ಬಾಗೇಪಲ್ಲಿ: ಗ್ರಾಮದೇವತೆ ಗಂಗಮ್ಮ ಟ್ರಸ್ಟ್ ಹಾಗೂ ಕರಗ ಮಹೋತ್ಸವ ಸಮಿತಿಯಿಂದ ಧರ್ಮರಾಯ ಕರಗ ಮಹೋತ್ಸವದ ಪ್ರಯುಕ್ತ ಗಂಗಮ್ಮದೇವಿಗೆ ಹಸಿಕರಗ ಮತ್ತು ಮಹಿಳೆಯಿಂದ ತಂಬಿಟ್ಟಿನ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.

ದೇವಾಲಯದ ಒಳಗೆ, ಹೊರಗೆ ಮತ್ತು ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಈಶ್ವರ, ಪಾರ್ವತಿ, ಗಂಗಮ್ಮದೇವಿ ಸೇರಿದಂತೆ ವಿವಿಧ ದೇವರಿಗೆ ದೀಪಾಲಂಕಾರ ಮಾಡಲಾಗಿತ್ತು. ದೇವಿಗೆ ಹೂವಿನ ಅಲಂಕಾರ ಮಾಡಲಾಗಿತ್ತು.

ರಾಜಕಾಲುವೆಯ ಬೈಯಪರೆಡ್ಡಿ ಮನೆ ಮುಂದೆ ಹಸಿಕರಗದ ಪೂಜಾಕೈಂಕರ್ಯ, ಹೋಮ ನಡೆಯಿತು. ಹಸಿಕರಗವನ್ನು ಹೊತ್ತ ಮೇಲೂರಿನ ವಹ್ನಿಕುಲ ಧರ್ಮೇಶ್ ಮನೆಯಿಂದ ಹೊರಗೆ ಬರುತ್ತಿದ್ದಂತೆ ಮಹಿಳೆಯರು, ಹೆಣ್ಣುಮಕ್ಕಳು ಕರ್ಪೂರದ ದೀಪ ಬೆಳಗಿಸಿದರು. ಕಲಾವಿದರು ತಮಟೆ ಬಾರಿಸಿದರು. ವೀರಕುಮಾರರು ಗೋವಿಂದಾ.. ಗೋವಿಂದಾ ಎಂದು ಕತ್ತಿಯನ್ನು ಎದೆಗೆ ಹೊಡೆದುಕೊಂಡು, ಕೈಗೆ ಚಾಟಿ ಏಟು ಹೊಡೆಸಿಕೊಂಡರು.

ಪಟ್ಟಣದ ಆವುಲಮಂದೆ, ಕುಂಬಾರಪೇಟೆ ಸೇರಿದಂತೆ ನೇತಾಜಿ ವೃತ್ತ, ಡಿವಿಜಿ ಮುಖ್ಯರಸ್ತೆಯಲ್ಲಿ ಹಸಿಕರಗ ಮೆರವಣಿಗೆ ಮಾಡಲಾಯಿತು. ಗಂಗಮ್ಮ ದೇವಾಲಯದ ಮುಂದೆ ಹಸಿಕರಗ ಹೊತ್ತ ಧರ್ಮೇಶ್ ಒಂದು ಗಂಟೆ ತಮಟೆ ವಾದನಕ್ಕೆ ಹೆಜ್ಜೆ ಹಾಕಿದರು.

ತಂಬಿಟ್ಟಿನ ದೀಪೋತ್ಸವ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ ನಗರ ಮತ್ತು ವಿವಿಧ ವಾರ್ಡ್ಗಳ ಮಹಿಳೆಯರು, ಹೆಣ್ಣುಮಕ್ಕಳು ಕಳಶದ ಉದ್ದ ಹೂವು, ವೀಳ್ಯದೆಲೆಗಳಿಂದ ಸಿಂಗರಿಸಿದ ತಂಬಿಟ್ಟಿನ ದೀಪಗಳು ಜನರ ಆಕರ್ಷಣೆ ಸೆಳೆಯಿತು. ಡಿವಿಜಿ ಮುಖ್ಯರಸ್ತೆಯಲ್ಲಿ ತಂಬಿಟ್ಟಿನ ದೀಪದಾರತಿ ಮೆರವಣಿಗೆ ಮಾಡಿದರು. ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ಅಗ್ನಿಕುಂಡದ ಒಳಗೆ ದೀಪಗಳನ್ನು ಹೊತ್ತು ಭಕ್ತಿ ಸಮರ್ಪಿಸಿದರು.

ಕರಗ ಮಹೋತ್ಸವ ಸಮಿತಿಯ ಎ.ಜಿ.ಸುಧಾಕರ್, ಬಿ.ಆರ್.ನರಸಿಂಹನಾಯ್ಡು, ಮರಿಯಪ್ಪ, ಪೋತೇಪಲ್ಲಿ ಆದಿಮೂರ್ತಿ, ವಾಲ್ಮಿಕಿ ಅಶ್ವತ್ಥಪ್ಪ, ಚನ್ನರಾಯಪ್ಪ, ಸೂರ್ಯನಾರಾಯಣರೆಡ್ಡಿ, ಬಿ.ಎಸ್.ನಾರಾಯಣಸ್ವಾಮಿ, ಶಿವಪ್ಪ, ಗೋಪಾಲ, ನಟರಾಜ್, ಜಯಪ್ರಕಾಶ್ನಾರಾಯಣ್, ರೇಡಿಯೋ ಕೃಷ್ಣಪ್ಪ, ಗಡ್ಡಂರಮೇಶ್, ಮೇಸ್ತ್ರಿವೆಂಕಟೇಶ್, ಗಡ್ಡಂಚಂದ್ರ, ಸುಜಾತನಾಯ್ಡು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-16-1789741523

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.