ಬಾಗೇಪಲ್ಲಿ: ‘ರಾಜ್ಯದ ಮೂಲೆಗಳಲ್ಲಿ ನಡೆಯುವ ಕೋಮು ಸಂಘರ್ಷ ಮತ್ತು ಮಡೆಮಡೆ ಸ್ನಾನದ ಹೋರಾಟ ಸೇರಿದಂತೆ ಕೃಷಿಕೂಲಿಕಾರ್ಮಿಕರ, ಜನಸಾಮಾನ್ಯರ ಪರ ಬೀದಿಗಿಳಿದು ಹೋರಾಟ ಮಾಡಿದ ಹೋರಾಟಗಾರ’ ಜಿ.ವಿ.ಶ್ರೀರಾಮರೆಡ್ಡಿ ರಾಜ್ಯದ ಜನರ ಧ್ವನಿಯಾಗಿದ್ದರು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಹೇಳಿದರು.

ಬಸ್ ನಿಲ್ದಾಣದ ಮುಂಭಾಗದ ಜಿವಿಎಸ್ ಪುತ್ಥಳಿ ಮುಂದೆ ಸಿಪಿಎಂ ತಾಲ್ಲೂಕು ಸಮಿತಿ, ಪ್ರಾಂತ ರೈತ ಸಂಘ, ಕೃಷಿಕೂಲಿಕಾರರ ಸಂಘ, ದಲಿತ ಹಕ್ಕುಗಳ ಸಮಿತಿ ಮತ್ತು ಸಿಐಟಿಯು, ಡಿವೈಎಫ್ಐ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿಪಿಎಂ ನಾಯಕ ದಿ. ಜಿ.ವಿ.ಶ್ರೀರಾಮರೆಡ್ಡಿ 4ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕರಾವಳಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕೋಮು ಸಂಘರ್ಷಕ್ಕೆ ಬಲಿಯಾದವರ ಪರ, ಕೋಮು ಸಂಘಟನೆಗಳ ವಿರುದ್ಧ, ಮಂಗಳೂರಿನಲ್ಲಿ ಸೌಹಾರ್ದತೆ ರ್ಯಾಲಿ, ರಾಜ್ಯದ ಕೃಷಿಕೂಲಿಕಾರ್ಮಿಕರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರ ಹೋರಾಟ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತವಾದ ನೀರು ಕಲ್ಪಿಸಲು ಡಾ.ಪರಮಶಿವಯ್ಯ ವರದಿ ಜಾರಿ ಮಾಡಲು ಪಾದಯಾತ್ರೆ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಉಳುವವನಿಗೆ ಭೂಮಿ ಸಿಗಲು, ಕುಡಿಯುವ ನೀರು, ಮನೆ, ನಿವೇಶನ ಸೇರಿದಂತೆ ಅನೇಕ ಹೋರಾಟ ಮಾಡಿದ್ದಾರೆ. ಶ್ರೀರಾಮರೆಡ್ಡಿ ಜನರ ಮಾನಸಲ್ಲಿ ಚಿರಸ್ಥಾಯಿ ಆಗಿದ್ದಾರೆ’ ಎಂದರು.

‘ಶ್ರೀರಾಮರೆಡ್ಡಿ ಹೋರಾಟಗಳ ಹಾದಿ ಮತ್ತು ಸಂಘಟನೆಯನ್ನು ಮುನ್ನೆಡಸಲು ಸಿಪಿಎಂ ತೀರ್ಮಾನಿಸಿದೆ. ಕ್ಷೇತ್ರ ಅಭಿವೃದ್ಧಿ ಆಗಬೇಕಾದರೆ ಸಿಪಿಎಂನ ಆಡಳಿತದಿಂದ ಮಾತ್ರ ಸಾಧ್ಯ. ಸಿಪಿಎಂ ಪಕ್ಷವನ್ನು ಜನರು ಬೆಂಬಲಿಸಬೇಕು’ ಎಂದು ಹೇಳಿದರು.

ಸಿಪಿಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ‘ಜಿ.ವಿ.ಶ್ರೀರಾಮರೆಡ್ಡಿ ತಮ್ಮ ಬದುಕಿನ ಉದ್ದಕ್ಕೂ ಸಿಪಿಎಂ ಪಕ್ಷವನ್ನು ಮುನ್ನೆಡೆಸಿದ್ದಾರೆ. ಎಸ್ಎಫ್ಐ, ಡಿವೈಎಫ್ಐ, ರೈತ ಸಂಘಗಳು ಸೇರಿದಂತೆ ಅನೇಕ ಸಾಮೂಹಿಕ ಸಂಘಟನೆಗಳ ಸಂಸ್ಥಾಪಕರಾಗಿದ್ದಾರೆ. ವಿಧಾನಸಭಾ ಕಾರ್ಯಕಲಾಪಗಳಲ್ಲಿ ಮತ್ತು ಹೊರಗಡೆಯಲ್ಲಿ ಸಾಮಾನ್ಯ ಜನರ ಪರ, ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲುವಾಸ ಅನುಭವಿಸಿದ್ದಾರೆ. ಜಿ.ವಿ.ಶ್ರೀರಾಮರೆಡ್ಡಿ ಹೋರಾಟಗಳ ಹಾದಿ, ನುಡಿಗಳನ್ನು ಮುನ್ನೆಡಸಬೇಕಾಗಿದೆ’ ಎಂದರು.

ಚನ್ನರಾಯಪ್ಪ ಮತ್ತು ಕಲಾವಿದರು ಕ್ರಾಂತಿಗೀತೆ ಹಾಡಿದರು. ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚನ್ನರಾಯಪ್ಪ, ಅಧ್ಯಕ್ಷ ದೇವಿಕುಂಟೆ ಶ್ರೀನಿವಾಸ್, ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ, ಎಚ್.ಎ.ರಾಮಲಿಂಗಪ್ಪ, ದಲಿತ ಹಕ್ಕುಗಳ ಸಮಿತಿಯ ಅಶ್ವತ್ಥಪ್ಪ, ಚಂಚುರಾಯನಪಲ್ಲಿ ಕೃಷ್ಣಪ್ಪ, ಟೌನ್ಕೃಷ್ಣಪ್ಪ, ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಮುಸ್ತಾಫ, ಡಿವೈಎಫ್ಐ ಜಿಲ್ಲಾ ಸಂಚಾಲಕ ಸೋಮಶೇಖರ್, ಎಸ್ಎಫ್ಐ ಜಿಲ್ಲಾ ಸಂಚಾಲಕ ಎ.ಸೋಮಶೇಖರ್, ರಶೀದ್, ಬಿ.ಎಚ್.ರಫೀಕ್, ರಾಮಾಂಜಿ, ವೆಂಕಟರಾಂ, ಚಂದ್ರಶೇಖರರೆಡ್ಡಿ, ದೇವಿಕುಂಟೆಗಂಗಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-16-1443876657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.