ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಭಗವದ್ಗೀತೆ ನೈತಿಕ ಶಕ್ತಿಯ ಪ್ರತೀಕ: ನಟ ಸಾಯಿಕುಮಾರ್

25ನೇ ವರ್ಷದ ಗೀತಾ ಜಯಂತಿ ಸಂಭ್ರಮ
Last Updated 4 ಡಿಸೆಂಬರ್ 2022, 7:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭಗವದ್ಗೀತೆ ಹಿಂದೂಗಳನೈತಿಕ ಶಕ್ತಿಯ ಪ್ರತೀಕವಾಗಿದೆ. ದ್ವಾಪರ ಯುಗದಲ್ಲಿಯೇ ನಾಗರಿಕ ಸಮಾಜಕ್ಕೆ ಉದಾತ್ತ ಚಿಂತನೆಗಳನ್ನು ಕೃಷ್ಣ ಪರಮಾತ್ಮ ಸಾರಿರುವುದನ್ನು ಕಾಣಬಹುದು ಎಂದು ನಟ ಸಾಯಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಹುಡ್ಯ ಗ್ರಾಮದ ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ನಡೆದ 25ನೇ ವರ್ಷದ ಗೀತಾ ಜಯಂತಿ, ಛದ್ಮವೇಷ, ಭಗವದ್ಗೀತೆ ಕಂಠ ಪಾಠ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ, ತಂದೆ, ಗುರು, ದೈವ ಜೀವನದಲ್ಲಿ ತುಂಬಾ ಮುಖ್ಯ. ತಾಯಿ, ತಂದೆಯನ್ನು ಪ್ರೀತಿಸಬೇಕು, ಗುರುವನ್ನು ಪೂಜಿಸಬೇಕು, ದೇವರನ್ನು ಪ್ರಾರ್ಥಿಸಬೇಕು. ಇಷ್ಟಾದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಸಲಹೆ ನೀಡಿದರು.

ಮಾನವ ಜಗತ್ತಿನ ಮೇಲಿನ ಕರುಣೆಯಿಂದ ಕೃಷ್ಣನು ಅವರ ಬದುಕಿಗೆ ಅವಶ್ಯ ಎನಿಸುವ ತತ್ವವನ್ನು ಸಾಮಾನ್ಯರೂ ಅರಿಯುವ ರೀತಿ ಸರಳ ಭಾಷೆಯಲ್ಲಿ ಭಗವದ್ಗೀತೆ ರೂಪದಲ್ಲಿ ನೀಡಿದ್ದಾನೆ. ಇದು ಎಲ್ಲ ಉಪನಿಷತ್ತುಗಳ ಸಾರವಾಗಿದೆ ಎಂದು ಹೇಳಿದರು.

ಪತ್ರಕರ್ತ ಟಿ.ಎಸ್. ನಾಗೇಂದ್ರಬಾಬು,ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಮಚಂದ್ರರೆಡ್ಡಿ ಮಾತನಾಡಿದರು.ಮಕ್ಕಳು ಕೃಷ್ಣ, ರಾಧೆಯ ವೇಷಧರಿಸಿ ಶ್ಲೋಕಗಳನ್ನು ಪಠಿಸಿದರು. ಮುಖಂಡರಾದ ರಾಮರೆಡ್ಡಿ, ವಿಕ್ರಾಂತ್, ಸತ್ಯನಾರಾಯಣರಾವ್ ಅವರನ್ನು ಸನ್ಮಾನಿಸಲಾಯಿತು.

ಶ್ಯಾಮಲಾ ರಾಮಚಂದ್ರರೆಡ್ಡಿ, ಲಕ್ಷ್ಮಮ್ಮ ರಾಮಚಂದ್ರರೆಡ್ಡಿ, ರಕ್ಷಿತ್‌ರೆಡ್ಡಿ, ಮಂಚನಬಲೆ ಶ್ರೀನಿವಾಸ್, ಪ್ರಾಂಶುಪಾಲರಾದ ನಟರಾಜ್, ಎಂ. ಪ್ರಸಾದ್, ಚದಲಪುರ ನಾರಾಯಣ್, ಎಲೆಹಳ್ಳಿ ರಾಮಕೃಷ್ಣ, ಜಯಗೋಪಿ, ರಂಜಿತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT