ಬಾಗೇಪಲ್ಲಿ: ಗ್ರಾಮದೇವತೆ ಗಂಗಮ್ಮದೇವಿಯ ಧರ್ಮರಾಯ ಕರಗದ ಪ್ರಯುಕ್ತ ಪಟ್ಟಣದಲ್ಲಿ ಶುಕ್ರವಾರ ಸಂಜೆ ಜಾರುಟ್ಲು ಪರಿಷೆ, ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಆವುಲಮಂದೆ ರಸ್ತೆಯ ಜಾಗದಲ್ಲಿ ಕಿತ್ತಳೆ ಅಂಟು, ಜೇಡಿಮಣ್ಣನ್ನು ಉದ್ದನೆಯ ಕಂಬಕ್ಕೆ ಅಂಟಿಸಲಾಗಿತ್ತು. ಗಂಗಮ್ಮದೇವಿಗೆ ಪೂಜೆ ಸಲ್ಲಿಸಿದ ವೀರಕುಮಾರರು ತಮಟೆಗಳ ಶಬ್ದಗಳೊಂದಿಗೆ ಕೈಗಳಲ್ಲಿ ಕೋಲು ಹಿಡಿದು, ಹಣೆಗೆ ಕುಂಕುಮ ಇಟ್ಟು ಜಾರುಟ್ಲು ಕಂಬದವರೆಗೆ ಮೆರವಣಿಗೆ ಮಾಡಿದರು. ಜಾರುಟ್ಲು ಕಂಬಕ್ಕೆ ವೀರಕುಮಾರರು ಪೂಜೆ ಸಲ್ಲಿಸಿದರು. ಉದ್ದನೆಯ ಕಂಬ ಹತ್ತಲು ಯತ್ನಿಸಿದರು. ಆದರೆ ಕಂಬ ಏರಲು ಆಗದ ವೀರಕುಮಾರರು, ಕೆಳಗೆ ಜೇಡಿಮಣ್ಣಿನಲ್ಲಿ ಬೀಳುತ್ತಿದ್ದ ದೃಶ್ಯಗಳು ನೆರೆದ ಜನರನ್ನು ನಗೆಗಡಲಿನಲ್ಲಿ ತೇಲಿಸಿತು. ನೆರೆದ ಜನರು ಸಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

ಗಂಗಮ್ಮ ದೇವಾಲಯದಿಂದ ಡಾ.ಎಚ್.ಎನ್.ವೃತ್ತ, ರಾಘವೇಂದ್ರ ಮಠದವರೆಗೆ ಉತ್ಸವ ಮೂರ್ತಿಯನ್ನು ಚೆಂಡೆಯೊಂದಿಗೆ ಮೆರವಣಿಗೆ ಮಾಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು.

ಗಂಗಮ್ಮ ದೇವಾಲಯದಿಂದ ಮೇಲೂರಿನ ವಹ್ನಿಕುಲ ಧರ್ಮೇಶ್ ಕಲಶದ ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ಮುಖ್ಯರಸ್ತೆಯಲ್ಲಿ ಕೆಲ ಕಾಲ ಕಲಶದ ಕರಗ ಪ್ರದರ್ಶನ ಮಾಡಲಾಯಿತು.

ಕರಗ ಮಹೋತ್ಸವ ಸಮಿತಿಯ ನರಸಿಂಹನಾಯ್ಡು, ಎ.ಜಿ.ಸುಧಾಕರ್, ಆದಿಮೂರ್ತಿ, ಮರಿಯಪ್ಪ, ಅಶ್ವತ್ಥಪ್ಪ, ಮೇಸ್ತ್ರಿ ವೆಂಕಟೇಶ್, ಜಿ.ಜಿ.ಶ್ರೀನಿವಾಸ್, ಮಂಜುನಾಥ್, ನಾರಾಯಣಸ್ವಾಮಿ, ಗೋಪಾಲ, ಅಭಿ, ಸಂದೀಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.