ಬಾಗೇಪಲ್ಲಿ: ಇಲ್ಲಿನ ಡಿವಿಜಿ ಮುಖ್ಯರಸ್ತೆ ಮತ್ತು ವಿವಿಧ ವಾರ್ಡ್ಗಳ ರಸ್ತೆಗಳ ಸ್ವಚ್ಛತೆಗಾಗಿ ಗುರುವಾರ ಬೆಳ್ಳಂಬೆಳಗ್ಗೆ ಪುರಸಭೆ ಮುಖ್ಯಾಧಿಕಾರಿ ಎಂ. ಶ್ರೀನಿವಾಸ್ ಮತ್ತು ಸ್ವಚ್ಛತಾ ಸಿಬ್ಬಂದಿ ಖುದ್ದು ರಸ್ತೆಗಿಳಿದರು.

ಈ ಸಂದರ್ಭದಲ್ಲಿ ಮಣ್ಣು, ಬ್ಯಾನರ್, ರಸ್ತೆ ಮತ್ತು ಚರಂಡಿಗೆ ಅಡ್ಡವಾಗಿದ್ದ ಕಲ್ಲು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

ಪಟ್ಟಣದ ಡಿವಿಜಿ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಮಣ್ಣು ಆವರಿಸಿಕೊಂಡು, ವಾಹನ ಸಂಚಾರದಿಂದ ಇಡೀ ರಸ್ತೆಯೇ ದೂಳುಮಯವಾಗುತ್ತಿತ್ತು. ವಾಹನಗಳ ಸವಾರರು ಮತ್ತು ಪಾದಚಾರಿಗಳಿಗೆ ದೂಳಿನಿಂದ ಭಾರಿ ಸಮಸ್ಯೆಯಾಗುತ್ತಿತ್ತು. ಹೀಗಾಗಿ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮತ್ತು ಆರೋಗ್ಯ ಶಾಖೆ ಅಧಿಕಾರಿಗಳು, ಸಿಬ್ಬಂದಿ ತಂಡ ಪೌರಕಾರ್ಮಿಕರ ಮೂಲಕ ರಸ್ತೆಯಲ್ಲಿನ ಮಣ್ಣನ್ನು ತೆರವುಗೊಳಿಸಿ, ಟ್ರ್ಯಾಕ್ಟರ್ ಮೂಲಕ ಬೇರೆಡೆ ವಿಲೇವಾರಿ ಮಾಡಲಾಯಿತು. ಮಣ್ಣು, ದೂಳಿನಿಂದ ಆವರಿಸಿದ ರಸ್ತೆಗಳನ್ನು ಸ್ವಚ್ಛ ಮಾಡಿಸಿದರು. ಇದರಿಂದಾಗಿ ವಾಹನಗಳ ಸವಾರರು ಮತ್ತು ಪಾದಚಾರಿಗಳು ದೂಳಿನಿಂದ ವಿಮುಕ್ತಿ ಪಡೆದರು.

ಪಟ್ಟಣದ ಡಾ.ಎಚ್.ಎನ್.ವೃತ್ತ, ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಮುಂಭಾಗದ ವೃತ್ತಗಳು ಮತ್ತು ಮುಖ್ಯರಸ್ತೆಯಲ್ಲಿ ಹಾಕಿದ ಬ್ಯಾನರ್ಗಳು, ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಯಿತು. ಚರಂಡಿ ಮತ್ತು ರಸ್ತೆಗಳಲ್ಲಿ ಸಂಗ್ರಹವಾಗಿದ್ದ ಕಸ, ಕಡ್ಡಿ, ತ್ಯಾಜ್ಯಗಳನ್ನು ಸ್ವಚ್ಛತೆ ಮಾಡಿಸಲಾಯಿತು. ಪಾದಚಾರಿ ರಸ್ತೆಯಲ್ಲಿ ಜನರ ಸಂಚಾರಕ್ಕೆ ತೊಂದರೆ ಆದ ಕಲ್ಲು, ಚಪ್ಪಡಿ ಮತ್ತು ತ್ಯಾಜ್ಯ ತೆರವು ಮಾಡಿಸಲಾಯಿತು.

ಪಟ್ಟಣದ ಮುಖ್ಯರಸ್ತೆಯಲ್ಲಿರುವ ಚಹಾ, ಕಾಫಿ ಅಂಗಡಿ, ಗೋಬಿ ಮಂಜೂರಿ, ಬೋಂಡಾ, ಪಾನಿಪುರಿ, ಮಸಾಲಪುರಿ, ಎಗ್ ಫ್ರೈಡ್ ರೈಸ್, ಬಿರಿಯಾನಿ ಅಂಗಡಿಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಂದ ಉತ್ಪತ್ತಿಯಾಗುವ ಕವರ್ಗಳು, ಲೋಟ ಮತ್ತು ಇನ್ನಿತರ ತ್ಯಾಜ್ಯಗಳನ್ನು ವಿಲೇವಾರಿ ಮಾಡದೆ, ರಸ್ತೆಯಲ್ಲೇ ಬಿಡುತ್ತಾರೆ. ಇದರಿಂದ ವಾಯುವಿಹಾರ ಸೇರಿದಂತೆ ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ಈ ಸಂಬಂಧ ಜನಸಾಮಾನ್ಯರು ಪುರಸಭೆ ಮುಖ್ಯಾಧಿಕಾರಿಗೆ ಮೌಖಿಕವಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ. ಶ್ರೀನಿವಾಸ್ ಅವರು ಪಟ್ಟಣದ ಡಿವಿಜಿ ಮುಖ್ಯರಸ್ತೆ, ಗೂಳೂರು, ನ್ಯಾಷನಲ್ ಕಾಲೇಜು ರಸ್ತೆ ತಮ್ಮ ಸಿಬ್ಬಂದಿಯೊಡನೆ ದ್ವಿಚಕ್ರ ವಾಹನದಲ್ಲಿ ರೌಂಡ್ಸ್ ಹಾಕಿದರು.

ರಸ್ತೆಯಲ್ಲಿ ಕಸ, ತ್ಯಾಜ್ಯಗಳನ್ನು ಬಿಸಾಡಿದ ಬೀದಿಬದಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ರಸ್ತೆ ಸ್ವಚ್ಛತೆಯಿಂದ ಇರಿಸದಿದ್ದರೆ ದಂಡ ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು.

ಪುರಸಭೆ ಆರೋಗ್ಯ ಶಾಖೆ ಮೇಲ್ವಿಚಾರಕ ಮಾರೇಗೌಡ, ಸಿಬ್ಬಂದಿ ಗಂಗೋತ್ರಿ, ಮಂಜುಳ, ಆಯೇಷಾ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-16-927601721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.