ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: 9 ಶಾಲೆಯಲ್ಲಿ ಸ್ಮಾರ್ಟ್ ತರಗತಿಗೆ ಚಾಲನೆ

ರೈಟ್‌ ಟು ಲೀವ್‌ ಫೌಂಡೇಶನ್‌ನಿಂದ ಸೌಲಭ್ಯ ವಿತರಣೆ
Last Updated 8 ಅಕ್ಟೋಬರ್ 2021, 6:43 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂತ್ರಜ್ಞಾನದ ಬಳಕೆಯಿಂದ ಸ್ಮಾರ್ಟ್ ತರಗತಿ ಕಲಿಯಲು ನೆರವು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ 14 ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ತರಗತಿಗಳಿಗೆ ಅನುಕೂಲ ಕಲ್ಪಿಸಲು ಎಲ್‍ಇಡಿ ಟಿ.ವಿ ವಿತರಣೆ ಮಾಡಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ರೈಟ್ ಟು ಲೀವ್ ಫೌಂಡೇಶನ್ ನಿರ್ದೇಶಕ ಟಿ.ವಿ. ಶ್ರೀಧರ್ ತಿಳಿಸಿದರು.

ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ರೈಟ್ ಟು ಲೀವ್ ಫೌಂಡೇಶನ್‌ನಿಂದ 9 ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ತರಗತಿಗಳಿಗೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ನಗರ ಪ್ರದೇಶದ ವಿದ್ಯಾರ್ಥಿಗಳ ಜೊತೆಯಲ್ಲಿಯೇ ಗ್ರಾಮೀಣ ವಿದ್ಯಾರ್ಥಿಗಳು ಸಹ ಕಲಿಕೆಯಲ್ಲಿ ಮುಂದೆ ಬರಬೇಕು. ಗುಣಾತ್ಮಕ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ಫೌಂಡೇಶನ್ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಎಲ್‌ಇಡಿ ಟಿ.ವಿಗಳ ಮೂಲಕ ಶಿಕ್ಷಣ ನೀಡುತ್ತಿದೆ ಎಂದರು.

ಕಳೆದ ವರ್ಷ ಗೂಳೂರು ಹೋಬಳಿಯ 5 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ತರಗತಿ ಮಾಡಲು ಎಲ್‍ಇಡಿ ಟಿ.ವಿ ವಿತರಣೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಫೌಂಡೇಶನ್‌ನಿಂದ 9 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್ ತರಗತಿಗೆ ಎಲ್‍ಇಡಿ ಟಿ.ವಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪೈಪೋಟಿ ನೀಡಬೇಕು. ಕನ್ನಡ ಭಾಷೆಯ ಜೊತೆಗೆ ಇಂಗ್ಲಿಷ್ ಲಿಯಬೇಕು. ಭಾಷೆ ಕಲಿಯಲು ನಿರಂತರವಾಗಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ ಮಾತನಾಡಿ, ತಾಲ್ಲೂಕು ಗಡಿ ಪ್ರದೇಶವಾಗಿದ್ದು, ಯಾವುದೇ ನದಿ-ನಾಲೆಗಳು ಇಲ್ಲ. ಶಿಕ್ಷಣ ಕ್ರಾಂತಿಯಿಂದ ಮಾತ್ರ ತಾಲ್ಲೂಕು ಪ್ರಗತಿ ಹೊಂದಲು ಸಾಧ್ಯ ಎಂದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರಿ ಸೌಲಭ್ಯದ ಜೊತೆಗೆ ದಾನಿಗಳು, ಸಂಘ-ಸಂಸ್ಥೆಗಳ ನೆರವು ಅವಶ್ಯಕತೆ ಇದೆ. ಸ್ಮಾರ್ಟ್ ತರಗತಿ ಮಾಡಲು ಮೊದಲು ಶಿಕ್ಷಕ-ಶಿಕ್ಷಕಿಯರು ಅಧ್ಯಯನ ಮಾಡಿದ ನಂತರ ಮಕ್ಕಳಿಗೆ ಬೋಧಿಸಬೇಕು. ಫೌಂಡೇಷನ್‌‌ನಿಂದ ತಾಲ್ಲೂಕಿನ 21 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಮಾಡಲು ಎಲ್‌ಇಡಿ ಟಿ.ವಿ ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನ ಯಲ್ಲಂಪಲ್ಲಿ, ಘಂಟಂವಾರಿಪಲ್ಲಿ, ಪಾಳ್ಯಕೆರೆ, ಸೋಮನಾಥಪುರ, ಸರ್ಕಾರಿ ಪ್ರೌಢಶಾಲೆ ಹಾಗೂ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಪಾತಪಾಳ್ಯ, ಆಚೇಪಲ್ಲಿ, ನಲ್ಲಪರೆಡ್ಡಿಪಲ್ಲಿ, ತಿಮ್ಮಂಪಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ವೆಂಕಟರಾಮಪ್ಪ, ರೈಟ್ ಟು ಲೀವ್ ಫೌಂಡೇಷನ್ ವ್ಯವಸ್ಥಾಪಕ ವೀರೇಶ್, ಕಾರ್ಯಕ್ರಮದ ಯೋಜನಾ ಸಂಯೋಜಕ ವೈ.ಎನ್. ಹರೀಶ್, ಯಂಗ್ ಲೈವ್ಸ್ ಫೌಂಡೇಷನ್ ನಿರ್ದೇಶಕ ಎಂ.ಎಲ್. ನರಸಿಂಹಮೂರ್ತಿ, ಸಂಯೋಜಕ ನಾಗಭೂಷಣ, ಶಿಕ್ಷಣ ಸಂಯೋಜಕ ಕೆ.ಬಿ. ಆಂಜನೇಯರೆಡ್ಡಿ, ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರಾಮಸುಬ್ಬಮ್ಮ, ಶಿಕ್ಷಕ ಶ್ರೀನಿವಾಸ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT