ಗೌರಿ– ಗಣೇಶ ಹಬ್ಬಕ್ಕೆ ತರಕಾರಿ, ಹೂ, ಹಣ್ಣುಗಳ ಬೆಲೆ ಹೆಚ್ಚಳ ನಿರೀಕ್ಷೆ

7
ವಾರದ ಮಧ್ಯದಲ್ಲಿ ಹಬ್ಬದ ಸಂಭ್ರಮ

ಗೌರಿ– ಗಣೇಶ ಹಬ್ಬಕ್ಕೆ ತರಕಾರಿ, ಹೂ, ಹಣ್ಣುಗಳ ಬೆಲೆ ಹೆಚ್ಚಳ ನಿರೀಕ್ಷೆ

Published:
Updated:
Deccan Herald

ಚಾಮರಾಜನಗರ: ಈ ವಾರ ಗೌರಿ ಗಣೇಶ ಹಬ್ಬ ಇರುವುದರಿಂದ ತರಕಾರಿ, ಹೂ ಮತ್ತು ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.

ಬಂದ್‌ ಬಿಸಿ: ಸೋಮವಾರ ಕರೆ ನೀಡಿದ್ದ ಭಾರತ್‌ ಬಂದ್‌ನ ಬಿಸಿ ವ್ಯಾಪಾರಿಗಳಿಗೆ ಸ್ವಲ್ಪ ತಟ್ಟಿತ್ತು. ಬಸ್‌ಗಳ ಸಂಚಾರ ಇಲ್ಲದ ಪರಿಣಾಮ ಗ್ರಾಮೀಣ ಭಾಗದ ಜನರು ಮಾರುಕಟ್ಟೆಯತ್ತ ಸುಳಿದಿರಲಿಲ್ಲ. ಮಾರುಕಟ್ಟೆಯೂ ಪೂರ್ಣ ಪ್ರಮಾಣದಲ್ಲಿ ತೆರೆದಿರಲಿಲ್ಲ. ಪಟ್ಟಣದ ಜನರು ಮಾತ್ರ ತರಕಾರಿ, ಹೂವು, ಹಣ್ಣುಗಳನ್ನು ಖರೀದಿಸುತ್ತಿದ್ದದ್ದು ಕಂಡುಬಂತು.

ಹೂವಿನ ಧಾರಣೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಸೇವಂತಿಗೆ ಮತ್ತು ಚೆಂಡು ಹೂವು ಸ್ವಲ್ಪ ತುಟ್ಟಿಯಾಗಿದೆ. ಕೆ.ಜಿ ಸೇವಂತಿಗೆ ಕಳೆದ ವಾರ ₹40 ಇತ್ತು. ಸೋಮವಾರ ₹80ರಿಂದ ₹100 ಇತ್ತು. ₹5ರಿಂದ ₹10ಕ್ಕೆ ಮಾರಾಟವಾಗುತ್ತಿದ್ದ ಚೆಂಡು ಹೂವಿಗೆ ಸೋಮವಾರ ₹15ರಿಂದ ₹20 ಇತ್ತು. ಉಳಿದ ಹೂವುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. 

ಗಣೇಶ ಹಬ್ಬಕ್ಕೆ ಎರಡು ಮೂರು ದಿನಗಳು ಇರುವಾಗಲೇ ವ್ಯಾಪಾರ ಚುರುಕುಗೊಳ್ಳುತ್ತದೆ. ಆದರೆ, ಸೋಮವಾರ ಬಂದ್‌ ಇದ್ದರಿಂದ ವ್ಯಾಪಾರ ನಡೆದಿಲ್ಲ. ಮಂಗಳವಾರದಿಂದ ಗುರುವಾರದವರೆಗೂ ಹೂವಿನ ಮಾರಾಟ ಜೋರಾಗಿ ನಡೆಯಲಿದೆ ಎಂದು ಬಿಡಿ ಹೂವುಗಳ ವ್ಯಾಪಾರಿ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.  

ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬುಧವಾರದ ನಂತರ ಹೆಚ್ಚಳವಾಗಬಹುದು ಎಂದು ಹೇಳುತ್ತಾರೆ ವ್ಯಾಪಾರಿಗಳು.

ಹಣ್ಣುಗಳು (ಹಾಪ್‌ಕಾಮ್ಸ್‌ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ, ಕೆಜಿಗೆ ₹ಗಳಲ್ಲಿ)

ದಾಳಿಂಬೆ;60–70

ದ್ರಾಕ್ಷಿ;70–80

ಕಿತ್ತಳೆ;60–70

ಪಚ್ಚೆ ಬಾಳೆ;25–30

ಸೇಬು;90–120

ಸೀಬೆಕಾಯಿ;25–30

ತರಕಾರಿಗಳು (ಹಾಪ್‌ಕಾಮ್ಸ್‌ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ, ಪ್ರತಿ ಕೆಜಿಗೆ ₹ಗಳಲ್ಲಿ)

ಕ್ಯಾರೆಟ್‌;20–30

ಬದನೆಕಾಯಿ;15–20

ಮೂಲಂಗಿ;10–15

ಮಂಗಳೂರು ಸೌತೆ;15–20

ತೆಂಗಿನಕಾಯಿ;12–27

ಈರುಳ್ಳಿ;17–20

ಟೊಮೆಟೊ;8–10

ಆಲೂಗಡ್ಡೆ;20

ಬೀನ್ಸ್‌;20

ಪಪ್ಪಾಯಿ;20

ನುಗ್ಗೆಕಾಯಿ;30

ಬೀಟ್‌ರೂಟ್‌;16–20

ಹೂವು(ಬಿಡಿ ಮಾರುಕಟ್ಟೆ ಮಳಿಗೆಯಲ್ಲಿ ಕೆಜಿಗೆ)

ಕಾಕಡ;200

ಕನಕಾಂಬರ;500–600

ಚೆಂಡು ಹೂವು;15–20

ಮೊಳ್ಳೆ ಹೂವು;100–200

ಸೇವಂತಿಗೆ;80–100

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !