ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ವಿವಿಧೆಡೆ ಅಂಬೇಡ್ಕರ್ ಜಯಂತಿ

Last Updated 15 ಏಪ್ರಿಲ್ 2022, 5:15 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಎಲ್ಲಾ ಶಾಲಾ, ಕಾಲೇಜುಗಳು ಹಾಗೂ ಸಂಘ–ಸಂಸ್ಥೆಗಳಲ್ಲಿ ಅಂಬೇಡ್ಕರ್ ಜಯಂತಿ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಪರಿಷತ್ತಿನ ಅಧ್ಯಕ್ಷ ದೇವತಾ ದೇವರಾಜ್ ಹಾಗೂ ನಿವೃತ್ತ ಸಿಡಿಪಿಒ ವೆಂಕಟನಾರಾಯಣಮ್ಮ ಅಂಬೇಡ್ಕರ್ ಜೀವನ, ಸಾಧನೆ ಕುರಿತು ಮಾತನಾಡಿದರು.

ಕರ್ನಾಟಕ ಜನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಲೀಲಾ ಲಕ್ಷ್ಮಿನಾರಾಯಣ್, ಪರಿಷತ್ತಿನ ಪದಾಧಿಕಾರಿಗಳಾದ ಕುಂಟಿಗಡ್ಡೆ ಲಕ್ಷ್ಮಣ್, ಕೆ.ಎಂ. ನಾರಾಯಣಸ್ವಾಮಿ, ಮಂಜುನಾಥ್, ಎಂ.ಎ. ಪ್ರಕಾಶ್, ಸ್ವರ್ಣಗೌರಿ ಹಾಗೂ ಮುಖಂಡರು ಭಾಗವಹಿಸಿದ್ದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆ: ನಗರದ 31ನೇ ವಾರ್ಡ್‌ನ ತಿಮ್ಮಸಂದ್ರದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಅಂಬೇಡ್ಕರ್ ಜಯಂತಿ ಹಮ್ಮಿಕೊಳ್ಳಲಾಗಿತ್ತು.

ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಂಗಶಾಮಯ್ಯ ಮಾತನಾಡಿ, ಇಂದಿನ ಯುವಜನತೆ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಬಾಬು, ನಗರಸಭೆ ಸದಸ್ಯೆ ಮಂಜುಳಾ ಗಂಗಾಧರ್, ಮಾಜಿ ಸದಸ್ಯರಾದ ರೆಡ್ಡಪ್ಪ, ರಾಮಮೂರ್ತಿ, ಮುಖಂಡರಾದ ಲಕ್ಷ್ಮಣರೆಡ್ಡಿ, ಶ್ರೀನಿವಾಸ, ಕಲ್ಲಹಳ್ಳಿ ವೆಂಕಟೇಶ್, ರಾಜಣ್ಣ, ವೆಂಕಟರಾಯಪ್ಪ, ಸೋಮಣ್ಣ, ನಿಮ್ಮಕಾಯಲಹಳ್ಳಿ ರವೀಂದ್ರ ಉಪಸ್ಥಿತರಿದ್ದರು.

ಮಾದಿಗ ದಡೋರ: ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ತಾಲ್ಲೂಕಿನ ಊಲವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ವಿ. ರಾಮಪ್ಪ ಮಾತನಾಡಿ, ‘ದೇಶದ ಪ್ರಗತಿ ಹಾಗೂ ಸಮಾನತೆಯ ಕನಸು ಕಂಡ ಶ್ರೇಷ್ಠ ನಾಯಕರಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಅವರ ಬದುಕು ಎಲ್ಲರಿಗೂ ಸ್ಫೂರ್ತಿ ಹಾಗೂ ಆದರ್ಶದಾಯಕ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ರವಿ, ಸುಗುಣ, ನಾಗಪ್ಪ, ಮುಖಂಡರಾದ ಚಂದ್ರಶೇಖರ್, ಅನಿಲ್, ನಿತಿನ್, ಕಲ್ಯಾಣ, ನಾಗೇದ್ರ, ನಂದಾ ಶ್ರೀಕಾಂತ್, ಪಂಚಾಯಿತಿ ಕಾರ್ಯದರ್ಶಿ ಖಲೀಲ್ ಪಾಷಾ, ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟರಾಯಪ್ಪ, ವೆಂಕಟರವಣಪ್ಪ, ನರಸಿಂಹಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT