ಬಾಗೇಪಲ್ಲಿ: ಪಟ್ಟಣದ ನ್ಯಾಷನಲ್ ಕಾಲೇಜು ಬಳಿ ಜನಸಾಮಾನ್ಯರ ಬಳಕೆಗಾಗಿ ಪುರಸಭೆ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಈ ಶೌಚಾಲಯಕ್ಕೆ ಈವರೆಗೆ ಚಾಲನೆ ನೀಡದ ಕಾರಣ, ಈ ಶೌಚಾಲಯವು ಜನರ ಬಳಕೆಗೆ ಬಾರದೆ ನಿರುಪಯುಕ್ತವಾಗಿದೆ. ಅಲ್ಲದೆ, ಜನಸಾಮಾನ್ಯರು ಸಾರ್ವಜನಿಕ ಶೌಚಾಲಯಗಳಿಲ್ಲದೆ ಬಯಲು ಶೌಚವನ್ನೇ ಅವಲಂಬಿಸಿದ್ದಾರೆ.

ತಾಲ್ಲೂಕಿನ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶದ ಕೊಡಿಕೊಂಡ, ಚೆಕ್ಪೋಸ್ಟ್, ಕೊಡೋರು ಸೇರಿ ವಿವಿಧ ಗ್ರಾಮಗಳ ಚಿಲ್ಲರೆ ಅಂಗಡಿಯವರು ದಿನಸಿ, ತರಕಾರಿ ಖರೀದಿಸಲು ಇಲ್ಲಿಗೆ ಬರುತ್ತಾರೆ. ಸರ್ಕಾರಿ ಕಚೇರಿ ಮತ್ತು ಬ್ಯಾಂಕ್, ನ್ಯಾಯಾಲಯ ಸೇರಿದಂತೆ ವಿವಿಧ ಕೆಲಸಗಳಿಗೆ ಪ್ರತಿದಿನ ನೂರಾರು ಮಂದಿ ತಾಲ್ಲೂಕು ಕೇಂದ್ರಕ್ಕೆ ಬರುತ್ತಾರೆ. ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿನಿಯರು ಸಹ ಸಂಚರಿಸುತ್ತಾರೆ. ತಾಲ್ಲೂಕಿನ ವಿವಿಧ ಗ್ರಾಮಗಳು ಮತ್ತು ತಾಂಡಗಳಿಂದ ಕೃಷಿ ಕೂಲಿಕಾರ್ಮಿಕರು ಕಟ್ಟಿಗೆ, ಇಟ್ಟಿಗೆ, ಸಿಮೆಂಟ್, ಮರ, ಹೊಲಗದ್ದೆಗಳ ಕೆಲಸಗಳಿಗೆ ಬರುತ್ತಾರೆ.

ಅದರೆ ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕು ಕೇಂದ್ರಕ್ಕೆ ಬಂದು ಹೋಗುವ ಸಾರ್ವಜನಿಕರು, ಕೃಷಿಕೂಲಿಕಾರ್ಮಿಕರು, ಮಹಿಳೆಯರು, ಶಾಲಾ, ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾರ್ವಜನಿಕ ಶೌಚಾಲಯದಿಂದ ವಂಚಿತರಾಗಿದ್ದಾರೆ.

ನ್ಯಾಷನಲ್ ಕಾಲೇಜಿನ ಪಕ್ಕದಲ್ಲಿ ಪುರಸಭೆ ನಿರ್ಮಿಸಿರುವ ಹೈಟೆಕ್ ಶೌಚಾಲಯವು ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಡಾ.ಎಚ್.ಎನ್.ವೃತ್ತ ಮತ್ತು ಪುರಸಭೆ ಕಚೇರಿ ಮುಂದೆ ಕಾಟಾಚಾರಕ್ಕೆ ಎಂಬಂತೆ ಸಾರ್ವಜನಿಕರ ಶೌಚಾಲಯ ನಿರ್ಮಿಸಲಾಗಿದೆ. ಪುರುಷರಿಗಷ್ಟೇ ಶೌಚಾಲಯ ಇದೆ. ಮಹಿಳೆಯರಿಗೆ ಇಲ್ಲ. ಸಣ್ಣದಾದ ಅಡ್ಡ ಗೋಡೆ, ಮೇಲ್ಛಾವಣೆ ಹಾಕಲಾಗಿದೆ. ಶೌಚಾಲಯದಲ್ಲಿ ಸಮರ್ಪಕವಾಗಿ ನೀರಿನ ವ್ಯವಸ್ಥೆ ಇಲ್ಲ. ಸೂಕ್ತ ನಿರ್ವಹಣೆ ಇಲ್ಲದ ಶೌಚಾಲಯಗಳು ದುರ್ನಾತ ಬೀರುತ್ತಿವೆ. ಆದರೆ, ಸಂಬಂಧಪಟ್ಟ ಪುರಸಭೆ ಮುಖ್ಯಾಧಿಕಾರಿ ಅಥವಾ ಆರೋಗ್ಯ ಶಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಜನರು ದೂರುತ್ತಾರೆ.

ಶೌಚಾಲಯಗಳು ಇಲ್ಲ: ತಾಲ್ಲೂಕು ಕೇಂದ್ರದಲ್ಲಿ ಸಾರ್ವಜನಿಕ ಶೌಚಾಲಯ, ಉದ್ಯಾನ, ರಸ್ತೆ, ಬೀದಿದೀಪ, ಸ್ವಚ್ಛತೆ ನಿರ್ವಹಣೆ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಕರ್ತವ್ಯ. ಆದರೆ, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗಲು ಸೂಕ್ತ ಶೌಚಾಲಯಗಳೇ ಇಲ್ಲ ಎಂದು ಕೂಲಿಕಾರ್ಮಿಕ ರಾಮಪ್ಪ ಅವಲತ್ತುಕೊಂಡರು.

ಬಯಲು ಶೌಚವೇ ಗತಿ: ನ್ಯಾಷನಲ್ ಕಾಲೇಜಿನ ಮುಂದೆ ಶೌಚಾಲಯ ನಿರ್ಮಿಸಿ ತಿಂಗಳುಗಳೇ ಆಗಿದೆ. ಆದರೆ, ಅದನ್ನು ಉದ್ಘಾಟಿಸಿಲ್ಲ. ಕಾಲೇಜಿನ ವಿದ್ಯಾರ್ಥಿಗಳು, ದೂರದ ಕಡೆಗಳಿಂದ ಬರುವ ಪುರುಷರು, ಮಹಿಳೆಯರು ಬಯಲು ಶೌಚವನ್ನೇ ಅವಲಂಬಿಸಿದ್ದಾರೆ ಎಂದು ಕಾಲೇಜಿನ ವಿದ್ಯಾರ್ಥಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಶೌಚಾಲಯ ಬೀಗ ತೆಗಿಸಿ: ನ್ಯಾಷನಲ್ ಕಾಲೇಜಿನ ಮುಂಭಾಗದ ಶೌಚಾಲಯವನ್ನು ಕೂಡಲೇ ಜನರ ಬಳಕೆಗೆ ಅವಕಾಶ ಮಾಡಿಕೊಡಬೇಕು. ಡಾ.ಎಚ್.ಎನ್ ವೃತ್ತ ಮತ್ತು ಪುರಸಭೆ ಮುಂದೆ ನಿರ್ಮಿಸಿದ ಶೌಚಾಲಯಗಳನ್ನು ಸ್ವಚ್ಛ ಮಾಡಿಸಬೇಕು. ಸಾರ್ವಜನಿಕ ಶೌಚಕ್ಕೆ ಅನುಕೂಲ ಮಾಡಬೇಕು ಎಂದು ಪುರಸಭೆ ಮಾಜಿ ಸದಸ್ಯೆ ಕಾಂತಮ್ಮಅಶ್ವಥ್ಥಪ್ಪ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-16-1464391457

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.