ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪರಗೋಡು ಎ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಹೈಟೆಕ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಕೇಂದ್ರದ ಆವರಣದಲ್ಲಿ ಅಂದ ಚೆಂದದ ಗಿಡಗಳನ್ನು ಬೆಳೆಸಿರುವ ಕಾರಣ ಸುತ್ತಮುತ್ತಲೂ ಅಚ್ಚ ಹಸಿರಿನ ವಾತಾವರಣವಿದೆ. ಸ್ವಚ್ಛತೆಯ ಆವರಣದ ಮಾದರಿ ಅಂಗನವಾಡಿ ಕೇಂದ್ರವು ಮಕ್ಕಳನ್ನು ಕೈಬೀಸಿ ಕರೆಯುವಂತಿದೆ.

ಪರಗೋಡು ಗ್ರಾಮದಲ್ಲಿ ಎ ಹಾಗೂ ಬಿ ಎಂಬ ಎರಡು ಅಂಗನವಾಡಿ ಕೇಂದ್ರಗಳಿವೆ. ಪ್ರಸ್ತುತ ಎ ಕೇಂದ್ರದಲ್ಲಿ 21 ಮಕ್ಕಳು ಇದ್ದಾರೆ. ಅಂಗನವಾಡಿ ಎ ಕೇಂದ್ರದ ಹಳೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿತ್ತು. ಹಳೆಯ ಕಟ್ಟಡ ದುರಸ್ತಿ ಮಾಡಲು ಅನುದಾನ ಕಲ್ಪಿಸುವಂತೆ ತಾಲ್ಲೂಕು ಶಿಶು ಕಲ್ಯಾಣಾಧಿಕಾರಿ ರಾಮಚಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದರು. ಅಂಗನವಾಡಿ ಎ ಕೇಂದ್ರದ ಕಟ್ಟಡಕ್ಕೆ ಸರ್ಕಾರ ₹1 ಲಕ್ಷ ಅನುದಾನ ಬಂದಿದೆ. ಹಳೆಯ ಅಂಗನವಾಡಿ ಕಟ್ಟಡವನ್ನು ದುರಸ್ತಿ ಮಾಡಿಸಿ, ನೂತನ ಹೈಟೆಕ್ ಮಾದರಿಯಲ್ಲಿ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.

ಅಂಗನವಾಡಿ ಎ ಕೇಂದ್ರದ ಕಟ್ಟಡದ ಒಳಗಿನ ಗೋಡೆಗಳ ಮೇಲೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಅಕ್ಷರಗಳು, ಕಾಗುಣಿತ, ವಾರಗಳು, ತಿಂಗಳು, ಪ್ರಾಣಿ, ಪಕ್ಷಿಗಳು, ಕಾರ್ಟೂನ್ಗಳು, ಪ್ರಾಕೃತಿಕ ಚಿತ್ರಗಳನ್ನು ಬಣ್ಣಗಳಿಂದ ಚಿತ್ರಿಸಲಾಗಿದೆ. ಕೇಂದ್ರದ ಮುಂದೆ ಮತ್ತು ಒಳಗೆ ಗಿಡಗಳನ್ನು ಬೆಳೆಸಲಾಗಿದೆ. ಸುಂದರವಾದ ಉದ್ಯಾನವನ ಮಾಡಲಾಗಿದ್ದು, ಅದರಲ್ಲಿ ಶಿಕ್ಷಕಿ ನಾಗರತ್ನ ಅವರು ಬಣ್ಣ ಬಣ್ಣದ ಹೂವುಗಳನ್ನು ಬೆಳೆಸಿದ್ದಾರೆ.

ಕಟ್ಟಡಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಪಂಚಾಯಿತಿಯಿಂದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದ್ದು, ಮಕ್ಕಳು ಇದೇ ನೀರನ್ನು ಕುಡಿಯುತ್ತಾರೆ. ಕಟ್ಟಡದ ಇಡೀ ಆವರಣವು ಸ್ವಚ್ಛತೆಯಿಂದ ಕೂಡಿದೆ.

ಅಂಗನವಾಡಿ ಎ ಕೇಂದ್ರದ ಸಿ.ನಾಗರತ್ನ ಅವರು ತಮ್ಮ ಸೇವೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂಗನವಾಡಿ ಶಿಕ್ಷಕಿಯರ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಪೋಷಕರು ನಂಬಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳಿಸುತ್ತಾರೆ. ಶಾಲೆ, ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಶಿಕ್ಷಕರ ಕೆಲಸ. ಮಕ್ಕಳ ಮನಸ್ಸುಗಳಂತೆ ಆಟಿಕೆ, ಚಿತ್ರಗಳು, ನೃತ್ಯಗಳ ಮೂಲಕ ಶಿಕ್ಷಣ ಕಲಿಸುವ ಮೂಲಕ ತನ್ನತ್ತ ಸೆಳೆಯುತ್ತಿದ್ದೇನೆ. ಕಟ್ಟಡದ ಹೊರಗಿನ ಗೋಡೆಗಳ ಮೇಲೆ ಬರಹ, ಮಕ್ಕಳು ಕುಳಿತುಕೊಳ್ಳಲು ಕುರ್ಚಿ ಸೇರಿ ಇನ್ನತಿರ ಸೌಲಭ್ಯಗಳಿಗಾಗಿ ದಾನಿಗಳ ನೆರವು ಅಗತ್ಯವಿದೆ ಎಂದು ಶಿಕ್ಷಕಿ ಸಿ. ನಾಗರತ್ನ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು

ಸ್ವಂತ ಖರ್ಚಿನಿಂದ ಕೆಲವು ಆಟಿಕೆ ಖರೀದಿ

ಅಂಗನವಾಡಿ ಶಿಕ್ಷಕಿ ಸಿ.ನಾಗರತ್ನ ಸರ್ಕಾರದಿಂದ ವಿತರಿಸಿರುವ ಪಾಠೋಪಕರಣ ಪೀಠೋಪಕರಣಗಳ ಜೊತೆಗೆ ವೈಯುಕ್ತಿಕ ಹಣ ಖರ್ಚು ಮಾಡಿ ಮಕ್ಕಳಿಗೆ ಆಟಿಕೆ ಸಾಮಾನುಗಳು ಹಾಗೂ ಬೊಂಬೆಗಳನ್ನು ಖರೀದಿಸಿದ್ದಾರೆ. ಹೈಟೆಕ್ ಕಟ್ಟಡ ಚೆಂದದ ಬಣ್ಣದ ಬರಹಗಳು ಪರಿಸರದ ಸ್ವಚ್ಛತೆ ಗುಣಾತ್ಮಕ ಶಿಕ್ಷಣ ಮತ್ತು ಪೌಷ್ಟಿಕಾಂಶ ಆಹಾರ ವಿತರಣೆ ಮೂಲಕ ಅಂಗನವಾಡಿ ಎ ಕೇಂದ್ರವು ಚಿಣ್ಣರು ಮತ್ತು ಪೋಷಕರ ಗಮನ ಸೆಳೆದಿದೆ. ಕಟ್ಟಡದ ಒಳಗೆ ಬಿಳಿ ಹಾಳೆಗಳಲ್ಲಿ ಕಾಗುಣಿತ ಅಕ್ಷರಗಳು ಕಲಿಕೆಗೆ ಪೂರಕವಾದ ಬರಹಗಳನ್ನು ನೇತುಹಾಕಲಾಗಿದೆ. ಶಿಕ್ಷಕಿ ಸಿ.ನಾಗರತ್ನ ಆಟಿಕೆಗಳಲ್ಲಿನ ಅಕ್ಷರ ಕಾಗುಣಿತ ಮತ್ತು ಅಂಕಿಗಳನ್ನು ಜೋಡಿಸುವುದು. ಚಕ್ರವನ್ನು ಬರೆಯಿಸಿ ಆಟಿಕೆಗಳನ್ನು ಅಕ್ಷರಗಳನ್ನು ಜೋಡಿಸುವ ಮೂಲಕ ಅಂಗನವಾಡಿ ಮಕ್ಕಳಿಗೆ ಬೋಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.