ಕನ್ನಡ ಸಾಹಿತ್ಯ ಮೌಲ್ಯಗಳ ಗಣಿ

7
ವಿದ್ಯಾ ಅಮೃತ ಪದವಿ ಪೂರ್ವ ಕಾಲೇಜಿನಲ್ಲಿ ‘ಕಾವ್ಯ ಸುಧೆ’ ಕಾರ್ಯಕ್ರಮ

ಕನ್ನಡ ಸಾಹಿತ್ಯ ಮೌಲ್ಯಗಳ ಗಣಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಕನ್ನಡ ಭಾಷೆಯು ಅಪಾರ ಸಾಹಿತ್ಯ ಸಂಪತ್ತನ್ನು ಹೊಂದಿದೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಓದುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಕೊಳ್ಳಬೇಕು’ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪಾತಮುತ್ತಕದಹಳ್ಳಿ ಚಲಪತಿಗೌಡ ಹೇಳಿದರು.

ನಗರದ ವಿದ್ಯಾ ಅಮೃತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ಕಾವ್ಯ ಸುಧೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯದ ಒಂದು ಭಾಗವಾದ ಚುಟುಕು ಸಾಹಿತ್ಯ ಕಡಿಮೆ ಶಬ್ದಗಳಲ್ಲಿ ವಿಶಾಲ ಅರ್ಥದ ಮೂಲಕ ಸಮಾಜದ ಓರೆಕೋರೆಯನ್ನು ತಿದ್ದುವ ಕೆಲಸ ಮಾಡುತ್ತದೆ. ಈ ಸಾಹಿತ್ಯ ಪ್ರಕಾರವನ್ನು ಅಭ್ಯಸಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು’ ಎಂದು ತಿಳಿಸಿದರು.

‘ಇತ್ತಿಚೆಗೆ ವಿದ್ಯಾರ್ಥಿಗಳು ಚಿತ್ರ ತಾರೆಯರನ್ನು ಹಾಗೂ ಕ್ರಿಕೆಟ್ ಆಟಗಾರರನ್ನು ಮಾದರಿಯನ್ನಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದು ಸಲ್ಲದು, ಸಾಕಿ ಸಲುಹಿದ ತಂದೆ ತಾಯಿಗಳನ್ನು, ವಿದ್ಯೆ ಕಲಿಸಿದ ಗುರುಗಳನ್ನು ಮಾದರಿ ವ್ಯಕ್ತಿಗಳನ್ನಾಗಿ ತೆಗೆದುಕೊಂಡು ಜೀವನದಲ್ಲಿ ಮುನ್ನಡೆಯಬೇಕು’ ಎಂದರು.

ಸಾಹಿತಿ ಇಂದುಮತಿ ಮಾತನಾಡಿ, ‘ವಿದ್ಯಾರ್ಥಿಗಳು ತಪ್ಪದೆ ಕನ್ನಡ ಪತ್ರಿಕೆಗಳನ್ನು ಓದುವುದು ರೂಢಿಸಿಕೊಳ್ಳಬೇಕು. ಅಂಕಣ ಬರಹಗಳನ್ನು ಅಭ್ಯಾಸ ಮಾಡುವುದರಿಂದ ಹೆಚ್ಚಿನ ಜ್ಞಾನ ಪಡೆಯಬಹುದು. ಆ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚುಟುಕು ವಾಚನ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು. ಕಾಲೇಜಿನ ಹಂಗಾಮಿ ಪ್ರಾಂಶುಪಾಲೆ ರೂಪಾ, ಕವಿಯತ್ರಿಯರಾದ ಗೌತಮಿ, ಸುಶೀಲಾ ಮಂಜುನಾಥ್ ಕಾದಂಬರಿಗಾರ್ತಿ ಸರಸಮ್ಮ ಮತ್ತು ಕ.ಸಾ.ಪ. ಮಹಿಳಾ ಪ್ರತಿನಿಧಿ ಪ್ರೇಮಲೀಲಾ ವೆಂಕಟೇಶ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !