ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಕ್ಷೇತ್ರಗಳಲ್ಲಿ 122 ನಾಮಪತ್ರ ಸಲ್ಲಿಸಿದ 93 ಅಭ್ಯರ್ಥಿಗಳು

ವಿಧಾನಸಭಾ ಚುನಾವಣೆ: 93 ಅಭ್ಯರ್ಥಿಗಳಿಂದ ಉಮೇದುವಾರಿಕೆ
Last Updated 25 ಏಪ್ರಿಲ್ 2018, 8:58 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಏ. 17 ರಿಂದ 24ರವರೆಗೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 93 ಅಭ್ಯರ್ಥಿಗಳು 122 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಆರಂಭವಾದ ಏಪ್ರಿಲ್ 17 ರಿಂದ 24ರವರೆಗೆ ಮೊಳಕಾಲ್ಮುರು ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು 15 ನಾಮಪತ್ರ ಸಲ್ಲಿಸಿದ್ದಾರೆ. ಚಳ್ಳಕೆರೆಯಲ್ಲಿ 4 ಅಭ್ಯರ್ಥಿಗಳು 5 ನಾಮಪತ್ರ, ಚಿತ್ರದುರ್ಗದಲ್ಲಿ 24 ಅಭ್ಯರ್ಥಿಗಳು 31 ನಾಮಪತ್ರ ಸಲ್ಲಿಕೆಯಾಗಿವೆ. ಹಿರಿಯೂರು ಕ್ಷೇತ್ರಕ್ಕೆ ಆಯ್ಕೆ ಬಯಸಿ 17 ಅಭ್ಯರ್ಥಿಗಳು 24 ನಾಮಪತ್ರ ಸಲ್ಲಿಸಿದ್ದರೆ ಹೊಸದುರ್ಗ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು 21 ಉಮೇದುವಾರಿಕೆಗಳನ್ನು ಹಾಕಿದ್ದಾರೆ. ಹೊಳಲ್ಕೆರೆ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳಿಂದ 26 ನಾಮಪತ್ರಗಳು ಸ್ವೀಕಾರವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜೋತ್ಸ್ನಾ ತಿಳಿಸಿದ್ದಾರೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಮಂಗಳವಾರ ಸಮಾಜವಾದಿ ಪಕ್ಷದಿಂದ ಕೆ.ಎಸ್. ಸರಸ್ವತಿ, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದಿಂದ ಜಿ.ಎಸ್. ನಾಗರಾಜ, ಬಿಜೆಪಿಯಿಂದ ಜಿ.ಎಚ್. ತಿಪ್ಪಾರೆಡ್ಡಿ ಎರಡು ನಾಮಪತ್ರ, ಸಾಮಾನ್ಯ ಜನತಾ ಪಾರ್ಟಿಯಿಂದ ಜಗದೀಶ್, ಕಾಂಗ್ರೆಸ್‌ನಿಂದ ಎಚ್.ಎ. ಷಣ್ಮುಖಪ್ಪ, ಜೆಡಿಎಸ್‌ನಿಂದ ಕೆ.ಸಿ. ವೀರೇಂದ್ರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸೈಯದ್ ಶಹಾಬುದ್ದೀನ್ ಹುಸೇನಿ, ಕೆಜೆಪಿಯಿಂದ ಎಚ್.ಎಂ. ಹನುಮಪ್ಪ, ಪಕ್ಷೇತರರಾಗಿ ಎನ್. ಸುರೇಶ್ , ಎಂ. ಕಿರಣ್, ಗಣೇಶ, ಸಿ. ಶಿವುಯಾದವ್ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT