ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ನೌಕರರ ಸಮ್ಮೇಳನ

Last Updated 16 ಜುಲೈ 2022, 4:47 IST
ಅಕ್ಷರ ಗಾತ್ರ

ಗುಡಿಬಂಡೆ: ಅನೇಕ ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕೆಲಸ ಮಾಡುವ ಅಂಗನವಾಡಿ ನೌಕರರಿಗೆ ಸರ್ಕಾರ ಸರಿಯಾದ ವೇತನ ನೀಡುತ್ತಿಲ್ಲ ಎಂದು ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಆರೋಪಿಸಿದರು.

ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ 9ನೇ ತಾಲ್ಲೂಕು ಸಮ್ಮೇಳನದಲ್ಲಿ
ಮಾತನಾಡಿದರು.

ಅಂಗನವಾಡಿ ನೌಕರರಿಗೆ ಇರುವ ಕೆಲಸದ ಜತೆಗೆ ಮತ್ತಷ್ಟು ಕೆಲಸಗಳನ್ನು ನೀಡುವ ಮೂಲಕ ಹೆಚ್ಚು ಕೆಲಸದ ಒತ್ತಡ ನೀಡುತ್ತಿದ್ದಾರೆ. ಈಗಾಗಲೇ ಅನೇಕ ಬಾರಿ ಹೋರಾಟಗಳನ್ನು
ಮಾಡಿದರೂ ಅಂಗನವಾಡಿ ನೌಕರರ ಸಮಸ್ಯೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ
ಎಂದರು.

ಕೆಪಿಆರ್‌ಎಸ್ ಸಂಘಟನೆಯ ಮುಖಂಡ ಲಕ್ಷ್ಮಿನಾರಾಯಣ ಮಾತನಾಡಿ, ಇಂದು ಕಾರ್ಮಿಕರ ಪರವಾಗಿ ಕೆಲಸ ಮಾಡುವ ಸಂಘಟನೆಯೆಂದರೇ ಅದು ಸಿಐಟಿಯು ಮಾತ್ರ. ಕಾರ್ಮಿಕರು ಹಾಗೂ ಮಹಿಳೆಯರು ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಮಹಿಳೆಯರು ತುಂಬಾ ಸಂಕಷ್ಟ ಪಡುತ್ತಿದ್ದಾರೆ. ದೇಶದ ಸಂಪತ್ತು ಕಾರ್ಮಿಕರ ಶ್ರಮವೇ ಹೊರತು ಶ್ರೀಮಂತರ ಶ್ರಮವಲ್ಲ. ಸರ್ಕಾರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದರು.

ಮಾಜಿ ಶಾಸಕ ದಿ.ಶ್ರೀರಾಮರೆಡ್ಡಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಗುಡಿಬಂಡೆ ತಾಲ್ಲೂಕು ಅಧ್ಯಕ್ಷರಾಗಿ ಮಂಜುಳಾ, ಕಾರ್ಯದರ್ಶಿಯಾಗಿ ಭಾಗ್ಯಮ್ಮ, ಖಜಾಂಚಿಯಾಗಿ ಶುಭ, ಗೌರವಾಧ್ಯಕ್ಷರಾಗಿ ಶಾಂತಮ್ಮ, ಉಪಾಧ್ಯಕ್ಷರಾಗಿ ಅಲುವೇಲಮ್ಮ, ಆಯಿಷಾ, ಸಹಕಾರ್ಯದರ್ಶಿ ಭಾಗ್ಯಮ್ಮ, ಸರೋಜಮ್ಮ ಸೇರಿದಂತೆ 15 ಮಂದಿ ತಾಲ್ಲೂಕು ಸಮಿತಿಯ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT