ಮಂಗಳವಾರ, ಮಾರ್ಚ್ 2, 2021
31 °C
ಯಾವ ಅಭ್ಯರ್ಥಿಯೂ ಬೇಡ ಎಂದ 375 ಮತದಾರರು

ಚಾಮರಾಜನಗರ: ‘ನೋಟಾ’ಕ್ಕೆ ‘ನೋ’ ಎಂದ ಮತದಾರ

ರವಿ ಎನ್‌. Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಪಟ್ಟಣದ ನಗರಸಭೆ ಚುನಾವಣೆಯಲ್ಲಿ ಮತದಾರರು ‘ನೋಟಾ’ಗೆ (ಮೇಲಿನ ಯಾರೂ ಅಲ್ಲ) ಹೆಚ್ಚು ಮಹತ್ವ ನೀಡಿಲ್ಲ. ನಗರಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ನೋಟಾಗೆ ಅವಕಾಶ ಕಲ್ಪಿಸಲಾಗಿತ್ತು.

31 ವಾರ್ಡ್‌ಗಳಲ್ಲಿ ಚಲಾವಣೆಯಾದ  ಒಟ್ಟು 38,619 ಮತಗಳಲ್ಲಿ 375 ಮತಗಳು ನೋಟಾಗೆ ಬಿದ್ದಿವೆ. ಎಲ್ಲ ವಾರ್ಡ್‌ಗಳಲ್ಲೂ ನೋಟಾ ಗುಂಡಿಯನ್ನು ಒತ್ತಿದವರಿದ್ದಾರೆ. ಯಾವುದೇ ವಾರ್ಡ್‌ನಲ್ಲಿ ನೋಟಾಗೆ ಬಿದ್ದ ಮತ 35 ಅನ್ನು ದಾಟಿಲ್ಲ.

ಎಲ್ಲಿ ಹೆಚ್ಚು, ಎಲ್ಲಿ ಕಡಿಮೆ?: ಅತೀ ಹೆಚ್ಚು ನೋಟಾ ಮತಗಳು 24ನೇ ವಾರ್ಡ್‌ನಲ್ಲಿ ಚಲಾವಣೆಯಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ವಿಜಯಶಾಲಿಯಾಗಿರುವ ಈ ಇಲ್ಲಿ ಒಟ್ಟು 1,537 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ 32 ಮಂದಿ ನೋಟಾ ಚಲಾಯಿಸಿದ್ದಾರೆ.

25ನೇ ವಾರ್ಡ್‌ನಲ್ಲಿ 29 ಮತದಾರರು ನೋಟಾ ಗುಂಡಿ ಒತ್ತಿದ್ದಾರೆ. ಇಲ್ಲಿ 1,054 ಮಂದಿ ಮತದಾನ ಮಾಡಿದ್ದರು. 28ನೇ ವಾರ್ಡ್‌ನಲ್ಲಿ 1,464 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ 23 ಮಂದಿ, ಮೇಲಿನ ಯಾವ ಅಭ್ಯರ್ಥಿಯೂ ತಮ್ಮ ಆಯ್ಕೆ ಅಲ್ಲ ಎಂದು ಹೇಳಿದ್ದಾರೆ‌.

ಮೂರು ವಾರ್ಡ್‌ಗಳಲ್ಲಿ ಒಂದೇ ನೋಟಾ: ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದ್ದ 9ನೇ ವಾರ್ಡ್‌, 12 ಮತ್ತು 22 ವಾರ್ಡ್‌ಗಳಲ್ಲಿ ಕೇವಲ ಒಂದು ನೋಟಾ ಚಲಾವಣೆಯಾಗಿದೆ.  ಇಲ್ಲಿ ಕ್ರಮವಾಗಿ 861, 1,‌185 ಮತ್ತು 724 ಮಂದಿ ಮತದಾನ ಮಾಡಿದ್ದರು.

10ನೇ ವಾರ್ಡ್‌ (1,439 ಮತ ಚಲಾವಣೆ) ಮತ್ತು 15ನೇ (1,176) ವಾರ್ಡ್‌ಗಳಲ್ಲಿ ತಲಾ 4 ನೋಟಾ ದಾಖಲಾಗಿದ್ದರೆ, ವಾರ್ಡ್ 11 (829), 21 (1,119) ಮತ್ತು 31ನೇ  (1,058) ವಾರ್ಡ್‌ಗಳಲ್ಲಿ ತಲಾ ಐವರು ನೋಟಾ ಗುಂಡಿ ಒತ್ತಿದ್ದಾರೆ.

ಕೊಳ್ಳೇಗಾಲ: 149 ನೋಟಾ

ಕೊಳ್ಳೇಗಾಲ ನಗರಸಭೆಯ 30 ವಾರ್ಡ್‌ಗಳಲ್ಲಿ 30,877 ಮತದಾರರಿದ್ದು, 149 ಮಂದಿ ನೋಟಾಗೆ ಮತ ಹಾಕಿದ್ದಾರೆ. ಆರು ವಾರ್ಡ್‌ಗಳಲ್ಲಿ (5, 11, 13, 16, 18, 27) ಒಂದು ಮತವೂ ನೋಟಾಗೆ ಬಿದ್ದಿಲ್ಲ.

19ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ನೋಟಾ ಚಲಾವಣೆಯಾಗಿದೆ. ಇಲ್ಲಿ 19 ಮಂದಿ ನೋಟಾ ಹಾಕಿದ್ದಾರೆ.

ಅಂಕಿ ಅಂಶ

* 38,619 ಚಾಮರಾಜನಗರದಲ್ಲಿ ಚಲಾವಣೆಯಾದ ಮತಗಳು

* 375 ನೋಟಾಗೆ ಬಿದ್ದ ಮತಗಳು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು