ಸಂಭ್ರಮಕ್ಕೆ ಜನ್ಯ, ಸಂಗೀತಾ ಕಟ್ಟಿ, ಹೇಮಂತ್‌ ಹಾಡಿನ ಮೆರುಗು

7
ಅ.13ರಿಂದ 16ರವರೆಗೆ ಜಿಲ್ಲಾ ದಸರಾ ಮಹೋತ್ಸವ

ಸಂಭ್ರಮಕ್ಕೆ ಜನ್ಯ, ಸಂಗೀತಾ ಕಟ್ಟಿ, ಹೇಮಂತ್‌ ಹಾಡಿನ ಮೆರುಗು

Published:
Updated:
Deccan Herald

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಇದೇ 13ರಂದು 16ರವರೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ದಸರಾ ಮಹೋತ್ಸವ ನಡೆಯಲಿದೆ.

13ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ದಸರಾ ಸಂಭ್ರಮಕ್ಕೆ ಚಾಲನೆ ಸಿಗಲಿದೆ. ಅಂದು ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.‌ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ನಾಲ್ಕು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿಯನ್ನೂ ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಸ್ಥಳೀಯ ಜನಪದ ಕಲೆಗಳೊಂದಿಗೆ ಸುಗಮಸಂಗೀತ, ಹಿಂದೂಸ್ಥಾನಿ ಸಂಗೀತ, ಭರತನಾಟ್ಯ, ನಿಕೋಬಾರಿ ನೃತ್ಯ ಪ್ರದರ್ಶನಗಳು ನಡೆಯಲಿವೆ. ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳೂ ಕಾರ್ಯಕ್ರಮ ನೀಡಲಿದ್ದಾರೆ.

ಖ್ಯಾತ ತಾರೆಯರ ಮೆರುಗು: ಈ ಬಾರಿಯ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಖ್ಯಾತ ಗಾಯಕರಾದ ಸಂಗೀತಾ ಕಟ್ಟಿ ಹಾಗೂ ಹೇಮಂತ್‌ ಅವರ ಪ್ರದರ್ಶನ ನೀಡಲಿದೆ. 

ಅರ್ಜುನ್‌ ಜನ್ಯ ಅವರ ತಂಡ ಮೊದಲ ದಿನವಾದ 13ರಂದು ಸಂಜೆ 6.45ರಿಂದ ರಾತ್ರಿ 10.30ರವರೆಗೆ ‘ಸಂಗೀತ ರಸ ರಜೆ’ ಕಾರ್ಯಕ್ರಮ ನಡೆಸಿಕೊಡಲಿದೆ.

ಸಂಗೀತಾ ಕಟ್ಟಿ ಮತ್ತು ಅವರ ತಂಡ 14ರಂದು ರಾತ್ರಿ 8.15ರಿಂದ 10.30 ರವರೆಗೆ ‘ನವರಸಗಾಯನ’ ಕಾರ್ಯಕ್ರಮ ನೀಡಲಿದೆ.

ಹೇಮಂತ್‌ ಹಾಗೂ ಅವರ ತಂಡವು ಮಹೋತ್ಸವದ ಕೊನೆಯ ದಿನ ಅಂದರೆ 16ರಂದು ಸಂಜೆ 7.30ರಿಂದ 10.30ರವರೆಗೆ ‘ಕನ್ನಡ ರಸ ಸಂಜೆ’ ಕಾರ್ಯಕ್ರಮ ನೀಡಲಿದೆ.

ನಾಟಕ: 15ರಂದು ರಾತ್ರಿ 8ರಿಂದ 10.30ರವರೆಗೆ ಮೈಸೂರಿನ ನಟನ ತಂಡ ‘ಚೋರ ಚರಣದಾಸ’ ನಾಟಕವನ್ನು ಪ್ರದರ್ಶಿಸಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಅಕ್ಟೋಬರ್‌ 13: ಬನ್ನೂರು ಗ್ರಾಮದ ರಂಗಸ್ವಾಮಿ ತಂಡದಿಂದ ನಗಾರಿ (ಸಂಜೆ 4.30–4.50), ಗುಂಡ್ಲುಪೇಟೆಯ ಬಿ. ಸಿದ್ದನಗೌಡ ಅವರಿಂದ ಹಿಂದೂಸ್ಥಾನಿ ಸಂಗೀತ (ಸಂಜೆ 4.50–5.20), ಬಿಳಿಗಿರಿರಂಗನ ಬೆಟ್ಟದ ಪುಷ್ಪಮಾಲೆ ಕಲಾ ಸಂಘದವರಿಂದ ಸೋಲಿಗರ ಗೊರುಕನ ನೃತ್ಯ (ಸಂಜೆ 5.20–5.45), ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ (5.45–6.45)

ಅಕ್ಟೋಬರ್ 14: ರಾಮಸಮುದ್ರದ ರಾಜಪ್ಪ ಮತ್ತು ತಂಡದವರಿಂದ ಜನಪದ ಸಂಗೀತ (ಸಂಜೆ 4.30–4.50), ರಾಮಸಮುದ್ರದ ಶ್ರೀ ಮಲೆ ಮಹದೇಶ್ವರ ಕಲಾತಂಡದಿಂದ ಬೀಸು ಕಂಸಾಳೆ (ಸಂಜೆ 4.50–5.20), ಯಳಂದೂರಿನ ಅರುಣ್ ಕುಮಾರ್ ತಂಡದಿಂದ ಭಾವಗೀತೆ (ಸಂಜೆ 5.20–5.40 ) ಚಾಮರಾಜನಗರ ನಗರದ ಶಾರದ ನೃತ್ಯ ಶಾಲೆ ಕಲಾವಿದರಿಂದ ಭರತನಾಟ್ಯ (ಸಂಜೆ 5.40 – 6), ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ (ಸಂಜೆ 6–7), ಖ್ಯಾತ ಪ್ರಭಾತ್ ಕಲಾವಿದರಿಂದ ನೃತ್ಯವೈಭವ (ಸಂಜೆ 7–8.15). 

ಅಕ್ಟೋಬರ್ 15: ಹನೂರಿನ ಕೆಂಪಮಹದೇಶ್ವರ ಸೋಲಿಗರ ನೃತ್ಯ ತಂಡದಿಂದ ಪಿನಾಶಿ ನೃತ್ಯ (ಸಂಜೆ 4.30ರಿಂದ 5 ಗಂಟೆ), ಗುಂಡ್ಲುಪೇಟೆಯ ನಾರಾಯಣ್ ಮತ್ತು ಪರಿವರ್ತನ ತಂಡದಿಂದ ತತ್ವಪದ ಹಾಗೂ ಜನಪದ ಸಂಗೀತ (ಸಂಜೆ 5–5.30), ಕೊಳ್ಳೇಗಾಲದ ಎಂ.ಸಿ ಸಿಂಚನ ಅವರಿಂದ ನೃತ್ಯ (5.30 –5.45), ಗುಂಡ್ಲುಪೇಟೆಯ ಮೋಹನ್ ಕುಮಾರ್ ಮತ್ತು ತಂಡದಿಂದ ಜಾನಪದ ನೃತ್ಯ (5.45–6.05), ಚಾಮರಾಜನಗರದ ಮಹೇಶ್ ಮತ್ತು ತಂಡದಿಂದ ಜಾನಪದ ಸಂಗೀತ (6.05– 6.30), ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ (6.30 –7.30), ಅಂಡಮಾನ್ ಮತ್ತು ನಿಕೋಬಾರ್ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದವರಿಂದ ನಿಕೋಬಾರಿ ನೃತ್ಯ (7.30–8). 

ಅಕ್ಟೋಬರ್ 16: ರಾಮಸಮುದ್ರದ ಆರ್.ಸಿ. ಸಿದ್ದರಾಜು ಮತ್ತು ತಂಡದವರಿಂದ ಡೋಲು ಕುಣಿತ (ಸಂಜೆ 4.30–4.45), ಗುಂಡ್ಲುಪೇಟೆಯ ಪೃಥ್ವಿ ಬುದ್ದಿಮಾಂಧ್ಯ ಶಾಲೆ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ (4.45–5), ಮಲೆಯೂರು ಡಾ. ಪ್ರೀತಮ್ ಅವರಿಂದ ಸುಗಮ ಸಂಗೀತ ಮತ್ತು ದೇವರ ನಾಮ (5–5.30) ಕಾರ್ಯಕ್ರಮವಿದೆ. ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ ಎಂ. ಕೈಲಾಸಮೂರ್ತಿ ಮತ್ತು ತಂಡದಿಂದ ಜಾನಪದ ಗಾಯನ (5.40–6), ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಎಸ್. ಜೈಗುರು ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಜಾನಪದ ನೃತ್ಯ (6–6.30), ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ (6.30 –7.30)

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !