ದುರಸ್ತಿಗೆ ಒತ್ತಾಯ
ರಾಷ್ಟ್ರೀಯ ಹೆದ್ದಾರಿ ರಸ್ತೆ-44 ರ ಇಕ್ಕೆಲಗಳಲ್ಲಿ ಅರವಟ್ಟಿಗೆಗಳು ನಿರ್ಮಿಸಲಾಗಿದೆ. ಆದರೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಜನರು, ಪ್ರಾಣಿ, ಪಕ್ಷಿಗಳಿಗೆ ನೀರು ಇಲ್ಲ. ಬೇಸಿಗೆಯಲ್ಲಿ ಈ ಅರವಂಟಿಕೆಗಳಲ್ಲಿ ನೀರು ತುಂಬಿಸಿ, ಜನರು, ಜಾನುವಾರು ಮತ್ತು ಪಕ್ಷಿಗಳ ನೀರಿನ ದಾಹ ನೀಗಿಸಬೇಕು ಎಂದು ಏಟಗಡ್ಡಪಲ್ಲಿ ರೈತ ಟಿ.ಲಕ್ಷ್ಮಿನಾರಾಯಣರೆಡ್ಡಿ ಮನವಿ ಮಾಡಿದರು.