ಕವುಚಿಟ್ಟ ಕೋಳಿಗಳ ಕೂಗಿಗೆ ಪಂಜರ ಬೆಚ್ಚಿದ್ದು ನೋವುಗಳ ನೇಯ್ದ ಲಾಳಿಗಳು ತೊಳಲಾಡಿದ್ದು ಗೆಬರಲು ಬಂದ ರಣಹದ್ದುಗಳನ್ನೇ ಬೇಟೆಯಾಡಿದ ಗುಬ್ಬಚ್ಚಿಗಳು ಆಗಸಕೆ ರೆಕ್ಕೆ ಬಡಿದದ್ದು ಎಲ್ಲೆಲ್ಲೂ ಸದ್ದು ಸದ್ದು; ಅದೆಂತಹ ಮಹಾ ಘನ ಸದ್ದೆಂದರೆ ಹಸಿ ಮಡಕೆಯ ಮಣ್ಣು ಚಿಗುರುವ ಸದ್ದು!
ಎದುರಿದ್ದ ದಾರಿ ಹಿಂದುಮುಂದಾಯಿತು ಕಣ್ಣೆವೆಗೆ ತಾಗಿದ ಗುರಿ ಮುಗ್ಗರಿಸಿ ಬಿದ್ದಿತು ನೋಟ ನೆಟ್ಟಷ್ಟೂ ಬಟಾಬಯಲು ಮರುಹುಟ್ಟು ಹಾಕಿತು ಕುಲ ಹೊಲ ಸಕಲ ಕೆಟ್ಟಷ್ಟೂ ಹೊಸ ಸೃಷ್ಟಿಯಾಯಿತು ಹೀಗಾಯಿತು ಹಾಗಾಯಿತು ಲಗಾಯತ್ತಿನಿಂದಲೂ ಕನಸುಗಳು ಎತ್ತರಕ್ಕೆ ಜಿಗಿದು ಧುತ್ತರಕ್ಕೆ ಇಳಿದು ಇಲ್ಲದಂತೆಯೇ ಇದ್ದು ಇರುವಂತೆಯೇ ಇಲ್ಲವಾಯಿತು!