ಬಾಗೇಪಲ್ಲಿ: ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕಆದಾಲತ್ನಲ್ಲಿ 1,366 ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ.ಮಂಜುನಾಥಾಚಾರಿ ತಿಳಿಸಿದರು.

ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಲೋಕ ಆದಾಲತ್ನಲ್ಲಿ ಉದ್ಘಾಟಿಸಿ ಮಾತನಾಡಿ, ಆದಾಲತ್ನಲ್ಲಿ 20 ಕ್ರಿಮಿನಲ್ ಪ್ರಕರಣ, 13 ಚೆಕ್ಬೌನ್ಸ್ ಪ್ರಕರಣ, ಬ್ಯಾಂಕ್ಗಳ 5 ಪ್ರಕರಣ ಸೇರಿದತೆ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ₹92,39,000 ಹಣಕಾಸಿನ ವಿವಾದವನ್ನು ಇತ್ಯರ್ಥ ಮಾಡಲಾಗಿದೆ ಎಂದು ತಿಳಿಸಿದರು.

ಕಕ್ಷಿದಾರರು ನ್ಯಾಯಾಲಯದ ಪ್ರಕರಣಗಳನ್ನು ಪರಸ್ಪರ ರಾಜೀ ಸಂಧಾನ ಮುಲಕ ಇತ್ಯರ್ಥ ಮಾಡಿಕೊಂಡರೆ, ಸಮಯ, ಹಣ, ಮಾನಸಿಕ ಒತ್ತಡಗಳಿಂದ ದೂರ ಇರಬಹುದು. ನ್ಯಾಯಾಂಗ ವ್ಯವಸ್ಥೆಯ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಲೋಕ ಆದಾಲತ್ ಮಾಡಲಾಗುತ್ತಿದೆ ಎಂದರು.

ಆದಾಲತ್ನಲ್ಲಿ ಉಚಿತವಾಗಿ, ತ್ವರಿತವಾಗಿ ನ್ಯಾಯ ಸಿಗುತ್ತದೆ. ಯಾವುದೇ ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಾ, ವಕೀಲರ ಸಂಘದ ಉಪಾಧ್ಯಕ್ಷ ಸಿ.ರವಿ, ಕಾರ್ಯದರ್ಶಿ ಜಯಪ್ಪ, ಹಿರಿಯ ವಕೀಲರಾದ ಅಪ್ಪಸ್ವಾಮಿ, ಅಲ್ಲಾಬಕಾಶ್, ಕರುಣಾಸಾಗರರೆಡ್ಡಿ, ಜೆ.ಎನ್.ನಂಜಪ್ಪ, ಫಯಾಜ್ ಅಹಮದ್, ನರಸಿಂಹರೆಡ್ಡಿ, ವಿ.ನಾರಾಯಣ, ಎ.ನಂಜುಂಡಪ್ಪ, ವೆಂಕಟನಾರಾಯಣ, ಚಂದ್ರಶೇಖರ್, ನಾಗಭೂಷಣನಾಯಕ್, ಬಾಲುನಾಯಕ್, ಬಾಲಸರಸ್ವತಿ, ಪ್ರಮೀಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.