ನೀರಿನ ಅಭಾವದಿಂದ ದ್ರಾಕ್ಷಿ ಬೆಳೆ ನಷ್ಟವಾದ ಕಾರಣ ದ್ರಾಕ್ಷಿ ತೆಗೆದು ಎರಡೂವರೆ ಎಕರೆ ಜಮೀನಿನಲ್ಲಿ ಹಾಗಲಕಾಯಿ ಕೃಷಿಗೆ ಲಕ್ಷ್ಮಿಪತಿ ಮುಂದಾಗಿದ್ದರು. ಸುಮಾರು ₹2.50 ಲಕ್ಷ ಖರ್ಚುಮಾಡಿ ಎರಡು ತಿಂಗಳ ಹಿಂದೆ ನಾಟಿ ಮಾಡಿದ್ದರು. ಇದೀಗ ಉತ್ತಮ ಫಸಲು ಬಿಟ್ಟಿತ್ತು, ಬೆಲೆಯೂ ಉತ್ತಮವಾಗಿರುವುದರಿಂದ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದರು.