ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ಪುರಸಭೆ: ₹20.54 ಲಕ್ಷ ಉಳಿತಾಯ ಬಜೆಟ್

₹12.73 ಕೋಟಿ ಆದಾಯ, ₹12.52 ಕೋಟಿ ವೆಚ್ಚ
Last Updated 1 ಏಪ್ರಿಲ್ 2021, 7:58 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬಾಗೇಪಲ್ಲಿ ಪುರಸಭಾ ಅಧ್ಯಕ್ಷೆ ಗುಲ್ನಾಜ್ ಬೇಗಂ ಅಧ್ಯಕ್ಷತೆಯಲ್ಲಿ ಪುರಸಭೆಯ 2021-22 ನೇ ಸಾಲಿನ ಉಳಿತಾಯ ಬಜೆಟ್ ಅನ್ನು ಬುಧವಾರ ಮಂಡಿಸಲಾಯಿತು.

ವಿವಿಧ ಮೂಲಗಳಿಂದ ₹11,93,66,000 ಹಾಗೂ ಆರಂಭಿಕ ಶುಲ್ಕ ₹79,51,481 ಸೇರಿ, ಒಟ್ಟಾರೆ ₹12,73,17,481 ಆದಾಯ ನಿರೀಕ್ಷಿಸಲಾಗಿದೆ. ₹12,52,63,100 ವೆಚ್ಚ ತೋರಿಸಲಾಗಿದ್ದು, ₹20,54,381 ಉಳಿತಾಯವಾಗಲಿದೆ.

ರಾಜ್ಯ ಸರ್ಕಾರದಿಂದ 2021-22 ನೇ ಸಾಲಿಗೆ ಎಸ್ ಎಫ್ ಸಿ ವೇತನ ಅನುದಾನ ₹1.5 ಕೋಟಿ, ವಿದ್ಯುತ್ ಅನುದಾನ ₹3 ಕೋಟಿ, ಎಸ್ ಎಫ್ ಸಿ ಅನುದಾನ ₹60 ಲಕ್ಷ, ಕುಡಿಯುವ ನೀರು ಬರಪರಿಹಾರ ಅನುದಾನ ₹1.5 ಕೋಟಿ, ಆಸ್ತಿ ತೆರಿಗೆಯಿಂದ ವಸೂಲಿ ₹1.2 ಕೋಟಿ, ಪುರಸಭೆ ಅಂಗಡಿಗಳ ಬಾಡಿಗೆ ₹25 ಲಕ್ಷ, ನೀರು ಸರಬರಾಜು ತೆರಿಗೆ ₹98.5 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕ ₹6 ಲಕ್ಷ, ಜನಗಣತಿ ಅನುದಾನ ₹1 ಲಕ್ಷ, ಇತರೆ ಅನುದಾನ ₹20 ಲಕ್ಷ, ನಲ್ಮ್ ಅನುದಾನ ₹30 ಲಕ್ಷ ಸೇರಿ ಆದಾಯ ನಿರೀಕ್ಷಿಸಲಾಗಿದೆ.

ಸಿಬ್ಬಂದಿ ವೇತನ ₹1.59 ಕೋಟಿ, ಬೀದೀಪಗಳು ಮತ್ತು ನೀರು ಸರಬರಾಜು ಕೇಂದ್ರಗಳು ವಿದ್ಯುತ್ ನಿರ್ವಹಣೆ ₹2.64 ಕೋಟಿ, ಹೊರಗುತ್ತಿಗೆ ಪೌರಕಾರ್ಮಿಕರ ವೇತನ ₹30 ಲಕ್ಷ, ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ₹7 ಲಕ್ಷ, ಕಸದ ವಿಲೇವಾರಿ ವಾಹನಗಳು ರಿಪೇರಿಗಾಗಿ ₹5 ಲಕ್ಷ, ಪೌರಕಾರ್ಮಿಕರಿಗೆ ಸಾಧನ ಸಲಕರಣೆಗಳು ₹7.5 ಲಕ್ಷ, ಪರಿಶಿಷ್ಟ ಜಾತಿ, ಪಂಗಡದ ಜನಾಂಗರ ಮೃತಪಟ್ಟವರ ಶವಸಂಸ್ಕಾರಕ್ಕಾಗಿ ಸಹಾಯಧನ ₹2 ಲಕ್ಷ, ಉದ್ಯಾನವನ ಅಭಿವೃದ್ಧಿ ₹30 ಲಕ್ಷ, ಕಚೇರಿ ಉಪಕರಣಗಳು ₹10 ಲಕ್ಷ, ರಸ್ತೆ ರಸ್ತೆ ಬದಿಯ ಚರಂಡಿ ಕಾಮಗಾರಿಗೆ ₹1.56 ಕೋಟಿ, ಬೀದಿದೀಪಗಳು, ಟ್ರಾಫಿಕ್ ಸಿಗ್ನಲ್ ₹18 ಲಕ್ಷ, ನೀರು ಸರಬರಾಜು ಸಂಬಂಧಿತ ಯಂತ್ರೋಪಕರಣ ಹಾಗೂ ಕಾಮಗಾರಿಗಳು ₹2.34 ಕೋಟಿ, ಎಸ್‍ಸಿ, ಎಸ್‍ಟಿ ಜನಾಂಗ ಪ್ರದೇಶಗಳಲ್ಲಿ ವಾಸಿಸುವ ರಸ್ತೆ ಬದಿಯ ಮತ್ತು ಚರಂಡಿ ಕಾಮಗಾರಿ ₹25.5 ಲಕ್ಷ, ವೈಯುಕ್ತಿಕ ಶೌಚಾಲಯಕ್ಕಾಗಿ ಸಹಾಯಧನ ₹10 ಲಕ್ಷ, ಈಜುಕೊಳ ₹30 ಲಕ್ಷಗಳನ್ನು ವೆಚ್ಚವಾಗಿ ತೋರಿಸಲಾಗಿದ.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಪಂಕಜಾರೆಡ್ಡಿ, ಉಪಾಧ್ಯಕ್ಷ ಎ.ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡಪ್ಪ, ಮುಖ್ಯಲೆಕ್ಕಾಧಿಕಾರಿ ಶ್ರೀಧರ್, ಕಂದಾಯ ಅಧಿಕಾರಿ ನಾಗರಾಜ್, ಅಧಿಕಾರಿಗಳಾದ ಅಥಾವುಲ್ಲಾ, ಮುರಳೀಧರ್, ಸದಸ್ಯರಾದ ಶ್ರೀನಿವಾಸರೆಡ್ಡಿ. ಬಿ.ಎ.ನರಸಿಂಹಮೂರ್ತಿ, ಅಶೋಕ್ ರೆಡ್ಡಿ, ಕೆ.ಎ.ಶ್ರೀನಾಥ್, ಗಡ್ಡಂರಮೇಶ್, ವಿ.ವನೀತಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT