ಶುಕ್ರವಾರ, ಏಪ್ರಿಲ್ 3, 2020
19 °C
ಚಾಮರಾಜನಗರ 61, ಕೊಳ್ಳೇಗಾಲದಲ್ಲಿ 45 ಮತಗಟ್ಟೆ

60 ವಾರ್ಡ್‌ಗಳಿಗೆ ಆಗಸ್ಟ್‌ 31ರಂದು ಮತದಾನ: ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ ‌ಶುಕ್ರವಾರ (ಆಗಸ್ಟ್‌ 31) ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಒಟ್ಟು 62 ವಾರ್ಡ್‌ಗಳ ಪೈಕಿ, 60 ವಾರ್ಡ್‌ಗಳಿಗೆ ಮತದಾನ ನಡೆಯಲಿದೆ. ಅಗತ್ಯ ಬಿದ್ದ ಕಡೆ ಮರುಮತದಾನಕ್ಕೆ ಸೆಪ್ಟೆಂಬರ್‌ 2ರಂದು ದಿನಾಂಕ ನಿಗದಿ ಪಡಿಸಲಾಗಿದೆ. ಸೆಪ್ಟೆಂಬರ್‌ 3ರಂದು ಫಲಿತಾಂಶ ಹೊರಬೀಳಲಿದೆ. 

ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 11 ಮತಗಟ್ಟೆಗಳನ್ನು ಅತಿ ಸೂಕ್ಷ್ಮ, 14 ಸೂಕ್ಷ್ಮ ಮತ್ತು 36 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಕೊಳ್ಳೇಗಾಲದಲ್ಲಿ 45 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 10 ಅತಿ ಸೂಕ್ಷ್ಮ, 19 ಸೂಕ್ಷ್ಮ ಮತ್ತು 36 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ. 

ಮತಯಂತ್ರಗಳ ಬಳಕೆ: ಈ ಚುನಾವಣೆಯಲ್ಲಿ ಮತಯಂತ್ರಗಳು ಬಳಕೆಯಾಗಲಿವೆ.

ಚಾಮರಾಜನಗರದಲ್ಲಿ 75 ಬ್ಯಾಲೆಟ್‌ ಯೂನಿಟ್‌ ಹಾಗೂ ಅಷ್ಟೇ ನಿಯಂತ್ರಣ ಯೂನಿಟ್‌ಗಳನ್ನು ಬಳಸಲಾಗುವುದು. ಕೊಳ್ಳೇಗಾಲದಲ್ಲಿ 55 ಬ್ಯಾಲೆಟ್‌ ಯೂನಿಟ್‌ ಹಾಗೂ ಅಷ್ಟೇ ಸಂಖ್ಯೆಯ ನಿಯಂತ್ರಣ ಯೂನಿಟ್‌ಗಳನ್ನು ಬಳಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ

ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಶುಕ್ರವಾರ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

‌ವೇತನಸಹಿತ ರಜೆ ನೀಡಲು ಆದೇಶ: ಕಾರ್ಮಿಕ ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಮಿಕರಿಗೆ ವೇತನಸಹಿತ ರಜೆ ನೀಡುವಂತೆ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ.

ಆದೇಶವನ್ನು ಪಾಲಿಸದಿದ್ದರೆ, ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಚಾಮರಾಜನಗರ ನಗರಸಭೆ – 31
ಚಾಮರಾಜನಗರದಲ್ಲಿರುವ ವಾರ್ಡ್‌ಗಳು – 53,767

ಚಾಮರಾಜನಗರದ ಒಟ್ಟು ಮತದಾರರು

26,106 – ಪುರುಷ ಮತದಾರರ ಸಂಖ್ಯೆ
27,650 – ಮಹಿಳಾ ಮತದಾರರು
7 – ಇತರೆ ಮತದಾರರು
4 – ಸೇವಾ ಮತದಾರರು
31– ಕೊಳ್ಳೇಗಾಲ ನಗರಸಭೆ

ಕೊಳ್ಳೇಗಾಲದಲ್ಲಿರುವ ಒಟ್ಟು ವಾರ್ಡ್‌ಗಳು

44,455 –  ಕೊಳ್ಳೇಗಾಲದ ಒಟ್ಟು ಮತದಾರರ ಸಂಖ್ಯೆ
21,963 – ಪುರುಷ ಮತದಾರರು
22,488 – ಮಹಿಳಾ ಮತದಾರರು
4 – ಇತರೆ ಮತದಾರರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು