ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಅಚ್ಚುಮೆಚ್ಚು

ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಪುಣ್ಯಸ್ಮರಣೆ
Last Updated 31 ಜನವರಿ 2022, 3:20 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಡಾ.ಎಚ್.ನರಸಿಂಹಯ್ಯರವರ ಪುಣ್ಯಸ್ಮರಣೆ ಜ.31ರಂದು. ತಾಲ್ಲೂಕಿನ ಗಡಿಯ ಪಟ್ಟಣದಲ್ಲಿ ನ್ಯಾಷನಲ್ ಕಾಲೇಜನ್ನು ಕಟ್ಟಿ, ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶಗಳ ಕೋಟ್ಯಂತರ ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿಕ್ಷಣ, ಕ್ರೀಡೆ ಕಲಿಸಿದ ಹಾಗೂ ಬದುಕು ಕಟ್ಟಿಕೊಟ್ಟಿದ ಶಿಕ್ಷಣದ ತಜ್ಞ, ಗಾಂಧೀವಾದಿ ಡಾ.ಎನ್.ಎನ್ ಅವರಿಗೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಎಂದರೆ ಅಚ್ಚುಮೆಚ್ಚು ಆಗಿದೆ.

ಬಾಗೇಪಲ್ಲಿ ಪಟ್ಟಣದ ಹೊರವಲಯದ 1978ರ ಜೂನ್ ತಿಂಗಳಿನಲ್ಲಿ ಪಟ್ಟಣದ ಈಗಿನ ಬಾಲಕರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನ್ಯಾಷನಲ್ ಪದವಿ ಕಾಲೇಜನ್ನು ಆರಂಭಿಸಿದರು. ಮೊದಲಿಗೆ 4 ಉಪನ್ಯಾಸಕರು, 45 ಮಂದಿ ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗಿದ್ದರು. ಇದೀಗ 7.5 ಎಕರೆ ಪ್ರದೇಶದಲ್ಲಿ ನ್ಯಾಷನಲ್ ಕಾಲೇಜಿನಲ್ಲಿ 21 ಕೊಠಡಿಗಳು ಹಾಗೂ ಪದವಿ ಪೂರ್ವ ವಿಭಾಗದಲ್ಲಿ 23 ಕೊಠಡಿಗಳು ಇವೆ. ಕಾಲೇಜಿನಲ್ಲಿ ಇದೀಗ 2800 ಪೈಕಿ ಪದವಿ ಪೂರ್ವ-1000 ಹಾಗೂ ಪದವಿ ಕಾಲೇಜಿನಲ್ಲಿ 1800 ಕ್ಕೂ ಹೆಚ್ಚು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.

ಕಾಲೇಜಿನ ಆವರಣದಲ್ಲಿ 2014ರಲ್ಲಿ ಸದಾನಂದಮಯ್ಯ ಬ್ಲಾಕ್ ಮಾಡಿ ನ್ಯಾಷನಲ್ ಪದವಿ ಪೂರ್ವ ಕಾಲೇಜನ್ನು ವರ್ಗಾಯಿಸಲಾಗಿದೆ. ಆಧುನಿಕ ಹೈಟೆಕ್ ತರಗತಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಪ್ರೊಜೆಕ್ಟರ್ ಗಳ ಮೂಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿಕ್ಷಣ ಕಲಿಸಲಾಗುತ್ತಿದೆ. ಉತ್ತಮವಾದ ಪರಿಸರಕ್ಕೆ ಗಿಡ, ಮರಗಳನ್ನು ಬೆಳಿಸಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂರಲು ಆಸನಗಳ ವ್ಯವಸ್ಥೆ, ಉತ್ತಮವಾದ ಗ್ರಂಥಾಲಯ, ವಾಚನಾಲಯ, ಕಂಪ್ಯೂಟರ್ ಕೊಠಡಿಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಪೈಕಿ ಕಾಲೇಜಿನಲ್ಲಿ ಮಾತ್ರ ಉತ್ತಮವಾದ ಪುಟ್ ಬಾಲ್, ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣಗಳನ್ನು ಮಾಡಲಾಗಿದೆ. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿ ವರ್ಷ ಪದವಿ ಶಿಕ್ಷಣದಲ್ಲಿ ಚಿನ್ನ, ಕಂಚಿನ ಪದಕಗಳನ್ನು ಪಡೆದಿದ್ದಾರೆ.

ಡಾ.ಎಚ್.ನರಸಿಂಹಯ್ಯರವರಿಗೆ ಗಡಿ ಬಾಗೇಪಲ್ಲಿ ತಾಲ್ಲೂಕು ಎಂದರೆ ಬಲು ಪ್ರೀತಿ. ಇಲ್ಲಿನ ಕೃಷಿಕೂಲಿಕಾರ್ಮಿಕರ, ರಾಜಕೀಯ ನಾಯಕರ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದವರು. ಪ್ರತಿ ತಿಂಗಳಿಗೊಮ್ಮೆ ಕಾಲೇಜಿಗೆ ಭೇಟಿ ಜನರನ್ನು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅತಿ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕಾಲೇಜಿನ ಕೊಠಡಿಗಳಿಗೆ, ಕ್ರೀಡಾಂಗಣಕ್ಕೆ, ವ್ಯಾಯಾಮ ಶಾಲೆಗೆ ಭೇಟಿ ನೀಡುತ್ತಿದ್ದರು.

‘ಪಟ್ಟಣದ ಬಾಲಾಜಿ ಎಜುಕೇಷನ್ ಸೊಸೈಟಿಯನ್ನು ಎಲ್ಲಾ ಪಕ್ಷಗಳ ನಾಯಕರು ಸೇರಿ ಆರಂಭಿಸಿದ್ದೆವು. ನಂತರ ಶಿಕ್ಷಣ ತಜ್ಞ, ಗಾಂಧಿವಾದಿ ಡಾ.ಎಚ್.ನರಸಿಂಹಯ್ಯರವರು ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದಾರೆ. ಡಾ.ಎಚ್.ಎನ್ ರವರಿಗೆ ಕಾಲೇಜು ಎಂದರೆ ಪ್ರೀತಿ. ಡಾ.ಎಚ್.ಎನ್ ನಮ್ಮಮನೆಯಲ್ಲಿ ಊಟ ಮಾಡಿರುವುದು ಪೂರ್ವಜನ್ಮದ ಪುಣ್ಯ ಆಗಿದೆ. ಅವರ ಸರಳತೆ, ಶಿಕ್ಷಣದ ಮಹತ್ವ, ವೈಚಾರಿಕತೆಯ ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’
ಎಂದು ಡಾ.ಎಚ್.ಎನ್. ಆಪ್ತರಾದ ಹಿರಿಯ ಮುಖಂಡ ಜಿ.ವಿ.ಬಾಬುರೆಡ್ಡಿ ತಿಳಿಸಿದರು.

‘ನ್ಯಾಷನಲ್ ಕಾಲೇಜಿನ ಮೊದಲ ವರ್ಷದ ಬ್ಯಾಚ್ ವಿದ್ಯಾರ್ಥಿಯಾಗಿದ್ದೇನೆ. ಎಚ್.ಎನ್ ಅವರಿಗೆ ಬಡ ಜನರ ಮೇಲೆ ಬಲು ಪ್ರೀತಿ. ಶಿಕ್ಷಣದ ಬಗ್ಗೆ ಹಾಗೂ ವೈಚಾರಿಕೆಯ ಪಾಠ ಮಾಡಿದ್ದಾರೆ. ಪ್ರಶ್ನಿಸದೇ ಯಾವುದೋ ಒಪ್ಪಬೇಡಿ ಎಂಬುದನ್ನು ಕಲಿಸಿದ್ದಾರೆ. ಡಾ.ಎಚ್.ಎನ್ ಇರುವಾಗ ಕಾಲೇಜಿನಲ್ಲಿ ನಾಟಕೋತ್ಸವ, ಕ್ರೀಡಾ, ಕಲೆ, ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿತ್ತು. ನಾಟಕೋತ್ಸವ, ಕಲೆ, ಸಾಹಿತ್ಯದ ಕಾರ್ಯಕ್ರಮಗಳು ಹೆಚ್ಚಾಗಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಕಲಿಕೆ ಮುಖ್ಯ ಆಗಿದೆ’ ಎಂದು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎ.ಜಿ.ಸುಧಾಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT