ಮಂಗಳವಾರ, ನವೆಂಬರ್ 24, 2020
25 °C

ಡೆಬಿಟ್ ಕಾರ್ಡ್ ಬದಲಿಸಿ ವಂಚನೆ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಟಿಎಂ ಘಟಕಕ್ಕೆ ಹೋಗುತ್ತಿದ್ದ ಬ್ಯಾಂಕ್ ಖಾತೆದಾರರ ಡೆಬಿಟ್ ಕಾರ್ಡ್‌ಗಳನ್ನು ಬದಲಿಸಿ ವಂಚಿಸುತ್ತಿದ್ದ ಆರೋಪದಡಿ ಅರುಣ್‌ ಕುಮಾರ್ (30) ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರಿನ ಅರುಣ್ ಕುಮಾರ್, ಅಪರಾಧ ಹಿನ್ನೆಲೆಯುಳ್ಳವ. ಆತನಿಂದ ₹ 1.6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.

'ಎಟಿಎಂ ಘಟಕಗಳ ಬಳಿ ಆರೋಪಿ ನಿಲ್ಲುತ್ತಿದ್ದ. ಎಟಿಎಂ ಬಳಕೆ ಮಾಡಲು ಗೊತ್ತಿರದವರು, ಆತನ ಸಹಾಯ ಕೇಳುತ್ತಿದ್ದರು‌. ಸಹಾಯದ ಸೋಗಿನಲ್ಲಿ ಕಾರ್ಡ್ ಪಡೆಯುತ್ತಿದ್ದ ಆರೋಪಿ, ಅದನ್ನು ಬದಲಿಸುತ್ತಿದ್ದ. ಖಾತೆದಾರರಿಗೆ ನಕಲಿ ಕಾರ್ಡ್‌ ಕೊಡುತ್ತಿದ್ದ. ನಂತರ ಅಸಲಿ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ. ಆತನ ವಿರುದ್ಧ ಶಿರಾ ಹಾಗೂ ಮಧುಗಿರಿ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿದ್ದವು' ಎಂದೂ ತಿಳಿಸಿದರು.

'ಬಾಗಲಗುಂಟೆ ಠಾಣೆ ವ್ಯಾಪ್ತಿಯ ನಾಗಸಂದ್ರದ ಮಂಜುನಾಥ ನಗರದಲ್ಲಿ ಇದೇ 10ರಂದು ಆರೋಪಿ ಕೃತ್ಯ ಎಸಗಿದ್ದ. ₹ 32,000 ಡ್ರಾ ಮಾಡಿಕೊಂಡು ವಂಚಿಸಿದ್ದ. ಆ ಬಗ್ಗೆ ದಾಖಲಾದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ವಂಚನೆಯಿಂದ ಬಂದಿದ್ದ ಹಣದಲ್ಲಿ ಆರೋಪಿ ಚಿನ್ನದ ಆಭರಣ ಖರೀದಿಸಿದ್ದ. ಐಷಾರಾಮಿ ಜೀವನ ನಡೆಸುತ್ತಿದ್ದ' ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು