ಬಾಗೇಪಲ್ಲಿ: ಪಟ್ಟಣದ 3ನೇ ವಾರ್ಡ್ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಚ್.ಆರ್. ಸುಬ್ರಮಣ್ಯಂ, ಉಪನ್ಯಾಸಕಿ ಅನಿತಾ ದಂಪತಿ ಅವರು ಮನೆ ಗೃಹ ಪ್ರವೇಶವನ್ನು ಸಂವಿಧಾನದ ಪ್ರಸ್ತಾವನೆ ಓದಿನ ಮೂಲಕ ಮಾಡಿದರು.

ಅವರ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ವೇದ ಪಂಡಿತರ ಶಾಸ್ತ್ರೋಕ್ತದ ಮಂತ್ರ ಪಠಣಗಳಿರಲಿಲ್ಲ. ದೇವರ ಚಿತ್ರಗಳು, ಅಲಂಕಾರ ಇರಲಿಲ್ಲ. ಬದಲಿಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೂರ್ತಿಗಳನ್ನು ಇರಿಸಿ ಹೂವಿನ ಅಲಂಕಾರ ಮಾಡಲಾಗಿತ್ತು. ಗೃಹ ಪ್ರವೇಶಕ್ಕೆ ಬಂದ ಸಂಬಂಧಿಕರು, ಅತಿಥಿಗಳು, ಶಿಕ್ಷಕ, ಶಿಕ್ಷಕಿಯರಿಗೆ ಸಂವಿಧಾನದ ಪ್ರಸ್ತಾವನೆಯನ್ನು ಓದಿಸಲಾಯಿತು. ಶಿಕ್ಷಕ ಸುಬ್ರಮಣ್ಯಂ ಅವರು ಅತಿಥಿಗಳಿಗೆ ಸಂವಿಧಾನದ ಪ್ರಸ್ತಾವನೆಯ ಬರಹದ ಪ್ರತಿಗಳನ್ನು ನೀಡಿ, ಸತ್ಕರಿಸಿದರು.

ಇದೇ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕೋಡಿರಂಗಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ತರ ಕಾರ್ಯಕ್ರಮವಾದ ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಿ, ಮಾತನಾಡಿದರು.

ಮಾನವ ಸಮಾಜ ಇರುವವರೆಗೆ ಪುಸ್ತಕಗಳು ಪ್ರಪಂಚವನ್ನು ಆಳುತ್ತವೆ. ಹಾಗಾಗಿ, ಪ್ರತಿಯೊಬ್ಬರು ದಿನಕ್ಕೊಂದು ಪುಸ್ತಕ, ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಲಿಸಲಾಗಿದೆ. ಗ್ರಂಥಾಲಯಗಳನ್ನು ಮಾಡಿ ಮಹನೀಯರ ಪುಸ್ತಕಗಳನ್ನು ಓದಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿಯೊಬ್ಬರು ಶಾಂತಿ, ಪ್ರೀತಿ, ಸಹಬಾಳ್ವೆ ಮತ್ತು ಭಾತೃತ್ವ ಬೆಳೆಸಿಕೊಳ್ಳಬೇಕು. ಶಿಕ್ಷಕ ಸುಬ್ರಮಣ್ಯಂ ಅವರ ಗೃಹಪ್ರವೇಶ ವಿಶಿಷ್ಟ ರೀತಿಯಲ್ಲಿ ಆಗಿರುವುದು ಸಂತಸ ಮೂಡಿಸಿದೆ ಎಂದರು.

ಸಂವಿಧಾನ ಪ್ರಸ್ತಾವನೆ ಓದಿಸಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಮಾತನಾಡಿ, ಸಮಾಜದಲ್ಲಿ ಸಮನಾದ ಭಾತೃತ್ವ, ಸಮಾನತೆ, ಸಹಬಾಳ್ವೆ, ಸಹೋದರತೆ ಹಕ್ಕುಗಳನ್ನು ಅಂಬೇಡ್ಕರ್ ಕಲ್ಪಿಸಿದ್ದಾರೆ. ಸುಬ್ರಮಣ್ಯಂ ಹಾಗೂ ಉಪನ್ಯಾಸಕಿ ಅನಿತ ಸಂವಿಧಾನ ಪ್ರೇಮಿಯಾಗಿದ್ದಾರೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಪುಸ್ತಕದ ಜಿಲ್ಲಾ ಜಾಗೃತಿ ಸದಸ್ಯ ಎಚ್.ಆರ್.ಸುಬ್ರಮಣ್ಯಂ ಮಾತನಾಡಿ, ಬಾಲ್ಯದಿಂದ ಬುದ್ಧ, ಬಸವಣ್ಣ, ಅಂಬೇಡ್ಕರ್, ಭಗತ್ಸಿಂಗ್ ಅವರಂತಹ ಪ್ರಗತಿಪರ ಚಿಂತಕರ ಪುಸ್ತಕಗಳನ್ನು ಓದಿದ್ದೇನೆ. ಇದೀಗ ಬುದ್ಧ, ಬಸವಣ್ಣ, ಅಂಬೇಡ್ಕರ್ ಅನುಯಾಯಿ ಆಗಿದ್ದೇನೆ. ವೇದಪಂಡಿತರ ಮಂತ್ರಗಳ ಪಠಣೆ, ಯಾವುದೇ ಶಾಸ್ತ್ರಗಳಿಲ್ಲದೆ, ಸಂವಿಧಾನ ಪ್ರಸ್ತಾವನೆ ಓದುವುದು ಮತ್ತು ಬುದ್ದ, ಬಸವಣ್ಣ, ಅಂಬೇಡ್ಕರ್ ಮೂರ್ತಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೃಹ ಪ್ರವೇಶ ಮಾಡಲಾಗಿದೆ ಎಂದರು.

ಬೌದ್ಧ ಬಿಕ್ಕು ಸುಗತ ಪಾಲ ಬಂತೇಜಿ ಅವರು ನೆರೆದವರಿಗೆ ತಿಸರಣ ಮತ್ತು ಪಂಚಶೀಲ ತತ್ವ ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.