ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿಯ ಚನ್ನರಾಯನಪಲ್ಲಿ ಗ್ರಾಮದ ಬಳಿಯ ಸರ್ಕಾರಿ ಗೋಮಾಳ ಜಮೀನು ಸರ್ವೆ ಕಾರ್ಯಕ್ಕೆ ತೆರಳಿದ್ದ ತಹಶೀಲ್ದಾರ್ ಮನೀಷಾ ಎನ್.ಪತ್ರಿ ಹಾಗೂ ಭೂಮಾಪನಾ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಮತ್ತು ಚನ್ನರಾಯನಪಲ್ಲಿ ಗ್ರಾಮದ ನಿವೇಶನ ರಹಿತರಿಗೆ ನಿವೇಶನ ಹಂಚಲು, ಸರ್ಕಾರಿ ಗೋಮಾಳ ಜಮೀನು ಸರ್ವೆ ಕಾರ್ಯ ಮಾಡಲು ತಹಶೀಲ್ದಾರ್ ಮತ್ತು ಭೂ ಮಾಪನ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಆಡಳಿತ ಗೂಳೂರು ಗ್ರಾಮದ ನಲ್ಲಪರೆಡ್ಡಿಪಲ್ಲಿ ಮತ್ತು ಚನ್ನರಾಯನಪಲ್ಲಿ ಗ್ರಾಮದ ಸುತ್ತಮುತ್ತಲಿನ ಸರ್ಕಾರಿ ಗೋಮಾಳ ಜಮೀನನ್ನು ಆಶ್ರಯ ನಿವೇಶನಗಳಿಗೆ ಮಂಜೂರು ಮಾಡಬಾರದು. ಸರ್ಕಾರ ದನಕರುಗಳ ಮೇವಿಗಾಗಿ ಮೀಸಲಿಟ್ಟಿದೆ. 2022ರಲ್ಲಿ ಅಂದಿನ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ಗೆ ಎರಡು ಗ್ರಾಮಗಳ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

2022ರಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ಸಲ್ಲಿಸಿದ ಅರ್ಜಿಯಂತೆ ಎರಡು ಗ್ರಾಮಗಳ ಗ್ರಾಮಸ್ಥರ ಜೊತೆ ತಾಲ್ಲೂಕು ಆಡಳಿತ ಗ್ರಾಮ ಸಭೆ ಮಾಡಬೇಕು. ಜನರ ಅಭಿಪ್ರಾಯ ಪಡೆಯಬೇಕು. ಏಕಾಏಕಿ ಸರ್ಕಾರಿ ಗೋಮಾಳ ಜಮೀನನ್ನು ವಸತಿ ಉದ್ದೇಶಕ್ಕೆ ಪರಿವರ್ತನೆ ಮಾಡುವುದು ಬೇಡ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಆರ್.ವಿ.ದೇವರಾಜು, ಪಿ.ರಾಮಾಂಜಿನಪ್ಪ, ವೆಂಕಟಸ್ವಾಮಿ, ಆದಿನಾರಾಯಣ, ಪ್ರಕಾಶ್, ಈರಪ್ಪ, ಶಿವಪ್ಪ, ಪಿ.ವೆಂಕಟಸ್ವಾಮಿ, ರಾಮಪ್ಪ, ಸಿ.ವಿ.ಶ್ರೀನಾಥ, ಸುರೇಶ್, ಲಕ್ಷ್ಮಿನಾರಾಯಣ, ಕೆ.ಮಂಜುನಾಥ, ವಿ.ಅಶೋಕ, ವೆಂಕಟೇಶ್, ಜಯಕುಮಾರ್, ಶ್ರೀಕಾಂತ, ಅಶ್ವತ್ಥನಾರಾಯಣ, ನಾರಾಯಣಪ್ಪ, ರಾಮಾಂಜಿನಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-16-535897496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.