ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಬಿಸಿಲಿನ ಝಳಕ್ಕೆ ಹಚ್ಚ ಹಸಿರಿನ ಹುಲ್ಲು ಸಂಪೂರ್ಣವಾಗಿ ಒಣಗಿ ಹೋಗಿದೆ. ಜಾನುವಾರುಗಳಿಗೆ ಹಸಿರಿನ ಮೇವು ಸಿಗುತ್ತಿಲ್ಲ. ಇದರಿಂದಾಗಿ ರೈತರು ಹಸಿ ಮೇವಿಗಾಗಿ ಪರದಾಡುವಂತಾಗಿದೆ.

ಯಾವುದೇ ನದಿ, ನಾಲೆ ಇಲ್ಲದ ತಾಲ್ಲೂಕಿಗೆ ಶಾಶ್ವತವಾಗಿ ನೀರು ಪೂರೈಸುವ ಯಾವುದೇ ಯೋಜನೆಗಳು ಜಾರಿಯಾಗಿಲ್ಲ. ಕೇವಲ ಮಳೆಯನ್ನೇ ಆಶ್ರಯಿಸಲಾಗಿದೆ. ಮಳೆ ಬಂದರೆ, ಕೆರೆ ಕುಂಟೆ, ಕಾಲುವೆಗಳು, ಚಿತ್ರಾವತಿ ಮತ್ತು ವಂಡಮಾನ್ ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತದೆ. ಮಳೆ ಇಲ್ಲದೆ ಕೊಳವೆಬಾವಿಗಳು, ತೆರೆದ ಬಾವಿಗಳು ಬತ್ತಿ ಹೋಗಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟ ಗುಡ್ಡಗಳಲ್ಲಿ ಇದೀಗ ಮರುಭೂಮಿಯಂಥ ಛಾಯೆ ಕಂಡುಬರುತ್ತಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವೂ ಇಲ್ಲ. ಇದರಿಂದಾಗಿ ಮುಂಗಾರು ಮತ್ತು ಹಿಂಗಾರು ಮಳೆ ಇಲ್ಲದೆ ಗುಟುಕು ನೀರಿಗೂ ಹರಸಾಹಸಪಡುವಂತಾಗಿದೆ.

ತಾಲ್ಲೂಕಿನಲ್ಲಿ ಹಿಂಗಾರು ಮತ್ತು ಮುಂಗಾರು ಮಳೆ ಸಕಾಲದಲ್ಲಿ ಆಗಿಲ್ಲ. ಹೊಲ ಗದ್ದೆಗಳಲ್ಲಿ ಹುಲ್ಲು ಬೆಳೆದಿಲ್ಲ. ಜಾನುವಾರುಗಳಿಗೆ ಹಸಿರು ಮೇವು ಸಿಗುತ್ತಿಲ್ಲ. ಹೀಗಾಗಿ, ರೈತರು ಅನ್ಯ ಪ್ರದೇಶಗಳಿಂದ ದುಬಾರಿ ಬೆಲೆಗೆ ಒಣಹುಲ್ಲು ಖರೀದಿ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕರು ಕೃಷಿಯನ್ನೇ ನಂಬಿದ್ದಾರೆ. ಮಳೆ ಬರದೆ ತರಕಾರಿ ಬೆಳೆ ಬೆಳೆಯಲು ಆಗಿಲ್ಲ. ಕೆಲ ರೈತರು ಬದುಕಿಗಾಗಿ ಕುರಿ, ಮೇಕೆಗಳು ಸೇರಿದಂತೆ ಅನೇಕ ತಳಿಯ ಹಸುಗಳನ್ನು ಸಾಕಿದ್ದಾರೆ. ತಾಲ್ಲೂಕಿನಲ್ಲಿ ಹೆಚ್ಚಾಗಿ ಲಂಬಾಣಿ ತಾಂಡಾಗಳಿವೆ. ತಾಂಡಾಗಳ ಮತ್ತು ಗ್ರಾಮಗಳ ಕೃಷಿಕೂಲಿ ಕಾರ್ಮಿಕರು ಸಹ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಕೆಲವು ರೈತರು ಸೀಮೆ, ನಾಟಿ ಹಸುಗಳಿಗೆ ತಮ್ಮ ಹೊಲ, ಗದ್ದೆಗಳಲ್ಲಿ ಹಸಿರಿನ ಹುಲ್ಲು ಬೆಳೆದಿದ್ದು, ಅವರಿಗೆ ಹೈನುಗಾರಿಕೆಯೇ ಜೀವನಕ್ಕೆ ಆಸರೆಯಾಗಿದೆ.

ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿತದಿಂದ ಹೊಲ, ಗದ್ದೆಗಳು ಒಣಗಿವೆ. ದಟ್ಟವಾದ ಕಾಡು, ಬೆಟ್ಟ ಗುಡ್ಡಗಳಲ್ಲಿ ಹುಲ್ಲು ಬೆಳೆದಿಲ್ಲ. ಕುರಿ, ಮೇಕೆ, ಹಸುಗಳನ್ನು ಸಾಕಿದವರು ಮೇವು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ ಹೊಲ ಗದ್ದೆಗಳು, ಬೆಟ್ಟ ಗುಡ್ಡಗಳು, ಖಾಲಿ ಜಾಗಗಳಲ್ಲಿ ಜಾನುವಾರು ಮೇಯಿಸಲು ಬಿಡುತ್ತಿದ್ದಾರೆ. ಆದರೆ, ಒಣಭೂಮಿಯಲ್ಲಿ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ ಎನ್ನುತ್ತಾರೆ ರೈತರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-16-1086400063

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.