ಬಾಗೇಪಲ್ಲಿ: ಪಟ್ಟಣದ ಉನ್ನತೀಕರಿಸಿದ ಆದರ್ಶ ಕಾಲೇಜು (ವಿಜ್ಞಾನ ವಿಭಾಗ) ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸರ್ಕಾರದ ಅನುದಾನಗಳ ಜೊತೆಗೆ ದಾನಿಗಳಿಂದ ಎಲ್ಇಡಿ ಪರದೆ, ಪ್ರೊಜೆಕ್ಟರ್ನಲ್ಲಿ ವಿಷಯಗಳ ಬೋಧನೆಯಿಂದ ವಿದ್ಯಾರ್ಥಿನಿಯರ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಕಾಲೇಜುಗಳಿಗಿಂತ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಫಲಿತಾಂಶವು ಹೆಚ್ಚಿದೆ.

ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಇದೀಗ 200ಕ್ಕೂ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಇವೆ. ಕಲಾ ವಿಭಾಗದಲ್ಲಿ ಎಚ್ಇಎಸ್ಪಿ, ವಾಣಿಜ್ಯ ವಿಭಾಗದಲ್ಲಿ ಎಚ್ಇಬಿಎ, ಇಬಿಎಸಿಎಸ್, ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿಎಸ್ ಕೋರ್ಸ್ಗಳು ಇವೆ. ಗ್ರಾಮೀಣ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ಶಿಕ್ಷಣ ಕಲ್ಪಿಸಲು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಲೇಜಿಗೆ ಪಿಸಿಎಂಸಿಎಸ್, ಇಬಿಎಸಿಎಸ್ ಕೋರ್ಸ್ಗಳನ್ನು ಹೊಸದಾಗಿ ಮಂಜೂರು ಮಾಡಿಸಿದ್ದಾರೆ.

2024-25ನೇ ಸಾಲಿನಲ್ಲಿ ಕಾಲೇಜಿನ ಫಲಿತಾಂಶ ಶೇ 51.02ರಷ್ಟು ಬಂದಿದೆ. 2025-26ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಕಲಾ ವಿಭಾಗದಿಂದ 56, ವಾಣಿಜ್ಯ ವಿಭಾಗದಿಂದ 96 ಮತ್ತು ವಿಜ್ಞಾನ ವಿಭಾಗದಿಂದ 49 ಮಂದಿ ದಾಖಲಾಗಿದ್ದಾರೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗೆ 86 ವಿದ್ಯಾರ್ಥಿನಿಯರು ನೋಂದಾಯಿಸಿದ್ದಾರೆ. ಈ ಪೈಕಿ 65 ಮಂದಿ ಉತ್ತೀರ್ಣರಾಗಿದ್ದು, ಅತ್ಯುನ್ನತ ಶ್ರೇಣಿಯಲ್ಲಿ 6 ಮಂದಿ, ಪ್ರಥಮ ಶ್ರೇಣಿಯಲ್ಲಿ 41, ದ್ವಿತೀಯ ಶ್ರೇಣಿಯಲ್ಲಿ 17 ಮತ್ತು ತೃತೀಯ ಶ್ರೇಣಿಯಲ್ಲಿ ಒಬ್ಬರು ಉತ್ತೀರ್ಣರಾಗಿದ್ದಾರೆ.

2025-26ನೇ ಸಾಲಿನ ಪರೀಕ್ಷೆಯಲ್ಲಿ ಶೇ 75.58 ಫಲಿತಾಂಶ ಬಂದಿದ್ದು, ಫಲಿತಾಂಶದಲ್ಲಿ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದಿದೆ. ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಪಕ್ಕದಲ್ಲಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಕಟ್ಟಡ ಇದೆ. ಕಟ್ಟಡದ 17 ಕೊಠಡಿಗಳ ಪೈಕಿ 6 ಕೊಠಡಿಗಳಲ್ಲಿ ತರಗತಿ, ವಿಶಾಲವಾದ 4 ಕೊಠಡಿಗಳಲ್ಲಿ ಪ್ರಯೋಗಾಲಯ, ಉಪನ್ಯಾಸಕರ ಕೊಠಡಿ, ಗ್ರಂಥಾಲಯ ಕೊಠಡಿ ಇದೆ. ಪ್ರಸಕ್ತ ವರ್ಷದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿವೇಕ ಯೋಜನೆಯಡಿಯಲ್ಲಿ 3 ತರಗತಿ ಕೊಠಡಿ ನಿರ್ಮಿಸಿದ್ದಾರೆ.

ಕಾಲೇಜಿಗೆ ದಾನಿಗಳ ಬಲ: ಬೆಂಗಳೂರು ಸೇರಿದಂತೆ ದೇಶ, ವಿದೇಶದ ಕಂಪನಿಗಳಾದ ರೈಟ್ ಟು ಲೀವ್, ಪೇಜ್, ಸೇಗಲ್, ಕೆನರಾ ಬ್ಯಾಂಕ್, ಯುನೈಟೈಡ್ ವೇ ಸೇರಿದಂತೆ ಅನೇಕ ದಾನಿಗಳು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಇಡಿ ಪರದೆ, ಪ್ರೊಜೆಕ್ಟರ್ ನೀಡಿದ್ದಾರೆ. ಗ್ರಂಥಾಲಯಕ್ಕೆ ಗ್ರೀನ್ ಬೋರ್ಡ್, ಪುಸ್ತಕ, ಕುರ್ಚಿ, ಮೇಜು ವಿತರಿಸಿದ್ದಾರೆ. ಗ್ರಾಮೀಣ ವಿದ್ಯಾರ್ಥಿನಿಯರ ಕಂಪ್ಯೂಟರ್ ಶಿಕ್ಷಣಕ್ಕೆ 20 ಕಂಪ್ಯೂಟರ್ ವಿತರಣೆ ಮಾಡಿದ್ದಾರೆ.

ಕಾಲೇಜಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ವಿಶೇಷ ತರಗತಿ, ಗುಂಪು ಚರ್ಚೆ, ಪಠ್ಯದ ಜತೆಗೆ ಕ್ರೀಡೆ, ಕರಾಟೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರುತ್ತದೆ.

ಖಾಸಗಿ ಕಾಲೇಜುಗಳಿಗೆ ಡೊನೇಷನ್, ದಾಖಲಾತಿ, ಇತರೆ ಸೇರಿದಂತೆ ಸಾವಿರಾರು ರೂಪಾಯಿ ವ್ಯಯಮಾಡಿ ವಿದ್ಯಾರ್ಥಿನಿಯರನ್ನು ದಾಖಲಿಸುತ್ತಾರೆ. ಆದರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ಕಾರಿ ಫೀಜು ಹೊರತುಪಡಿಸಿ ಶಿಕ್ಷಣ, ಆರೋಗ್ಯ, ಪುಸ್ತಕಗಳು ಎಲ್ಲವೂ ಉಚಿತ. ವಿದ್ಯಾರ್ಥಿನಿಯರ ಸುರಕ್ಷತೆಗೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದಾಖಲಿಸುವಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ರೂಪಾ ಪೈ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-16-1667458179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.