ಬಾಗೇಪಲ್ಲಿ: ಉಚಿತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ನಿವೇಶನ ಮಂಜೂರು ಮಾಡಿಲ್ಲ ಎಂದು ದೂರಿ ಪಟ್ಟಣದ ಹೊರವಲಯದ ಸರ್ಕಾರಿ ಜಮೀನಿನಲ್ಲಿ ನಿರಾಶ್ರಿತ ಮಹಿಳೆಯರು ಗುಡಿಸಲು ಹಾಕಿ ಪ್ರತಿಭಟಿಸಿದರು.

ತಾಲ್ಲೂಕಿನ ಪಾತಬಾಗೇಪಲ್ಲಿ ಗ್ರಾಮದ ಸರ್ವೇ ನಂ 37 ರಲ್ಲಿನ ಸರ್ಕಾರಿ ಜಮೀನಿನಲ್ಲಿ ಪಟ್ಟಣದ ನಿರಾಶ್ರಿತ ಕುಟುಂಬಗಳು ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ಮಾರ್ಕ್ಸ್ವಾದಿ ರೆಡ್ಪ್ಲಾಗ್ ತಾಲ್ಲೂಕು ಸಂಘಟನೆ ನೇತೃತ್ವದಲ್ಲಿ ಭಾನುವಾರ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.

ಪೊಲೀಸರು ಪ್ರತಿಭಟನನಿರತರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು. ಸರ್ಕಾರಿ ಜಮೀನಲ್ಲಿ ಗುಡಿಸಲು ಹಾಕದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಅಯೋಜಿಸಿದರೂ ನಿರಾಶ್ರಿತ ಮಹಿಳೆಯರು ಉಚಿತ ನಿವೇಶನಕ್ಕೆ ಗುಡಿಸಲು ನಿರ್ಮಿಸಲು ಮುಂದಾದರು.

ತಹಶೀಲ್ದಾರ್ ಮನೀಷಾ ಎನ್. ಪತ್ರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಲು ನಿಮಗೆ ಅನುಮತಿ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ತೀವ್ರ ಪರಿಣಾಮ ಎದುರಿಸುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಉಚಿತ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಮೂರು ವರ್ಷಗಳು ಕಳೆದಿದೆ. ಉಚಿತ ನಿವೇಶನಕ್ಕೆ ಬೀದಿಗಿಳಿದು ಹೋರಾಟ ಮಾಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿವೇಶನ ಹಂಚಿಲ್ಲ. 2023 ರ ಚುನಾವಣೆ ಸಮಯದಲ್ಲಿ ಬಡವರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಇದೀಗ ಮತ್ತೊಮ್ಮೆ ಚುನಾವಣೆ ಬರುತ್ತದೆ. ನಿವೇಶನ ಕೊಡ್ತೀವಿ ಅಂತೀರಿ. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಲಾಗಿದೆ ಎಂದು ಪ್ರತಿಭಟನನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಆಗ ತಹಶೀಲ್ದಾರರು ನಿರಾಶ್ರಿತ ಕುಟುಂಬಗಳಿಗೆ ಉಚಿತ ನಿವೇಶನ ಮಂಜೂರಿಗೆ ಸರ್ಕಾರದ ಹಂತದಲ್ಲಿ ಕಾನೂನು ಪ್ರಕ್ರಿಯೆ ಆಗಬೇಕು. ಆಶ್ರಯ ಯೋಜನೆ ಮೂಲಕ ನಿಮಗೆ ನಿವೇಶನ ಮಂಜೂರು ಆಗುತ್ತದೆ. ಕಾನೂನು ಕೈಗೆ ತೆಗಡುಕೊಳ್ಳುವುದು ಬೇಡ. ಮಹಿಳೆಯರು ತಾಳ್ಮೆಯಿಂದ ವರ್ತಿಸಬೇಕು ಎಂದರು.

ಅನ್ಲೈನ್ ಮೂಲಕ ಪುರಸಭೆಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಸರ್ವೆ ನಡೆಸಿ ಅರ್ಹರಿಗೆ ಮಾತ್ರ ನಿವೇಶನ ಮಂಜೂರು ಆಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ರೆಡ್ ಫ್ಲಾಗ್ ಮುಖಂಡ ಚಲಪತಿ, ತಾಜೀನ್, ಚೌಡಮ್ಮ, ಮುಬಾರಕ್, ರಮಣಪ್ಪ, ಶಂಕರಪ್ಪ, ಲಾವಣ್ಯ, ಶ್ವೇತಾ, ಅಂಜಲಿ, ಲಕ್ಷ್ಮಮ್ಮ, ರೆಡ್ಡಮ್ಮ, ಅರುಣಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-16-1049891749

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.