ಬಾಗೇಪಲ್ಲಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಾಂಪೌಂಡ್ ನೆಲಸಮ ಮಾಡಿದ ಸ್ಥಳಕ್ಕೆ ಈಚೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕಾಂಪೌಂಡ್ ನೆಲಸಮ ಮಾಡುವಾಗ ತಹಶೀಲ್ದಾರ್ಗೆ ಹಾಗೂ ತನ್ನ ಗಮನಕ್ಕೆ ತರದ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಕಾಂಪೌಂಡ್, ಕಟ್ಟಡ ಅಥವಾ ಜಾಗಗಳನ್ನು ನೆಲಸಮ ಮಾಡುವಾಗ ಸರ್ಕಾರದಿಂದ ಅನುಮತಿ ಪಡೆಯಬೇಕು. ರಸ್ತೆ ಅಗಲಿಕರಣ ಮಾಡುವಾಗ, ಸರ್ಕಾರಿ ಐಟಿಐ ಕಾಲೇಜಿನ ಕಾಂಪೌಂಡನ್ನು ನೆಲಸಮ ಮಾಡಲಾಗಿದೆ. ಕಾಂಪೌಂಡ್ ನೆಲಸಮ ಮಾಡುವಾಗ ಏನು ಮಾಡುತ್ತಿದ್ದೀರಿ? ಎಂದು ಕಾಲೇಜಿನ ಪ್ರಾಂಶುಪಾಲರನ್ನು ಪ್ರಶ್ನಿಸಿದರು.

ಕಾಂಪೌಂಡ್ ನೆಲಸಮ ಮಾಡಿದ ಬಗ್ಗೆ ಕಾಲೇಜಿಗೆ ಪತ್ರ ಬರೆಯಲಾಗಿದೆಯೇ? ಎಂದು ಶಾಸಕರು ಪ್ರಶ್ನಿಸಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಕಾಲೇಜಿಗೆ ಪಟೇಲ್-ಕೆಎನ್ಆರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ರವರು ಪತ್ರ ಬರೆದಿದ್ದಾರೆ. ಕಾಲೇಜಿನ ಕಾಂಪೌಂಡ್ ಮಟ್ಟೆದ್ದಲ ದಿನ್ನೆಯ ಸರ್ವೆ ನಂಬರಿನ 52ರಲ್ಲಿ ಇದೆ. ಇದರಿಂದ ಅತಿಕ್ರಮಣ ಮಾಡಿದ ಕಾಂಪೌಂಡನ್ನು ತೆರವು ಮಾಡಿಸಲಾಗುವುದು ಎಂದು ಪತ್ರ ಬರೆದಿದ್ದಾರೆ ಎಂದರು.

ಕಾಲೇಜಿನ ಕಾಂಪೌಂಡ್ ಸರ್ಕಾರದ ಆಸ್ತಿ. ಕಾಂಪೌಂಡು ನೆಲಸಮ ಮಾಡುವಾಗ ಗಮನಕ್ಕೆ ತರದವರ ವಿರುದ್ಧ ನೋಟಿಸ್ ನೀಡಿ ವಿಚಾರಣೆ ಮಾಡುವಂತೆ ತಹಶೀಲ್ದಾರ್ ಮನೀಷಾ ಎನ್.ಪತ್ರಿಗೆ ಸೂಚನೆ ನೀಡಿದರು.

ಸರ್ಕಾರಿ ಐಟಿಐ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸುಬ್ಬಾರೆಡ್ಡಿ ಉದ್ಘಾಟಿಸಿದರು. ಕಾಲೇಜಿಗೆ ಕೊಳವೆಬಾವಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಲೋಕೊಪಯೋಗಿ ಇಲಾಖೆ ಎಇಇ ಅರುಣಾಚಲಂ, ಎಇ ಲೋಕೇಶ್, ಸರ್ವೆ ಶಿರಸ್ತೆದಾರ್ ಮಂಜುನಾಥ್, ಪ್ರಶಾಂತ್, ಸಂತೋಷ್, ಪಿ.ಮಂಜುನಾಥರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.