಯಕ್ಷೆ ಮಲ್ಲಾಜಮ್ಮ, ನಂಜಯ್ಯ ಸದಸ್ಯರಾದ ವೆಂಕಟೇಶ್, ಸಿದ್ದರಾಜು, ಪದ್ಮಾವತಿ ಮಹಾದೇವನಾಯಕ, ಶಾರದಾಂಬ ಬಸವಣ್ಣ, ತಹಶೀಲ್ದಾರ್ ಬಸವರಾಜು ಚಿಗರಿ, ತಾಲ್ಲೂಕು ಪಂಚಾಯಿತಿ ಇಒ ಅಧಿಕಾರಿ ಬಿ.ಎಸ್.ರಾಜು, ಎಇಇ ರವಿಕುಮಾರ್, ಎಂಜಿನಿಯರ್‌ ಕುಮಾರ್, ಶಿವಕುಮಾರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !