ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಮದ್ಯದ ಅಮಲಿನಲ್ಲಿ ತಾಯಿಯ ಕೊಲೆ; ಮಗನ ಬಂಧನ

Published : 25 ಸೆಪ್ಟೆಂಬರ್ 2024, 7:40 IST
Last Updated : 25 ಸೆಪ್ಟೆಂಬರ್ 2024, 7:40 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಮದ್ಯದ ಅಮಲಿನಲ್ಲಿ ತಾಯಿಯ ಜೊತೆ ಜಗಳವಾಡಿ ಅವರನ್ನು ಮಗನೇ ಹತ್ಯೆ ಮಾಡಿರುವ ಪ್ರಕರಣ ಗೌರಿಬಿದನೂರು ತಾಲ್ಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ರಾಮಾಂಜಿನಮ್ಮ ಹತ್ಯೆಯಾದವರು. ಹತ್ಯೆಗೈದ ಅವರ ಪುತ್ರ ಚಂದ್ರಶೇಖರ್ (32) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಮಾಂಜಿನಮ್ಮ ಅವರ ಪತಿ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಅವರು ತಿಮ್ಮಯ್ಯ ಎಂಬಾತನ ಜೊತೆ ಸಂಬಂಧ ಹೊಂದಿದ್ದರು. ರಾಮಾಂಜಿನಮ್ಮ ಸಹ ಮದ್ಯ ವ್ಯಸನಿ ಆಗಿದ್ದರು ಎಂದು ಪೊಲೀಸರ ತಿಳಿಸಿದ್ದಾರೆ.

ಚಂದ್ರಶೇಖರ್‌ಗೆ ವಿವಾಹವಾಗಿದ್ದು, ಆತ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ತಾಯಿ ಮತ್ತು ಮಗನ ನಡುವೆ ಜಗಳ ನಡೆದಿದ್ದು, ಹರಿತವಾದ ಆಯುಧದಿಂದ ರಾಮಾಂಜಿನಮ್ಮ ಅವರ ಮೇಲೆ ಚಂದ್ರಶೇಖರ್ ಹಲ್ಲೆ ನಡೆಸಿದ್ದಾನೆ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಸಿಪಿಐ ಸತ್ಯನಾರಾಯಣ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT