ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟ್ವಾದ...

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜಾತ್ಯತೀತರೆಂದರೆ ಯಾರು? ಯಾವ ಕ್ಷೇತ್ರದಲ್ಲಿ ಯಾವ ಜಾತಿಯ ಮತದಾರರು ಹೆಚ್ಚಿದ್ದಾರೆ ನೋಡಿ, ಆ ಹೆಚ್ಚು ಜನ ಇರೋ ಜಾತಿಯವನಿಗೆ ಎಲೆಕ್ಷನ್ ಟಿಕೆಟ್ ಕೊಡುವ ಸೋಗಲಾಡಿಗಳಾ? ತಮ್ಮನ್ನು ತಾವು ಜಾತ್ಯತೀತರು ಅಂತ ಹೇಳಿಕೊಂಡು ಭಾಷಣ ಬಿಗಿಯುತ್ತಾ ಬೀಗಿದವರು ಮುಖವಾಡ ಕಳಚಿ ಬೆತ್ತಲಾಗುವುದು ಎಲೆಕ್ಷನ್ ಟೈಮಲ್ಲೇ.
-ರವಿ ಕುಮಾರ್‌, @ReactingNuclear

*
ಕರ್ನಾಟಕದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲ ಪಕ್ಷದವರಿಗೆ ಬಸವಣ್ಣ, ವಿಶ್ವೇಶ್ವರಯ್ಯ ನೆನಪಾಗುತ್ತಿದ್ದಾರೆ. ಉಳಿದ ದಿನಗಳಲ್ಲಿ ಎಂದಿನಂತೆ ಇಂದಿರಾ, ರಾಜೀವ್, ಅಟಲ್, ಶ್ಯಾಂ ಪ್ರಸಾದ್‌ಗಳೇ ಇವರ ದೈವ.
-ಜಯತೀರ್ಥ್ ನಾಡಗೌಡ @jayateerthbn

*
ಚುನಾವಣೆ ಒಂದು ರೀತಿಯ ಬಾಳೆಎಲೆಯಲ್ಲಿ ಹಾಕಿರುವ ಊಟ ಇದ್ದಂತೆ. ಅಲ್ಲಿ ಧರ್ಮ ಅನ್ನುವ ಕೋಸಂಬರಿ, ಜಾತಿ ಅನ್ನುವ ಹಪ್ಪಳ, ರಾಷ್ಟ್ರೀಯ ವಿಷಯಗಳು ಅನ್ನುವ ಉಪ್ಪಿನಕಾಯಿ ಎಲ್ಲವೂ ಇರಲಿ, ತೊಂದರೆ ಇಲ್ಲ. ಆದರೆ ಊಟಕ್ಕೆ ಮುಖ್ಯವಾದದ್ದು ಇದಾವುದೂ ಅಲ್ಲ, ಅದು ಜನರ ಮೂಲಭೂತ ಅಗತ್ಯಗಳಾದ ನೀರು, ಆರೋಗ್ಯ, ಶಿಕ್ಷಣ, ಉದ್ಯೋಗ, ನೆಮ್ಮದಿಯ ಬದುಕನ್ನು ಒಳಗೊಂಡ ಅನ್ನ, ಸಾರು, ಪಲ್ಯ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಸೈಡ್ ಡಿಶ್ ಅಲ್ಲಿ ಕಳೆದು ಹೋಗದೆ, ಮೇನ್ ಕೋರ್ಸ್ ಏನು ಅನ್ನುವುದನ್ನು ನೆನಪಿಟ್ಟುಕೊಂಡು ಮತ ಹಾಕಿ.
-ವಸಂತ್‌ ಶೆಟ್ಟಿ, ‏ @vasantshetty81

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT