ಅಗಲಿದ ಚೇತನಕ್ಕೆ ಭಾವಪೂರ್ಣ ನಮನ

7
ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳಿಂದ ವಾಜಪೇಯಿಗೆ ಶ್ರದ್ಧಾಂಜಲಿ

ಅಗಲಿದ ಚೇತನಕ್ಕೆ ಭಾವಪೂರ್ಣ ನಮನ

Published:
Updated:
Deccan Herald

ಚಾಮರಾಜನಗರ: ‘ದೇಶದ ರಾಜಕೀಯ ವ್ಯವಸ್ಥೆಗೆ ಮೌಲ್ಯಾಧಾರಿತ ಗಟ್ಟಿತನ ತಂದುಕೊಟ್ಟ ವಾಜಪೇಯಿ ಅವರು ಅಜರಾಮರ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಬಣ್ಣಿಸಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಸಂಘ ಮತ್ತು ಬಿಜೆಪಿಯ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದ ವಾಜಪೇಯಿ ಅವರು ಉತ್ತಮ ವಾಗ್ಮಿಯಾಗಿದ್ದರು. ಇಡೀ ಜನರನ್ನು ತಮ್ಮತ್ತ ಆಕರ್ಷಿಸುವ ವಾಕ್ಚಾತುರ್ಯ ಅವರಲ್ಲಿತ್ತು. ಮಾತಿನ ಚತುರತೆಯಿಂದ ದೇಶವನ್ನೇ ಸೆಳೆಯುತ್ತಿದ್ದರು. ಇವರ ಆಡಳಿತಾವಧಿಯಲ್ಲಿ ದೇಶದ ರಾಜಕೀಯ ಚಿತ್ರಣವೇ ಬದಲಾಗಿತ್ತು’ ಎಂದು ಹೇಳಿದರು.

‘ದೇಶದ ನಾಲ್ಕು ದಿಕ್ಕುಗಳಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ನಿರ್ಮಿಸಿದ, ಗ್ರಾಮೀಣ ಪ್ರದೇಶಗಳಿಂದ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಯೋಜನೆ ಜಾರಿ ಮಾಡಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಇಡೀ ಜಗತ್ತನ್ನೇ ಆಕರ್ಷಿಸುವ ದೂರದೃಷ್ಟಿಯ ವ್ಯಕ್ತಿತ್ವ ಅವರದಾಗಿತ್ತು’ ಎಂದು ಸ್ಮರಿಸಿದರು.

‘ದೇಶದ ಅಭಿವೃದ್ಧಿಗಾಗಿ ಗುಣಮಟ್ಟದ ಯೋಜನೆಗಳ ಬಗ್ಗೆ ಸದಾ ಚಿಂತನೆಶೀಲರಾಗಿದ್ದ ವಾಜಪೇಯಿ ಅವರ ಆಡಳಿತಾವಧಿಯ ಕಾರ್ಯಕ್ರಮಗಳು ಸ್ಮರಣೀಯ’ ಎಂದರು.  

ಪಕ್ಷದ ಕಾರ್ಯಕಾರಿಣಿ ಸದಸ್ಯ ಸಿ.ಗುರುಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಬಾಲರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೂರೊಂದು ಶೆಟ್ಟಿ, ನಾಗೇಂದ್ರಸ್ವಾಮಿ, ದ್ರಾಕ್ಷಾಯಿಣಿ, ಪುಷ್ಪಮಾಲಾ, ಶಿವಣ್ಣ ಇದ್ದರು. 

ಅಭಿಮಾನಿ ಬಳಗದಿಂದ ಶ್ರದ್ಧಾಂಜಲಿ: ಪಟ್ಟಣದ ನೃಪತುಂಗ ವೃತ್ತದಲ್ಲಿ ವಾಜಪೇಯಿ ಅವರಿಗೆ ಅಭಿಮಾನಿಗಳು ನುಡಿನಮನ ಸಲ್ಲಿಸಿದರು.

ಮುಖಂಡ ಸುದರ್ಶನ ಗೌಡ, ವಿಜಯ್‌ಕುಮಾರ್‌ ಗೌಡ, ಮಂಜುನಾಥ ಗೌಡ, ಶಿವಣ್ಣ, ನಾಗೇಂದ್ರ ಗೌಡ, ಎಂ.ನಾಗರಾಜು, ಪ್ರಭುಸ್ವಾಮಿ, ನಂಜುಂಡಸ್ವಾಮಿ, ಶಿವಕುಮಾರ್, ಕಾಳನಾಯ್ಕ, ಕುಮಾರ್ ಇದ್ದರು.

ಅಟಲ್ ಜೀ ಅಭಿಮಾನಿಗಳಿಂದ ಪಟ್ಟಣದ ಸತ್ಯಮಂಗಲ ರಸ್ತೆಯಲ್ಲಿರುವ ಎಪಿಎಂಸಿ ಗೇಟ್ ಮುಂಭಾಗದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ನಿಜಧ್ವನಿ ಸಮಿತಿಯ ರಾಜ್ಯ ಅಧ್ಯಕ್ಷ ನಿಜಧ್ವನಿ ಗೋವಿಂದರಾಜು, ನವೀನ್‌, ಹುಂಡಿ ವೀರಭದ್ರ, ಆಟೊ ಅಪ್ಪು, ಚಿಕ್ಕಣ್ಣ, ರಾಘು, ಲಿಂಗಣ್ಣ, ಮಹೇಶ್ ವೈ.ಕೆ.ಮೋಳೆ, ಲಿಂಗರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !