ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಆಶ್ರಯ ನಿವೇಶನ: ಮೀಸಲಾತಿಗೆ ಒತ್ತಾಯ

ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಕೆ
Last Updated 25 ಜನವರಿ 2023, 5:19 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆ ಅಡಿ ಮಂಜೂರು ಮಾಡುತ್ತಿರುವ ಉಚಿತ ನಿವೇಶನಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಕೊಳೆಗೇರಿ ನಿವಾಸಿಗಳು, ಅಂಗವಿಕಲರು, ಮಾಜಿ ಯೋಧರು ಮತ್ತು ಹಿರಿಯ ಪತ್ರಕರ್ತರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಕೆ. ಮಧುಕರ್‌ಗೆ ಮನವಿ ಪತ್ರ ಸಲ್ಲಿಸಿದರು.

ಜತೆಗೆ ಈಗಾಗಲೇ ಸಿದ್ಧಪಡಿಸಿರುವ ಉಚಿತ ನಿವೇಶನಗಳ ಪಟ್ಟಿಯನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.

ಕನ್ನಡಪರ ಸಂಘಟನೆ ಬಿ.ಎ. ಬಾಬಾಜಾನ್ ಮಾತನಾಡಿ, ‘ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ವಿವಿಧ ಯೋಜನೆಗಳ ಅಡಿ ಉಚಿತ ನಿವೇಶನ ನೀಡಲು ಅರ್ಹರ ಪಟ್ಟಿ ಸಿದ್ಧಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಕೊಳೆಗೇರಿ ನಿವಾಸಿಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಅಂಗವಿಕಲರು, ಮಾಜಿ ಯೋಧರು, ಹಿರಿಯ ಪತ್ರಕರ್ತರಿಗೂ ಆಶ್ರಯ ಯೋಜನೆ ಅಡಿ ಮೀಸಲಾತಿ ಕಲ್ಪಿಸಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಕೆ. ಮಧುಕರ್, ‘ಸರ್ಕಾರದ ನಿಯಮಗಳಂತೆ ಮೀಸಲಾತಿ ನೀಡಲಾಗುವುದು. ಯಾವುದೇ ಫಲಾನುಭವಿಗಳು ಮಧ್ಯವರ್ತಿಗಳ ಮೂಲಕ ಬರಬಾರದು. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಆಶ್ರಯ ಸಮಿತಿ ಅಧ್ಯಕ್ಷ, ಸಮಿತಿ ಸದಸ್ಯರ ಮೂಲಕವೇ ಸಿದ್ಧಪಡಿಸಲಾಗುತ್ತದೆ. ಜತೆಗೆ ಅರ್ಹ ಫಲಾನುಭವಿಗಳಿಗೆ ಉಚಿತ ನಿವೇಶನ ಹಂಚಿಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕನ್ನಡಪರ ಸಂಘಟನೆ ಮುಖಂಡರಾದ ಆರ್. ರವೀಂದ್ರ, ಷೇಕ್ ಇದಾಯುತುಲ್ಲಾ, ಬಿ.ವಿ. ವೆಂಕಟಶಿವಪ್ಪ, ಸುಬ್ಬಣ್ಣ, ಕರಾಟೆ ರಿಯಾಜ್, ಜೆಡಿಎಸ್ ಅಧ್ಯಕ್ಷ ಸೂರ್ಯ ನಾರಾಯಣರೆಡ್ಡಿ, ಬುಜೇಂದ್ರ, ಮಂಜುನಾಥ್, ಇದ್ರಿಸ್‍ವುಲ್ಲಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT