ಬಾಗೇಪಲ್ಲಿ: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕುಗಳ ನೋಂದಾಯಿತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಪರೀಕ್ಷೆ ನೋಡಲ್ ಅಧಿಕಾರಿ ಪಿ.ಎನ್.ನಾರಾಯಣಸ್ವಾಮಿ ಮತ್ತು ವಿವಿಧ ವಿಷಯಗಳ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಕನ್ನಡ ಶಿಕ್ಷಕ ಆರ್.ಸುಧಾಕರ್, ಇಂಗ್ಲಿಷ್ ಶಿಕ್ಷಕ ಇ.ಮಂಜುನಾಥ್, ಹಿಂದಿ ಶಿಕ್ಷಕ ಈಶ್ವರಾಚಾರಿ, ಗಣಿತ ಶಿಕ್ಷಕ ಎನ್.ಕುಮಾರ್, ವಿಜ್ಞಾನ ಶಿಕ್ಷಕ ಮಹಮದ್ ಹಮೀದ್ ಮತ್ತು ಸಮಾಜ ಶಿಕ್ಷಕ ಗಂಗರಾಜು ವಿದ್ಯಾರ್ಥಿಗಳ ಸಂದೇಹ ನಿವಾರಣೆ ಮಾಡಿದರು.

ಎರಡೂ ತಾಲ್ಲೂಕುಗಳಿಂದ ಒಟ್ಟು 99 ಪ್ರಶ್ನೆಗಳು ಸ್ವೀಕೃತವಾದವು. ಇವುಗಳಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿದ 18, ಇಂಗ್ಲಿಷ್ 15, ಹಿಂದಿ 15, ಗಣಿತದ 17, ವಿಜ್ಞಾನದ 18 ಹಾಗೂ ಸಮಾಜ ವಿಜ್ಞಾನದ 16 ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ಶಿಕ್ಷಕರು ಉತ್ತರಿಸಿ ಮಾರ್ಗದರ್ಶನ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ‘ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕುಗಳ ವಿದ್ಯಾರ್ಥಿಗಳಿಂದ ಬಂದ 99 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಮಕ್ಕಳ ಸಂದೇಹಗಳನ್ನು ನಿವಾರಿಸಿ ಪರೀಕ್ಷಾ ಭೀತಿ ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಲಾಗಿದೆ ಎಂದರು.

ತಾಲ್ಲೂಕು ನೋಡಲ್ ಅಧಿಕಾರಿ ಪಿ.ಎನ್.ನಾರಾಯಣಸ್ವಾಮಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಒಟ್ಟು 2201 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 9 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆ ಸಮಗ್ರ ಸಿದ್ಧತೆ ಮತ್ತು ವ್ಯವಸ್ಥೆಗಳ ಕುರಿತು ಫೋನ್-ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.