ಬಾಗೇಪಲ್ಲಿ: ಪಟ್ಟಣದ ಅವಧೂತ ಹಜರತ್ ಸೈಯ್ಯದನಾ ಷೇಕ್ ಹುಸೇನ್ ಶಾ ಖಾದ್ರಿ (ರ.ಅ) (ಹುಸೇನ್ ತಾತಯ್ಯಸ್ವಾಮಿ) 62ನೇ ಉರುಸ್ ಕಾರ್ಯಕ್ರಮ ಬುಧವಾರ ಸಾವಿರಾರು ಹಿಂದೂ ಮತ್ತು ಮುಸ್ಲಿಂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಉರುಸ್ ಅಂಗವಾಗಿ ಪಟ್ಟಣದ ಕುಂಬಾರಪೇಟೆ ಮತ್ತು ಗಂಗಮ್ಮ ಗುಡಿ ರಸ್ತೆಗಳಲ್ಲಿ, ದರ್ಗಾ ವೃತ್ತ, ಮತ್ತು ದರ್ಗಾಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕುಂಬಾರಪೇಟೆ ವೃತ್ತದಿಂದ ದರ್ಗಾದವರಿಗೂ ಭಕ್ತರು ಚಾದರ್ (ಹೂವಿನ ಮಾಲೆ)ಯನ್ನು ಹೊತ್ತರು. ಗಂಗಮ್ಮ ಗುಡಿಯ ಪೂಜಾರಿ ಪುನೀತ್ಸ್ವಾಮಿ ದೀಪದಾರತಿ ಬೆಳಗಿಸಿದರು. ಭಕ್ತರು ಹುಸೇನ್ ತಾತಯ್ಯರ ಗದ್ದುಗೆಗೆ ಹೂವಿನ ಮಾಲೆ ಸಮರ್ಪಿಸಿ, ಫಾತೇಹಾ (ವಿಶೇಷ ಪ್ರಾರ್ಥನೆ) ಮಾಡಿದರು.

ಪಟ್ಟಣದ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹುಸೇನ್ ತಾತಯ್ಯರ ಹಿಂದೂ ಮತ್ತು ಮುಸ್ಲಿಂ ಭಕ್ತರು ಗದ್ದುಗೆಗೆ ಹೂವು, ಸುಗಂಧ ದ್ರವ್ಯ ಹಾಕಿ ಪೂಜಿಸಿದರು. ಸಿಹಿ ಬೂಂದಿ, ಸಕ್ಕರೆ, ಕಲ್ಲುಸಕ್ಕರೆ ಇಟ್ಟು ಪ್ರಾರ್ಥನೆ ಮಾಡಿದರು.

ದರ್ಗಾದ ಆವರಣದಲ್ಲಿ ಕವ್ವಾಲಿ ಕಾರ್ಯಕ್ರಮ ನಡೆಯಿತು. ಜೈಪುರದ ಸಾರ್ಫಾರಾಜ್ ಮತ್ತು ಹೈದರಾಬಾದ್ನ ರಬ್ಬಿಯಾ ಚಿಷ್ಟಿ ಕವ್ವಾಲಿ ನಡೆಸಿಕೊಟ್ಟರು. ರಶ್ದೀಯಾ ಕನ್ನಡ ಭಾಷೆಯಲ್ಲಿ ಖವ್ವಾಲಿ ಸಾಲುಗಳನ್ನು ಹಾಡಿದರು. ಕವ್ವಾಲಿಯ ಕಲಾವಿದರು ನುಡಿಸಿದ ಸಂಗೀತಕ್ಕೆ ನೆರೆದ ಜನರು, ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದರು.

ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಮೋದ, ಕುರತುಲ್ ನಯನ, ಸೈಯ್ಯದ್, ಪಿ.ಬಿ.ನೇತ್ರ, ಜಯಂತಿ, ಅಪ್ಸಾ ಖೈನಂ, ಎಚ್.ಎಸ್.ಪವನ್, ಎಂಡಿ. ಸಮೀರ್ ಖಾನ್, ಅಂಜುಮ್ ಮೊಹಮದ್, ಎಂ.ಡಿ.ಸಫೀನ್, ಚಾಂದಿನಿ, ಸಮೀನಾ ಅವರನ್ನು ಗೌರವಿಸಲಾಯಿತು.

ಖವ್ವಾಲಿ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚಾಲನೆ ನೀಡಿದರು. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜುನಾಥರೆಡ್ಡಿ, ರಿಜ್ವಾನ್, ಮಹಮದ್ ಜಾಕೀರ್, ಅನ್ಸರ್, ವಾಸಿಂ, ಕಲೀಮುಲ್ಲಾ, ಜಯಪ್ರಕಾಶ ನಾರಾಯಣ, ಬಿ.ಆರ್.ನರಸಿಂಹನಾಯ್ಡು, ಸುಜಾತನಾಯ್ಡು, ಜಬೀವುಲ್ಲಾ, ಶಬ್ಬೀರ್, ಮುಜೀಬ್, ಸಲೀಂ, ನಿಸಾರ್ ಅಹಮದ್, ಸಯ್ಯದ್ ಮಸ್ತಾನ್, ರಹೀಂ, ಆಸೀಫ್, ಜಾವೀದ್, ಇನಾಯುತುಲ್ಲಾ, ಮೆಕಾನಿಕ್ಬಾಬು, ಸುಭಾನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-16-830800192

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.