ಬಾಗೇಪಲ್ಲಿ: ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ಪರಿಣಾಮ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಟೀ, ಕಾಫಿ ಸೇರಿದಂತೆ ಇನ್ನಿತರ ಹೋಟೆಲ್ಗಳಲ್ಲಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಕೊರತೆಯಾಗಿದ್ದು, ಜನಸಾಮಾನ್ಯರು ಟೀ, ಕಾಫಿ, ತಿಂಡಿ, ಊಟ ಸಿಗದೆ ಪರದಾಡುತ್ತಿದ್ದಾರೆ.

ಅಲ್ಲದೆ, ಬೇಕರಿ ಮತ್ತು ಹೋಟೆಲ್ಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ.

ಜಾಗತಿಕ ಇಂಧನ ಸರಬರಾಜಿನಲ್ಲಿ ಭಾರಿ ವ್ಯತ್ಯಯವಾಗಿದ್ದು, ವಾಣಿಜ್ಯ ಬಳಕೆಯ ಸಿಲೆಂಡರ್ಗಳ ಅಭಾವ ಹೆಚ್ಚಾಗಿದೆ. ಅಗತ್ಯವಿರುವಷ್ಟು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳು ಲಭ್ಯವಿಲ್ಲ. ಇದರಿಂದಾಗಿ ಹಲವು ಹೋಟೆಲ್, ಚಹಾ, ಕಾಫಿ ಅಂಗಡಿಗಳು ಬಂದ್ ಆಗಿವೆ.

ವಾಣಿಜ್ಯ ಸಿಲಿಂಡರ್ ಸಕಾಲಕ್ಕೆ ಸಿಗುತ್ತಿಲ್ಲ. ಬಹುತೇಕ ಹೋಟೆಲ್ಗಳು, ಬೇಕರಿಗಳಲ್ಲಿ ಕಾಫಿ, ಟೀ, ಹಾರ್ಲಿಕ್ಸ್, ವಿವಾ, ಬೂಸ್ಟ್ ಸಿಗುತ್ತಿಲ್ಲ. ದೋಸೆ, ಚಪಾತಿ, ಊಟ, ಇಡ್ಲಿ ಮತ್ತು ಮಿಲಿಟರಿ ಹೋಟೆಲ್ಗಳಲ್ಲಿ ಬಿರಿಯಾನಿ, ಚಿಕನ್, ಮಟನ್ ಊಟ ವ್ಯವಹಾರವೂ ಬಂದ್ ಆಗಿದೆ. ಹೋಟೆಲ್ ಮತ್ತು ಬೇಕರಿಗಳನ್ನೇ ನಂಬಿಕೊಂಡಿದ್ದ ಕಾರ್ಮಿಕರು ಇದೀಗ ಕೆಲಸ ಸಿಗದೆ ಕೂಲಿ ಹಣ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ಹೋಟೆಲ್ ಮಾಲೀಕರಿಗೆ ವ್ಯಾಪಾರವೇ ಇಲ್ಲ. ಹೋಟೆಲ್ಗಳನ್ನು ನಂಬಿ ಜೀವನ ಮಾಡಿದ ಕೂಲಿಕಾರ್ಮಿಕರಿಗೆ ಕೂಲಿ ಹಣ ಸಿಗದಿರುವುದರಿಂದ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗುವಂತಾಗಿದೆ.

ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಉರ್ದು ಶಾಲೆ ಮುಂದೆ, ಡಾ. ಜಚನಿ (ಗೂಳೂರು) ರಸ್ತೆ, ನ್ಯಾಷನಲ್ ಕಾಲೇಜು ರಸ್ತೆಗಳಲ್ಲಿನ ಬಹುತೇಕ ಹೋಟೆಲ್ಗಳು, ಬೇಕರಿಗಳಲ್ಲಿ ದೂರದ ಕಾರ್ಮಿಕರು ಅನೇಕ ವರ್ಷಗಳಿಂದ ಕೆಲಸ ಮಾಡಿಕೊಂಡು ಜೀವನದ ಬಂಡಿ ದೂಡುತ್ತಿದ್ದರು. ದುಡಿಮೆಯ ಹಣದಿಂದ ಮಕ್ಕಳ ವಿದ್ಯಾಭ್ಯಾಸ, ಪೋಷಕರನ್ನು ಪೋಷಿಸುತ್ತಿದ್ದರು. ಇದೀಗ ಏಕಾಏಕಿ ಹೋಟೆಲ್ ಮತ್ತು ಬೇಕರಿಗಳಲ್ಲಿ ಕೆಲಸವಿಲ್ಲದ ಕಾರಣ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ 2 ಹೋಟೆಲ್ಗಳಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿ ದ್ದರು. ಇದೀಗ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆಯಿಂದ ತಾಲ್ಲೂಕು ಕಚೇರಿ ಮುಂಭಾಗದ ಹೋಟೆಲ್ಗೆ, ಇನ್ನೊಂದು ಹೋಟೆಲ್ನ ಕಾರ್ಮಿಕರನ್ನು ಬಳಕೆ ಮಾಡಲಾಗಿದೆ. ತಿಂಡಿತಿನಿಸುಗಳ ಸಂಖ್ಯೆಯನ್ನು, ಟೀ, ಕಾಫಿಯನ್ನು ಸಿದ್ಧಪಡಿಸಲು ಆಗಿಲ್ಲ. ಕೂಲಿಕಾರ್ಮಿಕರ ಕುಟುಂಬಗಳಿಗೆ ಸಂಬಳ, ಕಟ್ಟಡದ ಬಾಡಿಗೆ, ನಿರ್ವಹಣೆ ಖರ್ಚು ಕೊಡಲು ಆಗುತ್ತಿಲ್ಲ. ಇದರಿಂದ ಐದಾರು ಮಂದಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೋಟೆಲ್ ಮಾಲೀಕ ಭಟ್ ತಿಳಿಸಿದ್ದಾರೆ.

ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ

30 ವರ್ಷಗಳಿಂದ ಒಂದೇ ಹೋಟೆಲ್ ನಂಬಿಕೊಂಡು ಕುಟುಂಬ ಸಾಗಿಸಿದ್ದೇವೆ. ಇದೀಗ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಸಿಗದಿರುವುದರಿಂದ ಹೋಟೆಲ್ನಲ್ಲಿ ತಯಾರಿಸುವ ಖಾದ್ಯಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮಂತಹ ಕೂಲಿಕಾರ್ಮಿಕರಿಗೆ ತೊಂದರೆ ಆಗಿದೆ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಹೋಟೆಲ್ ಕಾರ್ಮಿಕ ನಾರಾಯಣ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಹೋಟೆಲ್, ಬೇಕರಿಗಳಿಗೆ ಅಗತ್ಯಕ್ಕೆ ತಕ್ಕಂತೆ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಕೂಲಿಕಾರ್ಮಿಕರಿಗೆ ಕೆಲಸ ಸಿಗುವಂತೆ ಮಾಡಬೇಕು ಎಂದು ಕೂಲಿ ಕಾರ್ಮಿಕರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.