ಬಾಗೇಪಲ್ಲಿ: ಗುಂಡುಮಲ್ಲಿಗೆಯಿಂದ ಸಾಲಾಗಿ ಪೋಣಿಸಿದ ಹೂವಿನ ಹಾರಗಳು, ಹಾರಗಳ ಮೇಲೆ ದೇವರ ಮೂರ್ತಿಗಳು, ಹಳದಿ ಬಣ್ಣದ ಸೀರೆ, ಕೈಗಳಿಗೆ ಬಳೆ ಹಾಕಿದ ಮೇಲೂರಿನ ವಹ್ನಿಕುಲ ಧರ್ಮೇಶ್ ಹೂವಿನ ಕರಗ ಹೊತ್ತು, ತಮಟೆ ಶಬ್ದ, ಕನ್ನಡ ಹಾಡುಗಳಿಗೆ ಕುಣಿದು ರಂಜಿಸಿದರು.

ಗ್ರಾಮದೇವತೆ ಗಂಗಮ್ಮ ದೇವಿಯ ಧರ್ಮರಾಯ ಹೂವಿನ ಕರಗ ಮಹೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಬಾಲಕರ ಸರ್ಕಾರಿ ಶಾಲಾವರಣದಲ್ಲಿ ಹೂವಿನ ಕರಗ ಹೊರುವ ವಹ್ನಿಕುಲ ಧರ್ಮೇಶ್ ಅವರಿಗೆ ಬಳೆ ತೊಡಿಸುವ ಶಾಸ್ತ್ರ ನಡೆಯಿತು. ಗಂಗಮ್ಮ ದೇವಾಲಯದವರೆಗೆ ಕತ್ತಿಗಳನ್ನು, ಚಾಟಿ, ತ್ರಿಶೂಲವನ್ನು ಹಿಡಿದ ವೀರಕುಮಾರರೊಂದಿಗೆ ಗಂಗಮ್ಮದೇವಿ ದೇವಾಲಯದವರೆಗೆ ಮೆರವಣಿಗೆ ಮಾಡಿದರು. ಧರ್ಮೇಶ್ ದೇವಿಯ ಮೂಲವಿಗ್ರಹಕ್ಕೆ ದೀಪದಾರತಿ ಬೆಳಗಿದರು. ನಂತರ ಹೂವಿನ ಕರಗ ಹೊತ್ತು, ದೇವಾಲಯದಿಂದ ಹೊರಬಂದರು.

ದೇವಾಲಯದ ಮುಂದೆ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹರಿನಾಥರೆಡ್ಡಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮುಖಂಡ ಬಿ.ಆರ್.ನರಸಿಂಹನಾಯ್ಡು, ನೇತಾಜಿ ವೃತ್ತದ ಮಂಜುನಾಥ್, ಗಡ್ಡಂರಮೇಶ್ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮಗಳಲ್ಲಿ ಕರಗ ಹೊತ್ತ ಧರ್ಮೇಶ್ ಹೆಜ್ಜೆ ಹಾಕಿದರು. ವೇದಿಕೆ ಮುಂಭಾಗದಲ್ಲಿ ಜಮಾಯಿಸಿದ್ದ ಜನರ ಮುಂದೆ ಹಾಡುಗಳಿಗೆ ಮತ್ತು ತಮಟೆ ಶಬ್ದಕ್ಕೆ ಕುಣಿದರು.

ತಡರಾತ್ರಿಯಲ್ಲಿ ಬೆಸ್ಕಾಂ ವಸತಿ ಗೃಹ, ಯರ್ರಕಾಲುವೆ, ಸಿವಿಲ್ ನ್ಯಾಯಾಲಯದ ಹಿಂದೆ, ಆವುಲಮಂದೆ ರಸ್ತೆ, ಬ್ರಾಹ್ಮಣ, ಗಂಗಮ್ಮಗುಡಿ ಬೀದಿ, ಕುಂಬಾರಪೇಟೆ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಾಲ್ಮೀಕಿ ಕಾಲೋನಿಗಳಲ್ಲಿ, ನ್ಯಾಷನಲ್ ಕಾಲೇಜು, ಪೊಲೀಸ್ ವಸತಿ ಗೃಹ, ಕೊತ್ತಪಲ್ಲಿ ರಸ್ತೆ, ಹಳೆ ಭಾರತಿ ವಿದ್ಯಾ ಮಂದಿರ ಶಾಲೆ ರಸ್ತೆ, ಸಂತೆಮೈದಾನರಸ್ತೆ, ಆರೋಗ್ಯ ವಸತಿ ಗೃಹಗಳ 23 ವಾರ್ಡ್ಗಳಲ್ಲಿ ಕರಗ ಸಾಗಿತು. ಮಹಿಳೆಯರು ಮನೆಗಳ ಮುಂದೆ ರಂಗೋಲಿ ಬಿಡಿಸಿ, ದೀಪದಾರತಿ ಬೆಳಗಿದರು.

ಪಟ್ಟಣದ ಅವಧೂತ ಹುಸೇನುದಾಸಯ್ಯ ದರ್ಗಾ ಸುತ್ತಲೂ ಹೂವಿನ ಕರಗ ಪ್ರದಕ್ಷಿಣೆ ಮಾಡಲಾಯಿತು. ದರ್ಗಾದ ಫಕೀರರು ಹೂವಿನ ಕರಗಕ್ಕೆ ಹೂವು, ಹಣ್ಣು, ತಾಂಬೂಲ, ಸಿಹಿ ತಿಂಡಿ ಇಟ್ಟು ಪ್ರಾರ್ಥನೆ ಮಾಡಿದರು.

ಹುಸೇನುದಾಸಯ್ಯ ದರ್ಗಾ ರಸ್ತೆಗೆ ಸಂಚರಿಸುವ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಗಂಗಮ್ಮ ಹೂವಿನ ಕರಗ ಸ್ವಾಗತಿಸಲು ಹಿಂದೂ, ಮುಸ್ಲಿಂ ಮಹಿಳೆಯರು, ಮಕ್ಕಳು, ಯುವಕರು ರಂಗೋಲಿ ಬಿಡಿಸಿ, ಚೆಂಡುಮಲ್ಲಿಗೆ ಹೂವು ಹಾಕಿದ್ದರು.

ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎನ್.ಸಂಪಂಗಿ, ವಿ.ಮುನಿರಾಜು, ಜೂಲಪಾಳ್ಯಸಿ.ಕೆ.ಮೌಲಾಷರೀಫ್, ಎಂ.ಬಿ.ಲಕ್ಷ್ಮಿನರಸಿಂಹಯ್ಯ, ಜೆ.ಪಿ.ಚಂದ್ರಶೇಖರೆಡ್ಡಿ, ಎಸ್.ಆರ್.ಲಕ್ಷ್ಮಿನಾರಾಯಣ, ಬಿ.ಆರ್.ನರಸಿಂಹನಾಯ್ಡು, ಎ.ಜಿಸುಧಾಕರ್, ಮರಿಯಪ್ಪ, ಆದಿಮೂರ್ತಿ, ಸೂರ್ಯನಾರಾಯಣರೆಡ್ಡಿ, ಎ.ನಂಜುಂಡಪ್ಪ, ಮೇಸ್ತ್ರಿವೆಂಕಟೇಶ್, ನಟರಾಜ್, ಮಂಜುನಾಥ್, ಸಂದೀಪ್, ಜಯಪ್ರಕಾಶ ನಾರಾಯಣ್, ಗಡ್ಡಂರಮೇಶ್, ಸಂದೀಪ್, ಅಭಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.