ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಿನ ಮನೆಯಲ್ಲಿ ಕಳ್ಳತನ ಮಾಡಿದ್ದವರ ಬಂಧನ

Published : 6 ಸೆಪ್ಟೆಂಬರ್ 2024, 16:04 IST
Last Updated : 6 ಸೆಪ್ಟೆಂಬರ್ 2024, 16:04 IST
ಫಾಲೋ ಮಾಡಿ
Comments

ಗೌರಿಬಿದನೂರು: ತಾಲ್ಲೂಕಿನ ಅಲಕಾಪುರ ಕ್ರಾಸ್ ಬಳಿ ಆಗಸ್ಟ್ 16ರಂದು ನಡೆದ ಅಪಘಾತದಲ್ಲಿ ಸರ್ದಾರ್ ಪಾಷಾ ಸಾವನ್ನಪ್ಪಿದ್ದರು. ಅದೇ ರಾತ್ರಿ ಅವರ ಮನೆಯಲ್ಲಿ ಕಳ್ಳತವಾಗಿತ್ತು. ಈ ಪ್ರಕರಣವನ್ನು ಮಂಚೇನಹಳ್ಳಿ ಪೊಲೀಸರು ಭೇದಿಸಿದ್ದಾರೆ.

ವೃತ್ತ ನಿರೀಕ್ಷಕ ಕೆ.ಪಿ ಸತ್ಯನಾರಾಯಣ್ ನೇತೃತ್ವದಲ್ಲಿ ತಂಡ ರಚಿಸಿ ಇದೇ ಗ್ರಾಮದ ಸಿದ್ದಿಕ್ (30), ಇಲಿಯಾಜ್ (26), ಜೆಂಶೀರ್ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 30 ಗ್ರಾಂ ಬಂಗಾರ, ಬೆಳ್ಳಿ ಸಾಮಾನುಗಳ ಸಮೇತ ಒಟ್ಟು ₹2 ಲಕ್ಷದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕದ್ದ ಮಾಲನ್ನು ದೊಡ್ಡಬಳ್ಳಾಪುರದ ಅಂಗಡಿಗೆ ಮಾರಾಟ ಮಾಡಿದ್ದರು. ಬಂಧಿತರು ಅನುಮಾನ ಬರದಂತೆ ಸಾವಿನ ಮನೆಗೆ ಬಂದು ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮೂರ್ತಿ, ಪ್ರಭಾಕರ್, ಗೋಪಾಲ್, ರಾಜಶೇಖರ, ಸಂತೋಷ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT