ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಅಭ್ಯರ್ಥಿ ಅಂಜನಪ್ಪ ₹19.46 ಕೋಟಿ ಒಡೆಯ

ಕಾಂಗ್ರೆಸ್ ಅಭ್ಯರ್ಥಿ ಕುಟುಂಬಕ್ಕೆ ₹49.79 ಲಕ್ಷ ಸಾಲ
Last Updated 19 ನವೆಂಬರ್ 2019, 13:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಂ.ಅಂಜನಪ್ಪ ಅವರು, ತಮ್ಮ ಕುಟುಂಬದ ಬಳಿ ₹19.46 ಕೋಟಿ ಮೌಲ್ಯದ ಆಸ್ತಿ ಮತ್ತು ₹49.79 ಲಕ್ಷ ಸಾಲವಿದೆ ಎಂದು ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಅಂಜನಪ್ಪ ಮತ್ತು ಅವರ ಪತ್ನಿ ಡಾ.ಟಿ.ಜಯಂತಿ ದಂಪತಿ ಬಳಿ ₹16.45 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಈ ಪೈಕಿ ಅಂಜನಪ್ಪ ಅವರ ಬಳಿ ₹8.19 ಕೋಟಿ ಬೆಲೆ ಬಾಳುವ 13 ಎಕರೆ ಕೃಷಿ ಭೂಮಿ, ₹31.43 ಲಕ್ಷ ಮೌಲ್ಯದ ವಸತಿ ಕಟ್ಟಡಗಳು ಸೇರಿದಂತೆ ಒಟ್ಟು ₹9.76 ಕೋಟಿ ಸ್ಥಿರಾಸ್ತಿ ಮತ್ತು ಜಯಂತಿ ಅವರ ಬಳಿ ₹6.70 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಅಂಜನಪ್ಪ ಅವರ ಹೆಸರಿನಲ್ಲಿ ₹48.67 ಲಕ್ಷ, ಜಯಂತಿ ಅವರ ಬಳಿ ₹2.37 ಕೋಟಿ, ಮಗಳು ಸನ್ವಿತಿ ಹೆಸರಿನಲ್ಲಿ ₹9.30 ಲಕ್ಷ ಮತ್ತು ಮಗ ಧ್ರಿತ್ವನ್ ಹೆಸರಿನಲ್ಲಿ ₹5.80 ಲಕ್ಷ ಹೀಗೆ.. ಅಂಜನಪ್ಪ ಅವರ ಕುಟುಂಬದ ಬಳಿ ₹3.01 ಕೋಟಿ ಮೌಲ್ಯದ ಚರಾಸ್ತಿ ಇದೆ.

ಚರಾಸ್ತಿ ಪೈಕಿ ಅಂಜನಪ್ಪ ಅವರ ಬಳಿ ಒಂದು ಇನ್ನೊವಾ ಕ್ರಿಸ್ಟಾ ಕಾರು, ₹1.50 ಲಕ್ಷ ಮೌಲ್ಯದ 50 ಗ್ರಾಂ ಚಿನ್ನ ಇದ್ದರೆ, ಜಯಂತಿ ಅವರ ಬಳಿ ಒಂದು ಸ್ವಿಫ್ಟ್ ಕಾರು, ₹18 ಲಕ್ಷ ಮೌಲ್ಯದ 600 ಗ್ರಾಂ ಚಿನ್ನ, 2 ಕೆ.ಜಿ 500 ಗ್ರಾಂ ಬೆಳ್ಳಿ ಇದೆ. ಮಗಳು ಸನ್ವಿತಿ ಬಳಿ ₹7.50 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ ಮತ್ತು ಮಗ ಧ್ರಿತ್ವನ್ ಹೆಸರಿನಲ್ಲಿ ₹3 ಲಕ್ಷ ಮೌಲ್ಯದ 100 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ ಇದೆ.

ಅಂಜನಪ್ಪ ಅವರು ₹29.54 ಲಕ್ಷ ಮತ್ತು ಜಯಂತಿ ಅವರು ₹20.25 ಲಕ್ಷದಂತೆ ಈ ದಂಪತಿ ಒಟ್ಟು ₹49.79 ಲಕ್ಷ ಮರುಪಾವತಿಸಬೇಕಿದೆ. ಸದ್ಯ ಅಂಜನಪ್ಪ ಅವರ ಕೈಯಲ್ಲಿ ₹50 ಸಾವಿರ ಮತ್ತು ಜಯಂತಿ ಅವರ ಕೈಯಲ್ಲಿ ₹40 ಸಾವಿರ ನಗದು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT